ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ವ್ಯಕ್ತಿಯ ಭವಿಷ್ಯವು ಅವನು ಹುಟ್ಟಿದ ಸಮಯವನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜನ್ಮ ಸಮಯಕ್ಕೆ ಅನುಗುಣವಾಗಿ, ರಾಶಿ ಚಕ್ರ ಚಿಹ್ನೆ (Zodiac sign) ನಿರ್ಧಾರವಾಗುತ್ತದೆ. ಈ ರಾಶಿಚಕ್ರವು ವ್ಯಕ್ತಿಯ ವ್ಯಕ್ತಿತ್ವ, ಜೀವನಶೈಲಿ (Lifestyle) ಮತ್ತು ಅನೇಕ ಪ್ರಮುಖ ವಿಷಯಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, 4 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಜೀವನದುದ್ದಕ್ಕೂ ಲಕ್ಷ್ಮೀ ದೇವಿಯ (blessings of godess Lakshmi) ಆಶೀರ್ವಾದವಿರುತ್ತದೆ. ಇದರಿಂದಾಗಿ ಅವರ ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದೇ ಇಲ್ಲ.
ವೃಷಭ ರಾಶಿ (Taurus) :
ಈ ರಾಶಿಯ ಅಧಿಪತಿ ಶುಕ್ರ (Venus). ಈ ಕಾರಣದಿಂದಾಗಿ ಈ ರಾಶಿಚಕ್ರದ ಜನರ ಮೇಲೆ ಶುಕ್ರನ ಪ್ರಭಾವ ಹೆಚ್ಚಿರುತ್ತದೆ. ಜ್ಯೋತಿಷ್ಯದಲ್ಲಿ (Astrology), ಶುಕ್ರನನ್ನು ಸಂಪತ್ತು, ಐಷಾರಾಮಿ ಜೀವನ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಜನರು ಯಾವಾಗಲೂ ಸಂಪತ್ತಿನಿಂದ ತುಂಬಿರುತ್ತಾರೆ. ಹಣದ ವಿಷಯಗಳಲ್ಲಿಯೂ ಈ ರಾಶಿಚಕ್ರದ ಜನರು ಅದೃಷ್ಟವಂತರೇ. ಯಾವ ಕೆಲಸಕ್ಕೆ ಕೈ ಹಾಕಿದರೂ ಈ ರಾಶಿಯವರು ಲಾಭವೇ ಆಗಲಿದೆ.
ಇದನ್ನೂ ಓದಿ : Perfect Husband: ಪರ್ಫೆಕ್ಟ್ ಪತಿ ಎಂದು ಸಾಬೀತುಪಡಿಸುತ್ತಾರೆ ಈ 3 ರಾಶಿಯ ಹುಡುಗರು
ಕರ್ಕ (Cancer):
ಕರ್ಕ ರಾಶಿಯವರು (Cancer) ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಇದರೊಂದಿಗೆ ಈ ರಾಶಿಯ ಜನರ ಕಣ್ಣು ಐಷಾರಾಮಿ ವಸ್ತುಗಳ ಮೇಲೆಯೇ ಇರುತ್ತದೆ. ಈ ರಾಶಿಯವರು (Zodiac sign) ಕಷ್ಟಪಟ್ಟು ದುಡಿಯುವುದಕ್ಕೂ ಹಿಂದೆ ಮುಂದೆ ಯೋಚಿಸುವುದಿಲ್ಲ. ಈ ಗುಣದ ಕಾರಣದಿಂದಾಗಿ, ಅವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಇದಲ್ಲದೇ ಈ ರಾಶಿಯವರಿಗೆ ಅದೃಷ್ಟದ ಬೆಂಬಲವೂ ಸಿಗುತ್ತದೆ.
ಸಿಂಹ (Leo) :
ಈ ರಾಶಿಚಕ್ರದ ಜನರು ನಾಯಕತ್ವದ ವಿಚಾರದಲ್ಲಿ ಶ್ರೀಮಂತರಾಗಿರುತ್ತಾರೆ. ಅಲ್ಲದೆ, ಯಾವುದೇ ಕೆಲಸವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಲ್ಲದೆ, ಅವರು ಐಷಾರಾಮಿ ವಸ್ತುಗಳನ್ನು ಪಡೆಯಲು ತುಂಬಾ ಶ್ರಮಿಸುತ್ತಾರೆ. ಈ ಕಠಿಣ ಪರಿಶ್ರಮದ ಫಲವಾಗಿ, ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.
ಇದನ್ನೂ ಓದಿ : Weekly Love Horoscope: ವ್ಯಾಲೆಂಟೈನ್ಸ್ ಡೇ ವೀಕ್: ಈ ವಾರ ನಿಮ್ಮ ಪ್ರೀತಿಯ ಜಾತಕ ಹೇಗಿದೆ
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯ (Scorpio) ಜನರನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಜನರು ಭೌತಿಕ ಸಂತೋಷದ ಬಗ್ಗೆ ಇವರಿಗೆ ಬಹಳ ಮೋಹವಿರುತ್ತದೆ. ಇವರು ಯಾವುದೇ ವಸ್ತುವನ್ನು ಒಮ್ಮೆ ಇಷ್ಟಪಟ್ಟರೆ, ಅದನ್ನು ಪಡೆಯುವ ಸಲುವಾಗಿ ಬಹಳ ಶ್ರಮಿಸುತ್ತಾರೆ. ಶ್ರೀಮಂತರಾಗಲು ಈ ರಾಶಿಚಕ್ರದ ಜನರು ಬೆವರು ಹರಿಸಿ ದುಡಿಯುತ್ತಾರೆ. ಕಠಿಣ ಪರಿಶ್ರಮದ ಗುಣಗಳಿಂದಾಗಿ, ಈ ರಾಶಿಯ (Lucky zodiac sign) ಜನರು ಹಣದ ವಿಷಯದಲ್ಲಿ ಇತರರಿಗಿಂತ ಮುಂದಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.