ಪ್ರೀತಿಯ ವಿಷಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ ಈ 4 ರಾಶಿಯವರು, ಮದುವೆಯ ವಿಷಯದಲ್ಲಿಯೂ ಇಡುತ್ತಾರೆ ಈ ಹೆಜ್ಜೆ

ಕೆಲವರು ತಮ್ಮ ಪ್ರೀತಿಯನ್ನು ಪಡೆಯಲು ಎಲ್ಲಾ ಮಿತಿಗಳನ್ನು ದಾಟುತ್ತಾರೆ ಮತ್ತು ಅದನ್ನು ಪಡೆದೆ ತೀರುತ್ತಾರೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, 4 ರಾಶಿಯ ಜನರು ತಮ್ಮ ಸಂಗಾತಿಯನ್ನು ಬೇಷರತ್ತಾಗಿ ಪ್ರೀತಿಸುತ್ತಾರೆ.

Written by - Zee Kannada News Desk | Last Updated : Feb 14, 2022, 03:34 PM IST
  • ಈ ರಾಶಿಯ ಜನರು ಪ್ರೀತಿಯಲ್ಲಿ ಹುಚ್ಚರಾಗುತ್ತಾರೆ
  • ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕವಾಗಿರುತ್ತಾರೆ
  • ಇವರಿಗೆ ಸಂಗಾತಿಯೇ ಪ್ರಪಂಚ
 ಪ್ರೀತಿಯ ವಿಷಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ ಈ 4 ರಾಶಿಯವರು, ಮದುವೆಯ ವಿಷಯದಲ್ಲಿಯೂ ಇಡುತ್ತಾರೆ ಈ ಹೆಜ್ಜೆ   title=
ಈ ರಾಶಿಯ ಜನರು ಪ್ರೀತಿಯಲ್ಲಿ ಹುಚ್ಚರಾಗುತ್ತಾರೆ (file photo)

ನವದೆಹಲಿ : ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಜೀವನ ಸಂಗಾತಿಯ (Life partner) ಬಗ್ಗೆ ಕನಸು ಕಾಣುತ್ತಾರೆ. ತಮ್ಮ ನೆಚ್ಚಿನ ಸಂಗಾತಿಯನ್ನೇ ಪಡೆಯಲು ಬಯಸುತ್ತಾರೆ. ಆದರೆ ಹಲವು ಬಾರಿ ಪ್ರೇಮ ಸಂಗಾತಿ ಸಿಕ್ಕರೂ, ಮದುವೆ ನೆರವೇರದೆ ಹೋಗಬಹುದು.  ಕುಟುಂಬ, ಸಮಾಜ, ಜಾತಿ, ಸಾಮಾಜಿಕ ಆರ್ಥಿಕ ಸ್ಥಿತಿ ಅಥವಾ ಅದರ ಹಿಂದೆ ಯಾವುದೇ ಕಾರಣವಿದ್ದು, ವಿವಾಹ ಏರ್ಪಡದೇ ಹೋಗಬಹುದು.  ಕೆಲವರು ತಮ್ಮ ಪ್ರೀತಿಯನ್ನು ಪಡೆಯಲು ಎಲ್ಲಾ ಮಿತಿಗಳನ್ನು ದಾಟುತ್ತಾರೆ ಮತ್ತು ಅದನ್ನು ಪಡೆದೆ ತೀರುತ್ತಾರೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), 4 ರಾಶಿಯ ಜನರು ತಮ್ಮ ಸಂಗಾತಿಯನ್ನು ಬೇಷರತ್ತಾಗಿ ಪ್ರೀತಿಸುತ್ತಾರೆ.  

ಮಿಥುನ: 
ಮಿಥುನ ರಾಶಿಯ (Gemini) ಜನರು ಪ್ರೀತಿಯ ವಿಷಯದಲ್ಲಿ ಅದ್ಭುತವಾಗಿರುತ್ತಾರೆ. ಅವರು ಯಾರೊಂದಿಗಾದರೂ ಸಂಬಂಧವನ್ನು ಬೆಳೆಸಿದರೆ, ಅವರು ಸಂಪೂರ್ಣ ಸೃದ್ದೆಯಿಂದ ನಿಭಾಯಿಸುತ್ತಾರೆ. ಇಷ್ಟೇ ಅಲ್ಲ, ತಮ್ಮ ಪ್ರೀತಿಯನ್ನು ಪಡೆಯಲು ಬೇಕಾಗಿ ಯಾವ ಹಂತಕ್ಕೂ ತಲುಪುತ್ತಾರೆ (Gemini love life). 

ಕರ್ಕಾಟಕ ರಾಶಿ: 
ಕರ್ಕ ರಾಶಿಯ (Cancer) ಜನರು ತುಂಬಾ ಪ್ರಾಮಾಣಿಕರು ಮತ್ತು ತಮ್ಮ ಸಂಗಾತಿಯ ಕಡೆಗೆ ನಿಷ್ಠರಾಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಎಲ್ಲವನ್ನೂ ತ್ಯಾಗ ಮಾಡುವ ಮೂಲಕ ತಮ್ಮ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. 

ಇದನ್ನೂ ಓದಿ: ಜೀವನದಲ್ಲಿ ಅದೃಷ್ಟ ಎದುರಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಈ ಶುಭ ಸಂಕೇತಗಳು

ಕನ್ಯಾ: 
ಅಂದಹಾಗೆ, ಕನ್ಯಾ ರಾಶಿಯ (Virgo) ಜನರು ತಮ್ಮ ಹೃದಯಡ ಮಾತನ್ನು ಯಾರಿಗೂ ಹೇಳುವುದಿಲ್ಲ. . ಆದರೆ ಅವರು ತಮ್ಮ ಹೃದಯವನ್ನು ಯಾರಿಗಾದರೂ ನೀಡಿದರೆ ಮಾತ್ರ , ತಮ್ಮ ಸಂಗಾತಿಯನ್ನು ಎಲ್ಲದ್ದಕ್ಕಿಂತಲೂ ಮಿಗಿಲಾಗಿದುತ್ತಾರೆ. ತಮ್ಮ ಪ್ರೀತಿಯನ್ನು ಪಡೆಯಲು ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ. 

ಕುಂಭ ರಾಶಿ : 
ಕುಂಭ ರಾಶಿಯವರು (Aquarius) ತುಂಬಾ ಭಾವುಕರಾಗಿರುತ್ತಾರೆ. ಆದರೆ , ಅವರು ಹಠಮಾರಿಗಳು ಕೂಡಾ.  ಅವರು ತಮ್ಮದೇ ಆದ ನಿಯಮಗಳ ಮೇಲೆ ಜೀವನವನ್ನು ನಡೆಸುತ್ತಾರೆ. ಆದರೆ ಅವರ ಪ್ರೀತಿಯ ಸಂಗಾತಿಯ (life partner) ವಿಷಯಕ್ಕೆ ಬಂದಾಗ, ಅವರು ಎಲ್ಲಾ ರೀತಿಯ ರಾಜಿ ಮಾಡಿಕೊಳ್ಳಲು ಸಿದ್ಧರಾಗಿರುತ್ತಾರೆ. ಅವರಿಗೆ ಅವರ ಸಂಗಾತಿಯೇ ಪ್ರಪಂಚವಾಗಿ ಬಿಡುತ್ತದೆ. 

ಇದನ್ನೂ ಓದಿ: Surya Rashi Parivartan: ಸೂರ್ಯ ರಾಶಿ ಪರಿವರ್ತನೆ, ಮುಂದಿನ 1 ತಿಂಗಳು ಈ ರಾಶಿಯವರಿಗೆ ವರದಾನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News