Vastu Tips: ಮನೆಯಲ್ಲಿ ಇರಿಸುವ ಈ ವಸ್ತುಗಳಿಂದ ದುರದೃಷ್ಟ ಹೆಚ್ಚಾಗುತ್ತದೆ, ಏನೆಂದು ತಿಳಿಯಿರಿ

ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಗಾಜು, ಮುರಿದ ಕನ್ನಡಿ ಅಥವಾ ಕನ್ನಡಕ ಇತ್ಯಾದಿಗಳನ್ನು ಮನೆಯಲ್ಲಿ ಇಡಬಾರದು. ಹಾಗೆಯೇ ಒಡೆದ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.

Written by - Puttaraj K Alur | Last Updated : Feb 23, 2022, 04:23 PM IST
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಕೆಟ್ಟ ಶಕುನವಂತೆ
  • ಕಾಗೆ, ರಣಹದ್ದು, ಪಾರಿವಾಳ, ಬಾವಲಿ, ಹಂದಿ, ಹಾವು, ಕತ್ತೆ, ಗೂಬೆ ಚಿತ್ರಗಳನ್ನು ಮನೆಯಲ್ಲಿಡಬಾರದು
  • ವಾಸ್ತು ಶಾಸ್ತ್ರದ ಪ್ರಕಾರ ಯುದ್ಧದ ಚಿತ್ರಗಳನ್ನು ಮನೆಯಲ್ಲಿ ಇಡಬಾರದು
Vastu Tips: ಮನೆಯಲ್ಲಿ ಇರಿಸುವ ಈ ವಸ್ತುಗಳಿಂದ ದುರದೃಷ್ಟ ಹೆಚ್ಚಾಗುತ್ತದೆ, ಏನೆಂದು ತಿಳಿಯಿರಿ title=
ವಾಸ್ತುಶಾಸ್ತ್ರದಲ್ಲಿ ಮಹತ್ವದ ವಿಷಯಗಳ ಬಗ್ಗೆ ತಿಳಿಸಲಾಗಿದೆ

ನವದೆಹಲಿ: ಮನೆಯ ಅಡಿಪಾಯ ಹಾಕುವುದರಿಂದ ಹಿಡಿದು ಗೃಹಪ್ರವೇಶದವರೆಗೆ ವಾಸ್ತು ಶಾಸ್ತ್ರ(Vastu Shastra)ದಲ್ಲಿ ವಿಶೇಷವಾದ ವಿಷಯಗಳ ಬಗ್ಗೆ ಹೇಳಲಾಗಿದೆ. ಇದು ಕುಟುಂಬದ ಸಂತೋಷ ಮತ್ತು ಸಮೃದ್ಧಿಗೆ ನೇರವಾಗಿ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಕೆಟ್ಟ ಶಕುನವಂತೆ. ಮನೆಯಲ್ಲಿ ಇರಿಸುವ ಈ ವಸ್ತುಗಳು ದುರದೃಷ್ಟಕ್ಕೆ ಕಾರಣವಾಗುತ್ತವಂತೆ. ಅಲ್ಲದೆ ಇವುಗಳಿಂದ ಮನೆಯಲ್ಲಿ ನಕಾರಾತ್ಮಕತೆಯ ವಾತಾವರಣ ನಿರ್ಮಾಣವಾಗುತ್ತದೆ. ಇದಲ್ಲದೆ ನಿಮ್ಮ ಸುಖ ಶಾಂತಿಯನ್ನು ಕಿತ್ತುಕೊಳ್ಳುತ್ತದಂತೆ. ಹಾಗಾದರೆ ಆ ವಸ್ತುಗಳ ಯಾವವು ಎಂದು ತಿಳಿದುಕೊಳ್ಳಿರಿ.  

ಮುರಿದ ಕನ್ನಡಿ

ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಗಾಜು, ಮುರಿದ ಕನ್ನಡಿ ಅಥವಾ ಕನ್ನಡಕ ಇತ್ಯಾದಿಗಳನ್ನು ಮನೆಯಲ್ಲಿ(Home Vastu) ಇಡಬಾರದು. ಹಾಗೆಯೇ ಒಡೆದ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.

ಕೆಲ ಪ್ರಾಣಿಗಳ ಚಿತ್ರ ಅಥವಾ ಛಾಯಾಚಿತ್ರ

ಕಾಗೆ, ರಣಹದ್ದು, ಪಾರಿವಾಳ, ಬಾವಲಿ, ಹಂದಿ, ಹಾವು, ಕತ್ತೆ, ಗೂಬೆ ಮುಂತಾದ ಯಾವುದೇ ಪಕ್ಷಿಗಳ ಅಥವಾ ಪ್ರಾಣಿಗಳ ಚಿತ್ರಗಳು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ದಂಪತಿ ಮಲಗುವ ಕೋಣೆಯಲ್ಲಿ ಪ್ರಾಣಿ, ಪಕ್ಷಿಗಳ ಯಾವುದೇ ಪೇಂಟಿಂಗ್(Paintings In House) ಇರಬಾರದು.

ಇದನ್ನೂ ಓದಿ: ಈ ದಿನ ಪೊರಕೆ ಖರೀದಿಸಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳಂತೆ ಮಹಾಲಕ್ಷ್ಮೀ

ತಾಜ್ ಮಹಲ್ ಚಿತ್ರ

ತಾಜ್ ಮಹಲ್ ಒಂದು ಸಮಾಧಿಯಾಗಿದೆ ಮತ್ತು ಇದನ್ನು ಸಾವಿನ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ಮನೆಯೊಳಗೆ ಎಲ್ಲೂ ತಾಜ್ ಮಹಲ್ ನ ಚಿತ್ರ ಅಥವಾ ಶೋಪೀಸ್ ಇರಬಾರದು ಎಂದು ಹೇಳಲಾಗಿದೆ.

ದೈತ್ಯಾಕಾರದ ಪ್ರತಿಮೆ

ಲೋಹ ಅಥವಾ ಮರದಿಂದ ಮಾಡಿದ ಯಾವುದೇ ರೀತಿಯ ಭೂತದ ವಿಗ್ರಹ ಅಥವಾ ಚಿತ್ರವನ್ನು ಮನೆಯಲ್ಲಿ(Vastu In House) ಇಡಬಾರದು. ಅನೇಕ ಬಾರಿ ಜನರು ಮನೆಯಲ್ಲಿ ಸಿಂಹ, ಹುಲಿ, ಕರಡಿ, ತೋಳ ಮತ್ತು ನರಿಗಳಂತಹ ಕಾಡು ಪ್ರಾಣಿಗಳ ಚಿತ್ರಗಳನ್ನು ಹಾಕುತ್ತಾರೆ. ವಾಸ್ತುವಿನ ದೃಷ್ಟಿಯಿಂದ ಇದು ಸರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಡು ಪ್ರಾಣಿಗಳ ಚಿತ್ರ ಇರಬಾರದು.

ಯುದ್ಧದ ಚಿತ್ರಗಳು

ವಾಸ್ತು ಶಾಸ್ತ್ರದ ಪ್ರಕಾರ ಯುದ್ಧದ ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ಮನೆಯಲ್ಲಿ ಮಹಾಭಾರತ(Mahabharat)ದ ಚಿತ್ರಗಳನ್ನು ಹಾಕುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಇಂತಹ ಚಿತ್ರಗಳನ್ನು ಮನೆಯಲ್ಲಿ ಹಾಕುವುದರಿಂದ ನಕಾರಾತ್ಮಕ ಭಾವನೆ ಉಂಟಾಗುತ್ತದೆ. ಇದರೊಂದಿಗೆ ಕುಟುಂಬ ಸದಸ್ಯರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: Brihaspati Transit: ಶೀಘ್ರದಲ್ಲೇ ಬೃಹಸ್ಪತಿ ರಾಶಿ ಪರಿವರ್ತನೆ; ಈ 5 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಮುಳ್ಳಿನ ಗಿಡಗಳು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಇಡಬಾರದು. ಗುಲಾಬಿಗಳನ್ನು ಹೊರತುಪಡಿಸಿ ಉಳಿದೆಲ್ಲ ಮುಳ್ಳಿನ ಗಿಡಗಳನ್ನು ಮನೆಯ ಹೊರಗೆ ಇಡಬೇಕು.

ಇಂತಹ ಚಿತ್ರಗಳಿಂದ ನಕಾರಾತ್ಮಕ ಶಕ್ತಿ 

ವಾಸ್ತು ಪ್ರಕಾರ ಕೆಲವು ರೀತಿಯ ಫೋಟೋಗಳನ್ನು ಸಹ ಮನೆಯಲ್ಲಿ ಇಡಬಾರದು. ಉದಾಹರಣೆಗೆ ನಗ್ನತೆಯ ಚಿತ್ರಗಳು, ಬೇಟೆಯಾಡುವ ದೃಶ್ಯಗಳು, ಜನರ ಅಳುವ ಚಿತ್ರಗಳು, ಹೂವುಗಳಿಲ್ಲದ ಮರಗಳು, ಮುಳುಗುವ ದೋಣಿಗಳು, ಬಂಧನದಲ್ಲಿಟ್ಟಿರುವ ಆನೆಗಳು, ಇಂದ್ರಜಾಲ ಇತ್ಯಾದಿಗಳನ್ನು ಸಹ ಮನೆಯಲ್ಲಿ ಇಡಬಾರದು ಎಂದು ಹೇಳಲಾಗಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News