Hair Care Tips: ಕೂದಲು ಉದುರುವಿಕೆಗೆ ಪರಿಹಾರ ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ

Hair Care Tips: ಈ ಲೇಖನದಲ್ಲಿ ಅಂತಹ ಕೆಲವು ಮನೆಮದ್ದುಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ, ಅದನ್ನು ಅನುಸರಿಸುವ ಮೂಲಕ ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಬಹುದು.

Written by - Yashaswini V | Last Updated : Oct 4, 2021, 11:25 AM IST
  • ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಅವರು ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹಲವು ಮನೆಮದ್ದುಗಳನ್ನೂ ಬಳಸಬಹುದು ಎಂದು ಸಲಹೆ ನೀಡಿದ್ದಾರೆ
  • ಮನೆ ಮದ್ದುಗಳನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆಗೆ ಪರಿಹಾರದ ಜೊತೆಗೆ ನೀವು ದಪ್ಪವಾದ, ಹೊಳೆಯುವ ಕೂದಲನ್ನು ಪಡೆಯಬಹುದು
  • ಕೂದಲುದುರುವ ಸಮಸ್ಯೆಗೆ ಪರಿಹಾರ ಪಡೆಯಲು ಯಾವ ಮನೆಮದ್ದುಗಳು ಪರಿಣಾಮಕಾರಿ ಆಗಿದೆ ಎಂಬುದನ್ನು ತಿಳಿಯೋಣ
Hair Care Tips: ಕೂದಲು ಉದುರುವಿಕೆಗೆ ಪರಿಹಾರ ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ title=
Hair Care Tips- ಕೂದಲು ಉದುರುವ ಸಮಸ್ಯೆಯನ್ನು ತೊಡೆದುಹಾಕಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ

Hair Care Tips: ನಮ್ಮ ಜೀವನಶೈಲಿ ಹಾಗೂ ಒತ್ತಡ ಭರಿತ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಕೂದಲು ಉದುರುವುದನ್ನು (Hair Loss) ನಿಯಂತ್ರಿಸಲು ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ರೀತಿಯ ತೈಲಗಳು ಹಾಗೂ ಶಾಂಪೂಗಳ ಮೊರೆಹೋಗುತ್ತಾರೆ. ಹಲವು ಸಂದರ್ಭಗಳಲ್ಲಿ ಹೆಚ್ಚು ರಾಸಾಯನಿಕ ಭರಿತ ಶಾಂಪೂಗಳನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವ ಬದಲಿಗೆ ನಿಮ್ಮ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನೀವೂ ಕೂಡ ಕೂದಲು  ಉದುರುವ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಈ ಸುದ್ದಿ ನಿಮಗೆ ಸಹಾಯ ಮಾಡಬಹುದು.  

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಅವರು ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹಲವು ಮನೆಮದ್ದುಗಳನ್ನೂ (Home Remedies For Hair Fall) ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಮನೆ ಮದ್ದುಗಳನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆಗೆ ಪರಿಹಾರದ ಜೊತೆಗೆ ನೀವು ದಪ್ಪವಾದ, ಹೊಳೆಯುವ ಕೂದಲನ್ನು ಪಡೆಯಬಹುದು  ಎಂದು ಅವರು ತಿಳಿಸಿದ್ದಾರೆ. ಕೂದಲುದುರುವ ಸಮಸ್ಯೆಗೆ ಪರಿಹಾರ ಪಡೆಯಲು ಯಾವ ಮನೆಮದ್ದುಗಳು ಪರಿಣಾಮಕಾರಿ ಆಗಿದೆ ಎಂಬುದನ್ನು ತಿಳಿಯೋಣ...

ಇದನ್ನೂ ಓದಿ- Hair Care: ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಶಾಂಪೂ ಮಾಡುವ ಮೊದಲು ಈ ಸಣ್ಣ ವಿಧಾನವನ್ನು ಅನುಸರಿಸಿ

ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಈ ವಸ್ತುಗಳು ಪರಿಣಾಮಕಾರಿ (These things are beneficial for hair) :
1.  ಅಲೋವೆರಾ ಜೆಲ್ ಅನ್ವಯಿಸಿ: 

ಕೂದಲಿನ ಹಲವು ಸಮಸ್ಯೆಗಳಿಗೆ (Hair Problems) ಅಲೋವೆರಾ ಜೆಲ್ ಪರಿಣಾಮಕಾರಿ ಆಗಿದೆ. ಅಲೋವೆರಾವನ್ನು ಅನ್ವಯಿಸುವ ಮೂಲಕ ಅಲೋವೆರಾ ಜೆಲ್ ಅನ್ನು ಕೆಲ ಕಾಲ ನೆತ್ತಿಯ ಮೇಲೆ ಬಿಡಿ. ಸುಮಾರು ಒಂದು ಗಂಟೆಯ ನಂತರ ಶಾಂಪೂ ಬಳಸಿ ತೊಳೆಯಿರಿ. ಇದು ನಿಮ್ಮ ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದಲ್ಲದೆ, ಒಣ ಕೂದಲನ್ನು ರೇಷ್ಮೆಯಂತೆ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

2. ಭೃಂಗರಾಜ್ :
ಭೃಂಗರಾಜ್ ಅನ್ನು ಕೂದಲಿನ ಎಲ್ಲಾ ಸಮಸ್ಯೆಗಳಿಗೂ ರಾಮಬಾಣ ಎಂದು ಪರಿಗಣಿಸಲಾಗುತ್ತದೆ. ಇದರ ಬಳಕೆಯಿಂದ ಕೂದಲು ಉದುರುವುದು, ತಲೆಹೊಟ್ಟು ಮತ್ತು ಅಕಾಲಿಕ ಕೂದಲು ಬೆಳ್ಳಗಾಗುವುದು ಈ ರೀತಿಯ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜೊತೆಗೆ ಇದು ಕೂದಲನ್ನು ಬಲಪಡಿಸುತ್ತದೆ. ಇದನ್ನು ಕೂದಲಿನ ಎಣ್ಣೆ ಮತ್ತು ಮಾಸ್ಕ್ ಆಗಿ ಬಳಸುವುದರಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು.

ಇದನ್ನೂ ಓದಿ- Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

3. ಆಮ್ಲಾ (ನೆಲ್ಲಿಕಾಯಿ) :
ಆಮ್ಲಾ ಅಥವಾ ನೆಲ್ಲಿಕಾಯಿ ಅಲ್ಲಿ ಇರುವ ಕೆಲವು ಅಂಶಗಳು ಕೂದಲನ್ನು ಮೃದುವಾಗಿಸುವುದರ ಜೊತೆಗೆ, ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುವಂತೆ ಪೋಷಿಸುತ್ತದೆ. ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ, ಅದನ್ನು ಕೂದಲಿಗೆ ಹಚ್ಚುವುದರಿಂದ, ಕೂದಲ ಬೆಳವಣಿಗೆಗೆ ಒಳ್ಳೆಯದು. 

4. ತೆಂಗಿನ ಎಣ್ಣೆ :
ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಕೂದಲನ್ನು ಬಲಪಡಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News