Telling Lie: ಒಳ್ಳೆಯ ಕೆಲಸ ಅಥವಾ ಕಾರಣಕ್ಕೆ ಹೇಳಲಾದ ಸುಳ್ಳು ಪುಣ್ಯವೇ? ಅಥವಾ ಪಾಪವೇ?

Karmfal According Upanishads - ಪಾಪ (Sins) ಮತ್ತು ಪುಣ್ಯದ (Paap-Punya) ಬಗ್ಗೆ ಹೆಚ್ಚು ಕಡಿಮೆ ಪ್ರತಿಯೊಂದು ಧರ್ಮದಲ್ಲಿ ವಿವರಣೆಗಳನ್ನು ಮಾಡಲಾಗಿದೆ, ಆದ್ದರಿಂದ ಜನರು ಕೆಟ್ಟ ಕಾರ್ಯಗಳನ್ನು (Karma) ಮಾಡುವುದನ್ನು ತಪ್ಪಿಸುತ್ತಾರೆ. ಸುಳ್ಳು ಹೇಳುವುದನ್ನೂ ಮಹಾ ಪಾಪವೆಂದು ಪರಿಗಣಿಸಲಾಗಿದೆ. ಒಳ್ಳೆಯ ಕಾರಣಕ್ಕಾಗಿ ಹೇಳಿದ ಸುಳ್ಳು ಕೂಡ ಪಾಪದ ವರ್ಗದಲ್ಲಿ ಬರುತ್ತದೆ.

Written by - Nitin Tabib | Last Updated : Dec 21, 2021, 01:26 PM IST
  • ಎಂದಿಗೂ ಸುಳ್ಳನ್ನು ಹೇಳಬೇಡಿ.
  • ಒಳ್ಳೆಯ ಕಾರಣಕ್ಕೆ ಸುಳ್ಳು ಹೇಳುವುದನ್ನು ಕೂಡ ತಪ್ಪಿಸಿ
  • ಪ್ರತಿಯೊಂದು ಸುಳ್ಳು ಪಾಪಕ್ಕೆ ದಾರಿ
Telling Lie: ಒಳ್ಳೆಯ ಕೆಲಸ ಅಥವಾ ಕಾರಣಕ್ಕೆ ಹೇಳಲಾದ ಸುಳ್ಳು ಪುಣ್ಯವೇ? ಅಥವಾ ಪಾಪವೇ? title=
Karmfal According Upanishads(Representational Image)

ನವದೆಹಲಿ: Karmfal According Upanishads - ವೇದ-ಉಪನಿಷತ್ತುಗಳಿಂದ (Veda And Upanishads) ಹಿಡಿದು ತತ್ವಶಾಸ್ತ್ರದವರೆಗೆ ಕರ್ಮದ ಕುರಿತು ವಿಸ್ತೃತ ಚರ್ಚೆ ಮಾಡಲಾಗಿದೆ. ಅದರ ಪ್ರಕಾರ, ಆತ್ಮವು ದೇಹವನ್ನು ತೊರೆದಾಗ, ಅದರ ಕಾರ್ಯಗಳು (Karmic Account) ಹೇಗೆ ಇದ್ದವು ಎಂಬುದರ ಆಧಾರದ ಮೇಲೆ ಅದರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಕರ್ಮದಲ್ಲಿ ಶೇ.50ಕ್ಕಿಂತ ಹೆಚ್ಚು ಪುಣ್ಯ ಕಾರ್ಯಗಳನ್ನು ಹೊಂದಿದ್ದರೆ, ಅವನು ಮತ್ತೆ ಮಾನವ ದೇಹವನ್ನು ಪಡೆಯುತ್ತಾನೆ. ಮತ್ತೊಂದೆಡೆ, ಶೇ.100 ನಿಸ್ವಾರ್ಥ ಪುಣ್ಯವನ್ನು ಹೊಂದಿದ್ದರೆ, ವ್ಯಕ್ತಿಗೆ ಮೋಕ್ಷ (Karmfal) ಪ್ರಾಪ್ತಿಯಾಗುತ್ತದೆ.  ಇದೇ ಕಾರಣದಿಂದ ಜನರು ಮರಣದ ನಂತರವೂ ಕಷ್ಟ ಅನುಭವಿಸಬಾರದು ಎಂಬ ಒಂದೇ ಒಂದು ಕಾರಣಕ್ಕೆ ಗರಿಷ್ಠ ಪುಣ್ಯವನ್ನು ಮಾಡುತ್ತಾರೆ. ಶಾಸ್ತ್ರಗಳಲ್ಲಿ ಸುಳ್ಳು ಹೇಳುವುದನ್ನು ಒಂದು ಮಹಾಪಾಪವೆಂದು ಪರಿಗಣಿಸಲಾಗಿದೆ.

ಸಣ್ಣ ಸುಳ್ಳು ಕೂಡ ದೊಡ್ಡ ಶಿಕ್ಷೆಯನ್ನು ತರುತ್ತದೆ
ಜ್ಯೋತಿಷಾಚಾರ್ಯ ವೇದಾಶ್ವಪತಿ ಅಲೋಕ್ ಅವರು ಯಾವುದೇ ಸಂದರ್ಭದಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಬೇಕು ಎನ್ನುತ್ತಾರೆ. ಏಕೆಂದರೆ ಪ್ರತಿಯೊಂದು ಸುಳ್ಳು ನಮ್ಮ ಪಾಪ ಕಾರ್ಯಗಳನ್ನು ಹೆಚ್ಚಿಸುತ್ತದೆ. ಒಳ್ಳೆಯ ಕೆಲಸ ಅಥವಾ ಕಾರಣಕ್ಕಾಗಿ ಹೇಳುವ ಸುಳ್ಳು ಕೂಡ ಪಾಪದ ವರ್ಗದಲ್ಲಿ ಬರುತ್ತದೆ. ಉದಾಹರಣೆಗೆ, ಕಟುಕನಿಂದ ಓಡಿಹೋಗುವ ಹಸು ನಮ್ಮ ಬಳಿಗೆ ಬಂದರೆ ಮತ್ತು ನಾವು ಅದನ್ನು ಮರೆಮಾಡುತ್ತೇವೆ. ನಂತರ ಕಟುಕ ಕೇಳಿದಾಗ ಸುಳ್ಳು ಹೇಳಿದರೆ ಸುಳ್ಳು ಹೇಳಿದ ಪಾಪವನ್ನು ಅನುಭವಿಸಬೇಕಾಗುತ್ತದೆ. ಆದಾಗ್ಯೂ, ಹಸುವನ್ನು ರಕ್ಷಿಸಲು ಪಡೆದ ಅರ್ಹತೆ ಅದರ ಮೇಲೆ ಹೆಚ್ಚು ಭಾರವಾಗಿರುತ್ತದೆ. ಇಂತಹ ಕರ್ಮಗಳನ್ನು ಮಿಶ್ರ ಕರ್ಮಗಳು ಎಂದು ಕರೆಯಲಾಗುತ್ತದೆ, ಅಂದರೆ ಅವು ನಮ್ಮನ್ನು ಪುಣ್ಯ ಮತ್ತು ಪಾಪಗಳೆರಡರಲ್ಲೂ ಭಾಗಿಗಳನ್ನಾಗಿ ಮಾಡುತ್ತವೆ.

ಇದನ್ನೂ ಓದಿ-Bedroom Vastu: ಮರೆತೂ ಸಹ ನಿಮ್ಮ ಬೆಡ್ ರೂಂನಲ್ಲಿ ಈ 5 ವಸ್ತುಗಳನ್ನು ಇಡಬೇಡಿ; ಇಲ್ಲವೇ ಎದುರಾಗುತ್ತೆ ಆರ್ಥಿಕ ಸಂಕಷ್ಟ

ಗರುಡ ಪುರಾಣದಲ್ಲೂ ಇದರ ಉಲ್ಲೇಖವಿದೆ.
ಗರುಡ ಪುರಾಣದಲ್ಲಿಯೂ (Garud Puran) ಸುಳ್ಳು ಹೇಳುವುದನ್ನು ಪಾಪದ ವರ್ಗದಲ್ಲಿ ಇರಿಸಲಾಗಿದೆ ಮತ್ತು ಅಂತಹ ಜನರು ನರಕದಲ್ಲಿ ಅನುಭವಿಸುವ ಚಿತ್ರಹಿಂಸೆಗಳ ಬಗ್ಗೆಯೂ ಹೇಳಲಾಗಿದೆ. ಆದರೆ ಇಂದಿನ ಕಾಲದಲ್ಲಿ ಜನರು ಮಾತುಮಾತಿಗೆ ಸುಳ್ಳು ಹೇಳುತ್ತಾರೆ ಮತ್ತು ಅಂತಹ ಪರಿಸ್ಥಿತಿಯು ಅವರ ಪ್ರಸ್ತುತ ಜೀವನಕ್ಕೆ ಮತ್ತು ಸಾವಿನ ನಂತರದ ಜೀವನಕ್ಕೆ ಒಳ್ಳೆಯದಲ್ಲ. ಕದಿಯುವುದು, ಸುಳ್ಳು ಹೇಳುವುದು ಮನುಷ್ಯನಿಗೆ ಜೀವನದಲ್ಲಿಯೋ ಕೂಡ ಶಿಕ್ಷೆ ಮತ್ತು ತೊಂದರೆಗಳನ್ನು ತರುತ್ತದೆ.

ಇದನ್ನೂ ಓದಿ-Money Horoscope 2022: ಹಣದ ವಿಷಯದಲ್ಲಿ 2022ರ ವರ್ಷ ನಿಮಗೆ ಹೇಗಿರಲಿದೆ?

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Tuesday Remedies: ಇಂದು ಮಾಡುವ ಈ ಕೆಲಸದಿಂದ ಕೊನೆಗೊಳ್ಳಲಿದೆ 2 ಅಶುಭ ಗ್ರಹಗಳ ಪ್ರಭಾವ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News