Good Luck Tips: ರಾತ್ರಿ ಮಾಡುವ ಈ ತಂತ್ರಗಳಿಂದ ದುರಾದೃಷ್ಟ ದೂರವಾಗಿ ಅದೃಷ್ಟ ಹುಡುಕಿ ಬರುತ್ತದೆ!

Good Luck Tips: ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳು ಮತ್ತು ತಂತ್ರಗಳ ಬಗ್ಗೆ ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಇಂದು ನಾವು ಅಂತಹ ಕೆಲವು ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ.

Written by - Puttaraj K Alur | Last Updated : Apr 14, 2023, 01:05 PM IST
  • ರಾತ್ರಿ ಮಲಗುವ ಮುನ್ನ ಮನೆಯ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಬೇಕು
  • ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಮನೆಯನ್ನು ಗುಡಿಸಬೇಡಿ
  • ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿದೇವಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ
Good Luck Tips: ರಾತ್ರಿ ಮಾಡುವ ಈ ತಂತ್ರಗಳಿಂದ ದುರಾದೃಷ್ಟ ದೂರವಾಗಿ ಅದೃಷ್ಟ ಹುಡುಕಿ ಬರುತ್ತದೆ! title=
Good Luck Tips

ನವದೆಹಲಿ: ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಒಳ್ಳೆಯ ಜೀವನ ಬಯಸುತ್ತಾನೆ. ಇದಕ್ಕಾಗಿ ಆತ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಜೊತೆಗೆ ದೇವರಿಗೆ ಭಕ್ತಿಯಿಂದ ಪೂಜೆಯನ್ನೂ ಮಾಡುತ್ತಾನೆ. ಇದರ ಹೊರತಾಗಿಯೂ ಬಹುತೇಕರಿಗೆ ಉತ್ತಮ ಮತ್ತು ಆರಾಮದಾಯಕ ಜೀವನ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನೀವು ಇದರಿಂದ ನಿರುತ್ಸಾಹಗೊಳ್ಳುವ ಅವಶ್ಯಕತೆಯಿಲ್ಲ. ಇಂದು ನಾವು ಕೆಲವು ಜ್ಯೋತಿಷ್ಯ ಕ್ರಮಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ರಾತ್ರಿ ಮಲಗುವ ಮೊದಲು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯು ತನ್ನ ಎಲ್ಲಾ ಸಮಸ್ಯೆಗಳಿಂದ ಮುಕ್ತಿಹೊಂದಬಹುದು. ಆತನ ಹಣದ ಸಂಬಂಧಿತ ಸಮಸ್ಯೆಗಳು ಸಹ ಕೊನೆಗೊಳ್ಳುತ್ತವೆ.

ನೀರಿನ ತಂತ್ರ!

ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಒಂದು ಲೋಟ ನೀರು ಇಟ್ಟು ಮಲಗಿ. ಬೆಳಗ್ಗೆ ಎದ್ದ ನಂತರ ಈ ನೀರನ್ನು ಮನೆಯ ಹೊರಗೆ ಅಥವಾ ಸಸ್ಯಕ್ಕೆ ಹಾಕಿರಿ. ಈ ಪರಿಹಾರ ಮಾಡುವುದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ. ಅದೇ ರೀತಿ ನಿಮಗೆ ಬೀಳುವ ಕೆಟ್ಟ ಕನಸುಗಳನ್ನು ದೂರವಾಗುತ್ತವೆ. ಮಲಗುವ ಮುನ್ನ ಮನೆಯ ಅಡುಗೆ ಕೋಣೆ ಸ್ವಚ್ಛಗೊಳಿಸಲು ಮರೆಯದಿರಿ. ಅಡುಗೆ ಮನೆಯಲ್ಲಿ ತೊಳೆಯದ ಪಾತ್ರೆಗಳನ್ನು ಇಡಬೇಡಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ.

ಇದನ್ನೂ ಓದಿ: Surya Grahana 2023 : ಮುಂಬರುವ ಸೂರ್ಯ ಗ್ರಹಣ ವೇಳೆ ಈ 3 ರಾಶಿಯವರಿಗೆ ಅಶುಭ..! ಜಾಗೃತರಾಗಿರಿ

ಪೊರಕೆಯ ತಂತ್ರ!

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಮನೆಯನ್ನು ಗುಡಿಸಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ. ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ದುರ್ಗಾ ಸಪ್ತಶತಿಯನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಯಾವುದೇ ಒಬ್ಬ ವ್ಯಕ್ತಿ ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಆತನ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.

ಇದನ್ನೂ ಓದಿ: Surya Gochar 2023: ಕೆಲವೇ ಗಂಟೆಗಳಲ್ಲಿ 'ಬಲಶಾಲಿ' ಸ್ಥಿತಿಗೆ ಸೂರ್ಯನ ಪ್ರವೇಶ, ಈ ಜನರ ಮೇಲೆ ಅಪಾರ ಧನವೃಷ್ಟಿ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News