The Story of ShaniDev : ಸೂರ್ಯಪುತ್ರ ಶನಿಗೆ ಶನಿವಾರ ಎಳ್ಳೆಣ್ಣೆಅರ್ಪಿಸಿದರೆ ಏನು ಫಲ..?

 ಶನಿದೇವರಿಗೆ (Shani Dev) ಪ್ರತಿ ಶನಿವಾರ ಎಳ್ಳೆಣ್ಣೆ ಅಭಿಷೇಕ ಮಾಡುತ್ತಾರೆ. ಎಳ್ಳೆಣ್ಣೆ (Oil) ಅಭಿಷೇಕ ಯಾಕೆ? ಅದರ ಹಿಂದಿರುವ ಕಥೆ ಏನು..? ನಿಮಗೆ ಗೊತ್ತಿದೆಯಾ..?

Written by - Ranjitha R K | Last Updated : Jan 16, 2021, 11:44 AM IST
  • ಶನಿದೇವರಿಗೆ ಶನಿವಾರ ಎಳ್ಳೆಣ್ಣೆ ಯಾಕೆ ಅರ್ಪಿಸಬೇಕು..?
  • ಎಳ್ಳೆಣ್ಣೆ ಅರ್ಪಿಸಿದರೆ ಭಕ್ತರಿಗೆ ಸಿಗುವ ಶುಭಫಲ ಯಾವುದು..?
  • ಹನುಮಂತ ಮತ್ತು ಶನಿದೇವರ ನಡುವಣ ಸಮರದಲ್ಲಿ ಏನಾಯ್ತು..?
The Story of ShaniDev : ಸೂರ್ಯಪುತ್ರ ಶನಿಗೆ ಶನಿವಾರ ಎಳ್ಳೆಣ್ಣೆಅರ್ಪಿಸಿದರೆ ಏನು ಫಲ..? title=
ಶನಿದೇವರಿಗೆ ಶನಿವಾರ ಎಳ್ಳೆಣ್ಣೆ ಅರ್ಪಿಸಬೇಕು

ಬೆಂಗಳೂರು : ಶನಿ ದೇವರನ್ನು(Shani Dev)  ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿ ದೇವರು ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುತ್ತಾರೆ. ಒಳ್ಳೆಯ ಕೆಲಸ ಮಾಡಿದರೆ, ಶನಿದೇವರು ಆ ಮನುಷ್ಯನಿಗೆ ಸುಖ ಸಂತೋಷ ದಯಪಾಲಿಸುತ್ತಾನೆ. ಅದೇ ರೀತಿ ಕೆಟ್ಟ ಕೆಲಸ ಮಾಡುವ ವ್ಯಕ್ತಿ ಶನಿದೇವರ ಕ್ರೋಧಕ್ಕೆ ಗುರಿಯಾಗಬೇಕಾಗುತ್ತದೆ. ಆ ವ್ಯಕ್ತಿಯ ಜೀವನ ನರಕವಾಗುತ್ತದೆ ಎಂಬುದು ನಂಬಿಕೆ. ಆದರೆ,  ಶನಿದೇವರಿಗೆ ಪ್ರತಿ ಶನಿವಾರ ಎಳ್ಳೆಣ್ಣೆ ಅಭಿಷೇಕ ಮಾಡುತ್ತಾರೆ. ಎಳ್ಳೆಣ್ಣೆ (Oil) ಅಭಿಷೇಕ ಯಾಕೆ? ಅದರ ಹಿಂದಿರುವ ಕಥೆ ಏನು..? ನಿಮಗೆ ಗೊತ್ತಿದೆಯಾ..?

ಎಳ್ಳೆಣ್ಣೆ ಅಭಿಷೇಕದ ಕುರಿತು ಎರಡು ಕತೆಗಳಿವೆ..!
ಲಂಕಾಪತಿ ರಾವಣ(Ravana) ಅಮಿತ ಪರಾಕ್ರಮಿಯಾಗಿದ್ದು. ತನ್ನ ಸಾಮರ್ಥ್ಯದ ಬಗ್ಗೆ ಆತನಿಗೆ ಅಹಂಕಾರವಿತ್ತು. ಆ ಅಹಂಕಾರದ ಕಾರಣದಿಂದಲೇ ರಾವಣ ಎಲ್ಲಾ ಗ್ರಹಗಳನ್ನು ಸೋಲಿಸಿ, ಲಂಕೆ (Lanka) ಯಲ್ಲಿ ಬಂಧನದಲ್ಲಿಟ್ಟಿದ್ದ ರಾವಣ ಶನಿಗ್ರಹವನ್ನೂ (Saturn) ಬಿಟ್ಟಿರಲಿಲ್ಲ. ಶನಿದೇವರನ್ನೂ ಬಂಧಿಸಿ, ಕಾರಾಗೃಹದಲ್ಲಿಟ್ಟಿದ್ದ. ಇದೇ ಹೊತ್ತಿಗೆ ಹನುಮಾನ್ (Lord Hanuman)  ಸೀತಾಮಾತೆಯ ಹುಡುಕಾಟಕ್ಕಾಗಿ ಲಂಕೆಗೆ ಆಗಮಿಸಿದ್ದ. ರಾವಣನ ಆಸ್ಥಾನಕ್ಕೆ ಬಂದ ಹನುಮಂತನ ಬಾಲಕ್ಕೆ ರಾವಣ ಬೆಂಕಿ ಇಡುತ್ತಾನೆ. ಬಾಲಕ್ಕೆ ಬೆಂಕಿ ಹತ್ತಿಸಿಕೊಂಡ ಹನುಮಂತ ಆ ಬೆಂಕಿಯಿಂದ ಸಮಸ್ತ ಲಂಕೆಯನ್ನು ಸುಟ್ಟು ಬಿಡುತ್ತಾನೆ. ಇದರಿಂದ ಬಂಧನದಲ್ಲಿದ್ದ  ಎಲ್ಲಾ ಗ್ರಹಗಳೂ ಬಿಡುಗಡೆ ಹೊಂದುತ್ತವೆ. ಆದರೆ, ಶನಿದೇವರು (Shani Dev) ಮಾತ್ರ ಅದೇ ರೀತಿಯಲ್ಲಿದ್ದು ಬಿಡುತ್ತಾರೆ. ಅಲ್ಲದೆ, ಲಂಕೆಯ ಬೆಂಕಿಯ (Fire) ಕಾರಣದಿಂದ ಅವರ ದೇಹದಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಆಗ  ಅಲ್ಲಿಗೆ ಆಗಮಿಸುವ ಹನುಮಾನ್, ಶನಿದೇವರ ದೇಹಕ್ಕೆ ಎಳ್ಳೆಣ್ಣೆಯ ಮಜ್ಜನ ಮಾಡಿಸುತ್ತಾನೆ. ಶನಿದೇವರ ಎಲ್ಲಾ ನೋವು ಪರಿಹಾರವಾಗುತ್ತದೆ. ಅದೇ ಕಾರಣಕ್ಕೆ ಯಾವ ಮನುಷ್ಯ ತದೇಕ ಚಿತ್ತದಿಂದ ಶನಿವಾರ ತನಗೆ ಎಳ್ಳೆಣ್ಣೆ  ಅರ್ಪಿಸಿದರೆ ಅವರು ಸಮಸ್ತ ನೋವಿನಿಂದ ಮುಕ್ತಿ ಪಡೆಯುತ್ತಾರೆ. ಅವರ ಕಷ್ಟ ಕೋಟಲೆಗಳು ಪರಿಹಾರವಾಗುತ್ತದೆ ಎಂದು ಅನುಗ್ರಹ ಮಾಡುತ್ತಾರೆ ಶನಿದೇವ. 

ಇದನ್ನೂಓದಿASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಎರಡನೇ ಕಥೆ ಹೀಗಿದೆ :
ಎರಡನೇ ಪುಣ್ಯಕಥೆಯ ಪ್ರಕಾರ ಒಂದು ಸಲ ಶನಿದೇವಗೆ ತನ್ನ ಸಾಮರ್ಥ್ಯದ ಬಗ್ಗೆ ವಿಪರೀತ ಅಹಂಕಾರ ಸೃಷ್ಟಿಯಾಗುತ್ತದೆ. ಈ ಅಹಂಕಾರದ ಕಾರಣದಿಂದಲೇ ಶನಿದೇವ, ತನ್ನೊಂದಿಗೆ ಯುದ್ಧಮಾಡುವಂತೆ ಹನುಮಂತನಿಗೆ (Hanuman) ಆಹ್ವಾನ ನೀಡುತ್ತಾರೆ. ಯುದ್ಧ ಮಾಡುವಂತೆ ಶನಿದೇವರು, ಹನುಮಂತನ ಸನಿಹಕ್ಕೆ ಬರುತ್ತಾರೆ. ಆ ಹೊತ್ತಿನಲ್ಲಿ ಆಂಜನೇಯ ಶ್ರೀರಾಮ (Shri Ram) ಧ್ಯಾನದಲ್ಲಿರುತ್ತಾರೆ.  ರಾಮಭಕ್ತಿಯಲ್ಲಿದ್ದೇನೆ, ಈಗ ಯುದ್ಧ ಮಾಡಲು ಸಿದ್ದನಿಲ್ಲ ಎಂದು ಹನುಮಂತ ಮನವರಿಕೆಯಾಗುವಂತೆ ಶನಿದೇವರಿಗೆ ಹೇಳುತ್ತಾರೆ. ಆದರೆ, ಶನಿ ದೇವರು ಯುದ್ಧಕ್ಕೆ (War) ಕಾಲುಕೆರೆದು ನಿಲ್ಲುತ್ತಾರೆ. 

ಯುದ್ಧದಲ್ಲಿ ಶನಿದೇವರಿಗೆ ತೀವ್ರ ಗಾಯಗಳಾಗುತ್ತವೆ. ದೇಹದಲ್ಲಿ ಅಸಹನೀಯ ನೋವುಕಾಣಿಸಿಕೊಳ್ಳುತ್ತದೆ. ಆ ಹೊತ್ತಿನಲ್ಲಿ ಹನುಮಂತ ಎಳ್ಳೆಣ್ಣೆಯನ್ನ  ಶನಿದೇವರ ದೇಹಕ್ಕೆ ಲೇಪಿಸುತ್ತಾರೆ. ಶನಿದೇವರ ನೋವು ಶಮನವಾಗುತ್ತದೆ.  ನಿಷ್ಕಲ್ಮಶ ಮನಸ್ಸಿನಿಂದ ತನಗೆ ಎಳ್ಳೆಣ್ಣೆ ಅರ್ಪಿಸಿದರೆ, ಅವರ ಸಮಸ್ತ ಮನೋಕಾಮನೆ ಪೂರ್ಣವಾಗುತ್ತದೆ ಎಂದು ಶನಿದೇವರ ಅನುಗ್ರಹವಾಗುತ್ತದೆ. 

ಇದನ್ನೂಓದಿಅಕಾಲ ಮೃತ್ಯು ಭಯ ನಿವಾರಣೆಗೆ ಶನಿವಾರ ಈ ಕೆಲಸ ತಪ್ಪದೆ ಮಾಡಿ

ಹಾಗಾಗಿ, ಶನಿವಾರದ ದಿನ ಶನಿ ಮಂದಿರಕ್ಕೆ (Shani Temple) ತೆರಳಿ, ನಿಷ್ಕಲ್ಮಶ ಭಕ್ತಿಯಿಂದ ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಿದರೆ, ಅಥವಾ ಅಭಿಷೇಕ ಮಾಡಿದರೆ ಶುಭಫಲ ಸಿಗುತ್ತದೆ ಎನ್ನುತ್ತಾರೆ ಧಾರ್ಮಿಕರು. ಹಾಗಾಗಿ ಶನಿ ಬಲ ಪಡೆಯಲು ಶನಿವಾರ ಶನಿಮಂದಿರ ಹೋಗುವುದನ್ನು ತಪ್ಪಿಸಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News