ಅಂಡರ್ ಆರ್ಮ್ ಪಿಂಪಲ್ಸ್ ಚಿಕಿತ್ಸೆಗೆ 10 ಉತ್ತಮ ಮನೆಮದ್ದುಗಳು

Underarm Pimples Treatment: ಕೆಲವರಿಗೆ ಅಂಡರ್ ಆರ್ಮ್ ನಲ್ಲಿಯೂ ಮೊಡವೆ ಕಾಣಿಸಿಕೊಳ್ಳುತ್ತದೆ. ಇದು ಬಹಳ ಚಿಕ್ಕದಾಗಿದ್ದರೂ ಕೂಡ ತೀವ್ರವಾದ ನೋವುಂಟು ಮಾಡುತ್ತದೆ.  ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿರುವ ಪದಾರ್ಥಗಳಿಂದಲೇ ಸುಲಭ ಪರಿಹಾರ ಪಡೆಯಬಹುದು.   

Written by - Yashaswini V | Last Updated : Nov 15, 2023, 11:42 AM IST
  • ಕೂದಲಿನ ಕಿರುಚೀಲಗಳು ಮತ್ತು ಬೆವರು ಗ್ರಂಥಿಗಳಿಂದಾಗಿ ಮೊಡವೆಗಳು ಮೂಡುತ್ತವೆ.
  • ಈ ಮೊಡವೆಗಳು ಮೂಲಭೂತವಾಗಿ ಚಿಕ್ಕದಾಗಿರುತ್ತವೆ.
  • ಆದರೆ, ಇವು ಕೆಲವೊಮ್ಮೆ ಅತಿಯಾದ ನೋವುಂಟು ಮಾಡುತ್ತವೆ.
ಅಂಡರ್ ಆರ್ಮ್ ಪಿಂಪಲ್ಸ್ ಚಿಕಿತ್ಸೆಗೆ 10 ಉತ್ತಮ ಮನೆಮದ್ದುಗಳು  title=

Underarm Pimples Treatment: ಅಂಡರ್ ಆರ್ಮ್ ಪ್ರದೇಶದಲ್ಲಿ ಕೂದಲಿನ ಕಿರುಚೀಲಗಳು ಮತ್ತು ಬೆವರು ಗ್ರಂಥಿಗಳಿಂದಾಗಿ ಮೊಡವೆಗಳು ಮೂಡುತ್ತವೆ. ಈ ಮೊಡವೆಗಳು ಮೂಲಭೂತವಾಗಿ ಚಿಕ್ಕದಾಗಿರುತ್ತವೆ. ಆದರೆ, ಇವು ಕೆಲವೊಮ್ಮೆ ಅತಿಯಾದ ನೋವುಂಟು ಮಾಡುತ್ತವೆ. ಇದಕ್ಕಾಗಿ ಚಿಕಿತ್ಸೆ ಪಡೆಯಲು ನೀವು ಹೋಗುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಅಂಡರ್ ಆರ್ಮ್ ಮೊಡವೆಗಳಿಗೆ ವಿದಾಯ ಹೇಳಬಹುದು. 

ಅಂಡರ್ ಆರ್ಮ್ ಪಿಂಪಲ್ಸ್ ಚಿಕಿತ್ಸೆಗೆ 10 ಅತ್ಯುತ್ತಮ ಮನೆಮದ್ದುಗಳಿವು: 
ಬಿಸಿ ಶಾಖ: 

ನೀವು ತಡೆಯುವಷ್ಟು ಬಿಸಿ ನೀರಿನಲ್ಲಿ ಕಾಟನ್ ಬಟ್ಟೆಯನ್ನು ಒದ್ದೆ ಮಾಡಿ ಇದರಿಂದ ಅಂಡರ್ ಆರ್ಮ್ ನಲ್ಲಿ ಪಿಂಪಲ್ಸ್ ಪೀಡಿತ ಪ್ರದೇಶಕ್ಕೆ ಶಾಖ ನೀಡುವುದರಿಂದ ಮೊಡವೆಯನ್ನು ಸಂಕುಚಿತಗೊಳಿಸಬಹುದು. ಮಾತ್ರವಲ್ಲ, ಇದು ಮೊಡವೆ ಒಡೆಯಲು, ಪಸ್ ತೆಗೆಯಲು ಸಹಕಾರಿ ಆಗಿದೆ. 

ಟೀ ಟ್ರೀ ಆಯಿಲ್: 
ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಟೀ ಟ್ರೀ ಆಯಿಲ್‌ನಲ್ಲಿ ಅಡ್ಡಿ ಅದನ್ನು ಅಂಡರ್ ಆರ್ಮ್ ಮೊಡವೆ ಪೀಡಿತ ಜಾಗದಲ್ಲಿ ಅನ್ವಯಿಸಿ. ಟೀ ಟ್ರೀ ಆಯಿಲ್ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಇದು ಮೊಡವೆಗಳನ್ನು ನಿವಾರಿಸಲು ಪ್ರಯೋಯಜನಕಾರಿ ಎಂದು ಸಾಬೀತುಪಡಿಸಲಿದೆ. 

ಅಲೋವೆರಾ: 
ಅನಾದಿ ಕಾಲದಿಂದಲೂ ಉತ್ತಮ ಸೌಂದರ್ಯವರ್ಧಕವಾಗಿ ಬಳಸಲ್ಪಡುವ ತಾಜಾ ಅಲೋವೆರಾವನ್ನು ಜೆಲ್ ಅನ್ನು ನೇರವಾಗಿ ಮೊಡವೆ ಮೇಲೆ ಅನ್ವಯಿಸುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 

ಇದನ್ನೂ ಓದಿ- ನಿಮ್ಮ ಕೈಬೆರಳಿನ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆಯೇ?..ಹಾಗಿದ್ದಲ್ಲಿ ಇಲ್ಲಿದೆ ಸುಲಭ ಪರಿಹಾರ...!

ಆಪಲ್ ಸೈಡರ್ ವಿನೆಗರ್: 
ಒಂದು ಚಮಚ ಆಪಲ್ ಸೈಡರ್ ವಿನೆಗರ್ ನಲ್ಲಿ 2 ಚಮಚ ನೀರನ್ನು ಮಿಶ್ರಣ ಮಾಡಿ ಹತ್ತಿ ಉಂಡೆಯ ಸಹಾಯದಿಂದ ಅಂಡರ್ ಆರ್ಮ್ ಮೊಡವೆ ಜಾಗದಲ್ಲಿ ಅಪ್ಪ್ಲೈ ಮಾಡಿ. ಇದು ACV ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಮೊಡವೆಗಳನ್ನು ಗುಣಪಡಿಸಲು ಪ್ರಯೋಜನಕಾರಿ ಆಗಿದೆ. 

ನಿಂಬೆ ರಸ: 
ತಾಜಾ ನಿಂಬೆ ರಸವನ್ನು ಹತ್ತಿ ಉಂಡೆ ಸಹಾಯದಿಂದ ಅಂಡರ್ ಆರ್ಮ್ ಮೊಡವೆಗಳ ಮೇಲೆ ಅನ್ವಯಿಸುವುದರಿಂದ ಇದು ಮೊಡವೆಗಳನ್ನು ಸಂಕುಚಿತಗೊಳಿಸಲು ಸಹಕಾರಿ ಎಂದು ಸಾಬೀತುಪಡಿಸಲಿದೆ. 

ಬೇಕಿಂಗ್ ಸೋಡಾ: 
ಬೇಕಿಂಗ್ ಸೋಡಾ ರಂಧ್ರಗಳನ್ನು ಎಫ್ಫೋಲಿಯೇಟ್ ಮಾಡಲು ಮತ್ತು ಅನ್ಕ್ಲಾಗ್ ಮಾಡಲು ಸಹಾಯ ಮಾಡುತ್ತದೆ.. ಬೇಕಿಂಗ್ ಸೋಡಾದಲ್ಲಿ ನೀರು ಬೆರ್ಶಿ ಅದರ ಪೇಸ್ಟ್ ತಯಾರಿಸಿ. ಇದನ್ನು ಅಂಡರ್ ಆರ್ಮ್ ಮೊಡವೆ ಪ್ರದೇಶದಲ್ಲಿ ಅನ್ವಯಿಸಿ 15 ನಿಮಿಷಗಳ ಬಳಿಕ ವಾಶ್ ಮಾಡಿ. 

ಅರಿಶಿನ: 
ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಅರಿಶಿನ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ಅಂಡರ್ ಆರ್ಮ್ ಮೊಡವೆ ಸಮಸ್ಯೆ ಶಮನಗೊಳ್ಳಲಿದೆ. 

ಇದನ್ನೂ ಓದಿ- ವೀಳ್ಯದೆಲೆಯಿಂದ ಹೀಗೆ ಮಾಡಿದರೆ ದಟ್ಟ ಕೂದಲು ನಿಮ್ಮದಾಗುತ್ತದೆ..!

ಬೆಳ್ಳುಳ್ಳಿ: 
ಬೆಳ್ಳುಳ್ಳಿಯು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು ಅದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಬೆಳ್ಳುಳ್ಳಿ ಎಸಳನ್ನು ಪೇಸ್ಟ್ ಮಾಡಿ ಅದರ ರಸ ತೆಗೆದು ಮೊಡವೆ ಪೀಡಿತ ಜಾಗದಲ್ಲಿ ಅನ್ವಯಿಸಿ. 

ಗ್ರೀನ್ ಟೀ: 
ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಇದು ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಒಂದು ಕಪ್ ಗ್ರೀನ್ ಟೀ ತಯಾರಿಸಿ, ಹತ್ತಿ ಉಂಡೆ ಸಹಾಯದಿಂದ ಅದನ್ನು ಅಂಡರ್ ಆರ್ಮ್ ಮೊಡವೆಗಳ ಮೇಲೆ ಅನ್ವಯಿಸಿ. 

ನೈರ್ಮಲ್ಯ: 
ಮೇಲಿನ ಮನೆಮದ್ದುಗಳಲ್ಲದೆ ಸ್ವಚ್ಛತೆಗೆ ಆದ್ಯತೆ ನೀಡಿ. ಅಂಡರ್ ಆರ್ಮ್ ಅನ್ನು ಸ್ವಚ್ಛಗೊಳಿಸಲು ಮೃದುವಾದ, ಸುಗಂಧ-ಮುಕ್ತ ಸೋಪ್ ಬಳಸಿ, ಈ ಪ್ರದೇಶ ಸದಾ ಸ್ವಚ್ಛವಾಗಿ ಶುಷ್ಕವಾಗಿರುವಂತೆ ಕಾಳಜಿವಹಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News