ಮನೆಯಲ್ಲಿ ನಾಯಿ ಸಾಕಿದ್ದರೆ ಈ ಗಿಡಗಳನ್ನು ನೆಡಬಾರದು! ಶ್ವಾನದ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಈ ಸಸ್ಯಗಳು

Dog Care Tips: ಮನೆಯಲ್ಲಿ ನಾಯಿಗಳಿದ್ದರೆ, ಮನೆಯಲ್ಲಿ ಅಥವಾ ಮನೆಯ ಸುತ್ತ ಮುತ್ತ ಯಾವ ಸಸ್ಯಗಳನ್ನು ನೆಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ.

Written by - Ranjitha R K | Last Updated : Feb 20, 2024, 03:21 PM IST
  • ಮನೆಯಲ್ಲಿ ಅಥವಾ ಮನೆಯ ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ.
  • ಸಸ್ಯಗಳು ಕಣ್ಣ ಸುತ್ತ ಇದ್ದರೆ ಒತ್ತಡ ಕಡಿಮೆಯಾಗುತ್ತದೆ
  • ಒತ್ತಡದಿಂದ ಎದುರಾಗಬಹುದಾದ ಸಮಸ್ಯೆಗಳು ಕಡಿಮೆಯಾಗುತ್ತದೆ.
ಮನೆಯಲ್ಲಿ ನಾಯಿ ಸಾಕಿದ್ದರೆ ಈ ಗಿಡಗಳನ್ನು ನೆಡಬಾರದು! ಶ್ವಾನದ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಈ ಸಸ್ಯಗಳು  title=

Dog Care Tips : ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮತ್ತು ನೈಸರ್ಗಿಕ ಕಂಪನ್ನು ಪಸರಿಸಲು ಮನೆಯಲ್ಲಿ ಅಥವಾ ಮನೆಯ ಸುತ್ತಲೂ  ಗಿಡಗಳನ್ನು ನೆಡಲಾಗುತ್ತದೆ. ಇದು  ಗಾಳಿಯನ್ನು ಶುದ್ಧೀಕರಿಸುತ್ತದೆ.ಇದಲ್ಲದೆ, ಹಸಿರು ಸಸ್ಯಗಳು ಕಣ್ಣ ಸುತ್ತ ಇದ್ದರೆ  ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.ಇದರಿಂದ ಒತ್ತಡದಿಂದ ಎದುರಾಗಬಹುದಾದ ಸಮಸ್ಯೆಗಳು ಕಡಿಮೆಯಾಗುತ್ತದೆ. 

ಆದರೆ, ಮನೆಯಲ್ಲಿ ನಾಯಿಗಳಿದ್ದರೆ, ಮನೆಯಲ್ಲಿ ಅಥವಾ ಮನೆಯ ಸುತ್ತ ಮುತ್ತ ಯಾವ ಸಸ್ಯಗಳನ್ನು ನೆಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ತುಂಬಾ ಸುಂದರವಾಗಿ ಕಾಣುವ ಕೆಲವು ಸಸ್ಯಗಳು ನಾಯಿಗಳ ಹೊಟ್ಟೆಗೆ ವಿಷಕಾರಿಯಾಗಿರಬಹುದು.  ಅದನ್ನು ತಿನ್ನುವುದರಿಂದ ನಾಯಿಯ ಆರೋಗ್ಯ ಹದಗೆಡಬಹುದು. 

ಇದನ್ನೂ ಓದಿ : White Hair Remedies: ಕೇವಲ ಈ 3 ಪದಾರ್ಥಗಳನ್ನು ಬಳಸಿ ಬಿಳಿ ಕೂದಲಿಗೆ ಹೇಳಿ ಗುಡ್ ಬೈ!

ಅಲೋವೆರಾ :
ಅಲೋವೆರಾ ಒಂದು ಔಷಧೀಯ ಸಸ್ಯವಾಗಿದೆ. ಇದು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಈ ಸಸ್ಯ ಅನೇಕ ಪೋಷಕಾಂಶಗಳನ್ನು ಹೊಂದಿದ್ದರೂ ನಾಯಿಗಳ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಇದರಲ್ಲಿ ನಾಯಿಗಳ ಆರೋಗ್ಯಕ್ಕೆ  ವಿಷಕಾರಿಯಾಗಿ ಪರಿಣಮಿಸುವ ಸಪೋನಿನ್ ಮತ್ತು ಆಂಥ್ರಾಕ್ವಿನೋನ್ ಎಂಬ ಎರಡು  ಅಂಶಗಳು ಅಡಗಿರುತ್ತವೆ. ಹಾಗಾಗಿ ನಾಯಿಯೂ ಅಪಿತಪ್ಪಿ ಕೂಡಾ ಆಲೋವಿರಾವನ್ನು ಅಗಿದರೆ  ಅನಾರೋಗ್ಯಕ್ಕೆ ಒಳಗಾಗಬಹುದು.

ಟ್ಯುಲಿಪ್ :
ವರ್ಣರಂಜಿತ ಟ್ಯುಲಿಪ್ ಹೂವುಗಳಿಂದ ನಿಮ್ಮ ಮನೆ ಸುಂದರವಾಗಿ ಕಂಗೊಳಿಸಬಹುದು.  ಆದರೆ ನಿಮ್ಮ ಮನೆಯಲ್ಲಿ ನಾಯಿ ಇದ್ದರೆ ಈ ಗಿಡವನ್ನು ನೆಡುವ ಮೊದಲು ಒಮ್ಮೆ ಯೋಚಿಸಿ. ಇದು ಟುಲಿಪಾಲಿನ್ ಎ ಮತ್ತು ಬಿ ಅನ್ನು ಹೊಂದಿದ್ದು, ನಾಯಿಗಳಿಗೆ ವಿಷಕಾರಿಯಾಗಿದೆ.

ಇದನ್ನೂ ಓದಿ : ಅರಶಿನವನ್ನು ಈ ರೀತಿ ಬಳಸಿದರೆ ಒಂದೇ ವಾರದಲ್ಲಿ ತೂಕ ಇಳಿಯುವುದು ಗ್ಯಾರಂಟಿ ! 

ಸ್ನೇಕ್ ಪ್ಲಾಂಟ್ :
ಇದು ತುಂಬಾ ಸುಂದರವಾದ ಗಿಡವಾಗಿದೆ. ಈ ಗಿಡವನ್ನು  ನಿಮ್ಮ ಮನೆಯ ಮೂಲೆಯಲ್ಲಿ ನೆಡಬಹುದು. ಆದರೆ ನಿಮ್ಮ ಮನೆಯಲ್ಲಿ ಸಾಕು ನಾಯಿ ಇದ್ದರೆ ಅದು ಗಿಡದಿಂದ ದೂರ ಇರುವುದೇ ಒಳ್ಳೆಯದು. ಏಕೆಂದರೆ ಇದು ಸಪೋನಿನ್ ಅನ್ನು ಹೊಂದಿರುತ್ತದೆ, ಇದರಿಂದಾಗಿ ನಾಯಿಗಳು ಈ ಎಲೆಗಳನ್ನು ತಿಂದ ನಂತರ ವಾಂತಿ ಮಾಡಲು ಪ್ರಾರಂಭಿಸುತ್ತವೆ. ಮಾತ್ರವಲ್ಲ ನಾಯಿಗಳಿಗೆ ಇದರಿಂದ ತಲೆ ಸುತ್ತು ಬರುತ್ತವೆ. 

ದಾಸವಾಳ :
ಸುಂದರವಾದ ದಾಸವಾಳದ ಹೂವುಗಳನ್ನು ಪೂಜೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದಲ್ಲದೆ, ಇದರ ಸೇವನೆಯು ಆರೋಗ್ಯಕ್ಕೆ ಕೂಡಾ ಒಳ್ಳೆಯದು.  ಆದರೆ ಇದು ನಾಯಿಗಳಿಗೆ ವಿಷವಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ : Snacks Recipe: ಗರಿಗರಿಯಾದ ಮಸಾಲಾ ವಡಾ.. ಕೇವಲ ಹತ್ತು ನಿಮಿಷದಲ್ಲಿ ತಯಾರಿಸಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News