ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಪ್ರಮಾಣದಲ್ಲಿ ಹೆಚ್ಚಳ

ಭಾರತದ ಪ್ರತಿಯೊಂದು ವಲಯದಲ್ಲೂ ಮಹಿಳೆಯರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ, ಮಾರ್ಚ್‌ನಲ್ಲಿ ಜಾರಿಗೆ ತರಲಾದ ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ.

Last Updated : Oct 3, 2020, 03:25 PM IST
  • ಮಹಿಳಾ ಉದ್ಯೋಗಿಗಳ ಪಾಲು ಏಪ್ರಿಲ್‌ನಲ್ಲಿ ಸುಮಾರು 30 ಪ್ರತಿಶತದಿಂದ ಜುಲೈ ಅಂತ್ಯದ ವೇಳೆಗೆ 37 ಪ್ರತಿಶತಕ್ಕೆ ಏರಿದೆ.
  • ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ.
  • ಈ ವರದಿಯ ಪ್ರಕಾರ ಭಾರತದಲ್ಲಿ ಉದ್ಯೋಗಗಳಿಗೆ ನೇಮಕಾತಿ ನಡೆಯುತ್ತಿದೆ ಮತ್ತು ಲಿಂಗ ಸಮಾನತೆಯ ಸುಧಾರಣೆಯನ್ನೂ ನೋಡಲಾಗುತ್ತಿದೆ.
ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಪ್ರಮಾಣದಲ್ಲಿ ಹೆಚ್ಚಳ title=
File Image

ನವದೆಹಲಿ: ಭಾರತದ ಪ್ರತಿಯೊಂದು ವಲಯದಲ್ಲೂ ಮಹಿಳೆಯರು (Women) ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ತನ್ನ ಅತ್ಯುತ್ತಮ ಸಾಧನೆ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಕ್ಷೇತ್ರದಲ್ಲೂ ತನ್ನದೇ ಆದ ವಿಶೇಷ ಸ್ಥಾನವನ್ನು ಗಳಿಸುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ. ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಾರ್ಚ್‌ನಲ್ಲಿ ಜಾರಿಗೆ ತರಲಾದ ಲಾಕ್‌ಡೌನ್  (Lockdown) ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ಲಿಂಕ್ಡ್‌ಇನ್ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಲಾಕ್‌ಡೌನ್‌ನಲ್ಲಿ ಗೋಚರಿಸುವ ಹೆಚ್ಚಳ:
ಲಿಂಕ್ಡ್‌ಇನ್ ವರದಿಯ ಪ್ರಕಾರ, ಮಹಿಳಾ ಉದ್ಯೋಗಿಗಳ ಪಾಲು ಏಪ್ರಿಲ್‌ನಲ್ಲಿ ಸುಮಾರು 30 ಪ್ರತಿಶತದಿಂದ ಜುಲೈ ಅಂತ್ಯದ ವೇಳೆಗೆ 37 ಪ್ರತಿಶತಕ್ಕೆ ಏರಿದೆ. ಲಿಂಕ್ಡ್‌ಇನ್ ತನ್ನ ವರದಿಯ ಎರಡನೇ ಆವೃತ್ತಿಯನ್ನು 'ಲೇಬರ್ ಮಾರ್ಕೆಟ್ ಅಪ್‌ಡೇಟ್' ಬಿಡುಗಡೆ ಮಾಡಿದೆ, ಅದರಲ್ಲಿ ಇದನ್ನು ಹೇಳಲಾಗಿದೆ.

BSNL ಗ್ರಾಹಕರಿಗೆ ಗುಡ್ ನ್ಯೂಸ್, ಈಗ ಡಿಸೆಂಬರ್‌ವರೆಗೆ ಸಿಗಲಿದೆ ಈ ಸೌಲಭ್ಯ

ಈ ವರದಿಯ ಪ್ರಕಾರ ಭಾರತದಲ್ಲಿ ಉದ್ಯೋಗಗಳಿಗೆ ನೇಮಕಾತಿ ನಡೆಯುತ್ತಿದೆ ಮತ್ತು ಲಿಂಗ ಸಮಾನತೆಯ ಸುಧಾರಣೆಯನ್ನೂ ನೋಡಲಾಗುತ್ತಿದೆ. ಇದರ ಪ್ರಕಾರ ಜೂನ್‌ಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ನೇಮಕಾತಿಗಳು ಶೇಕಡಾ 25 ರಷ್ಟು ಹೆಚ್ಚಾಗಿದೆ.

ಕರೋನಾವೈರಸ್ ಸೋಂಕಿನ ಎರಡನೇ ತರಂಗದ ಸಾಧ್ಯತೆಯಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಇನ್ನೂ ಅಪಾಯವಿದೆ ಎಂದು ಅದು ಹೇಳುತ್ತದೆ. ವರದಿಯ ಪ್ರಕಾರ ಆರ್ಥಿಕ ದೃಷ್ಟಿಕೋನವು ದುರ್ಬಲಗೊಂಡಿರುವುದರಿಂದ ಮತ್ತಷ್ಟು ಸುಧಾರಣೆಗೆ ಪರಿಣಾಮ ಬೀರಬಹುದು.

ಮನೆಯಲ್ಲಿಯೇ ಕುಳಿತು ತಿಂಗಳಿಗೆ 25-30 ಸಾವಿರ ರೂಪಾಯಿ ಸಂಪಾದಿಸಿ, ಇಲ್ಲಿದೆ ಹಲವು ಅವಕಾಶ

ವರ್ಕ್ ಫ್ರಮ್ ಹೋಂ ಲಾಭ: 
ಲಾಕ್‌ಡೌನ್ ಕಾರಣ ಹೆಚ್ಚಿನ ಕಂಪನಿಗಳು ಮನೆಯಿಂದ ತಮ್ಮ ಉದ್ಯೋಗಿಗಳಿಗೆ ಕೆಲಸದ (Work From Home) ಸೌಲಭ್ಯವನ್ನು ಒದಗಿಸಿವೆ. ಜಾಗತಿಕವಾಗಿ ಕರೋನಾವೈರಸ್ (Coronavirus) ಸೋಂಕು ಹರಡುವುದನ್ನು ತಡೆಗಟ್ಟಲು ಜಾರಿಗೆ ತರಲಾದ ಲಾಕ್‌ಡೌನ್ ಕ್ರಮಗಳು ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಹೆಚ್ಚಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸ್ತ್ರೀ ಪ್ರಾತಿನಿಧ್ಯವೂ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.

Trending News