Tea Side Effects: ಟೀ ಜೊತೆ ಮಿಸ್ ಆಗಿ ಕೂಡ ಈ ಆಹಾರಗಳನ್ನು ಸೇವಿಸಬೇಡಿ

Tea: ಟೀ/ಚಹಾ ಇಷ್ಟಪಡದವರು ತೀರಾ ವಿರಳ. ಸಾಮಾನ್ಯವಾಗಿ, ಕೆ;ಲವರು ಟೀ ಜೊತೆಗೆ ಏನನ್ನಾದರೂ ತಿನ್ನಲು ಇಷ್ಟಪಡುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕರಕ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Oct 24, 2023, 01:55 PM IST
  • ಟೀ ಕೆಲವರಿಗೆ ತಮ್ಮ ಮೂಡ್ ಅನ್ನು ಚೇಂಜ್ ಮಾಡಬಲ್ಲ ಮ್ಯಾಜಿಕ್ ಡ್ರಿಂಕ್ ಇದ್ದಂತೆ
  • ಚಹಾ ಜೊತೆಗೆ ಬೋಂಡ, ಬಜ್ಜಿ, ಪಕೋಡ ಇದ್ದರೆ... ಆಹಾ... ಈ ರುಚಿಯನ್ನು ತಿಂದವರೇ ಬಲ್ಲರು.
  • ಆದರೆ, ಟೀ ಜೊತೆಗೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
Tea Side Effects: ಟೀ ಜೊತೆ ಮಿಸ್ ಆಗಿ ಕೂಡ ಈ ಆಹಾರಗಳನ್ನು ಸೇವಿಸಬೇಡಿ  title=

Tea Side Effects: ಚಹಾ...! ಹೆಸರು ಕೇಳಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ. ಇನ್ನೂ ಕೆಲವರಿಗಂತು ಒಂದು ಕಪ್ ಚಹಾ ಇಲ್ಲದೆ, ದಿನವೇ ಆರಂಭವಾಗುವುದಿಲ್ಲ. ಉತ್ತಮ ಮೈಂಡ್ ಫ್ರೆಶರ್ ಆಗಿ ಕಾರ್ಯನಿರ್ವಹಿಸುವ ಚಹಾವನ್ನು ಹಿತ-ಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಕೆಲವರಿಗೆ ಚಹಾದೊಂದಿಗೆ ಏನನ್ನಾದರೂ ತಿನ್ನುವ ಅಭ್ಯಾಸವಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? 

ಹೌದು, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ಚಹಾದೊಂದಿಗೆ ಸೇವಿಸುವುದರಿಂದ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಿದ್ದರೆ, ಯಾವ ಆಹಾರಗಳನ್ನು ಮಿಸ್ ಆಗಿಯೂ ಸಹ ಚಹಾದೊಂದಿಗೆ ಸೇವಿಸಬಾರದು ಎಂದು ತಿಳಿಯೋಣ... 

ಇದನ್ನೂ ಓದಿ- ನಿತ್ಯ ಒಂದು ಚಮಚೆ ಈ ಬ್ರೌನ್ ಸೀಡ್ಸ್ ಸೇವಿಸಿದರೆ ವೇಗವಾಗಿ ತೂಕ ಇಳಿಕೆಯಾಗುತ್ತೆ, ಈ ರೀತಿ ಬಳಸಿ!

ಚಹಾದೊಂದಿಗೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು!
ನಿಂಬೆ : 

ನಮ್ಮಲ್ಲಿ ಹಲವರಿಗೆ ಲೆಮನ್ ಟೀ ಎಂದರೆ ಅಚ್ಚುಮೆಚ್ಚು. ನಿಂಬೆ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಚಹಾದಲ್ಲಿ ಕೆಫೀನ್ ಇರುತ್ತದೆ. ಇವೆರಡೂ ಒಟ್ಟಿಗೆ ಬೆರೆತಾಗ ಅದರ ಪರಿಣಾಮ ಉತ್ತಮವಾಗಿರುವುದಿಲ್ಲ. ಹಾಗಾಗಿ, ಚಹಾದೊಂದಿಗೆ ನಿಂಬೆಯನ್ನು ಬೆರೆಸಿ ಸೇವಿಸುವುದರಿಂದ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಇದು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣಗೊಳ್ಳುವಂತೆ ಮಾಡಬಹುದು. 

ಅರಿಶಿನ ಬೆರೆತ ಆಹಾರ: 
ಚಹಾದೊಂದಿಗೆ ಕೆಲವರು ಏನಾದರೂ ಕುರುಕಲು ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಅರಿಶಿನ ಮಿಶ್ರಿತ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಮೊದಲೇ ತಿಳಿಸಿದಂತೆ ಚಹಾದಲ್ಲಿ ಕೆಫಿನ್ ಕಂಡು ಬರುತ್ತದೆ. ಅರಿಶಿನದ ಪ್ರಭಾವ ಬಿಸಿಯಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಸೇವಿಸಿದಾಗ ದೇಹದಲ್ಲಿ ಶಾಖ ಹೆಚ್ಚಾಗಬಹುದು. ಇದರಿಂದ, ತಲೆಸುತ್ತು, ಅತಿಯಾದ ಬೆವರಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಈ ಸಿಂಪಲ್ ಟ್ರಿಕ್ಸ್ ಸೆಕೆಂಡುಗಳಲ್ಲಿ ಶುಗರ್ ಕಡಿಮೆ ಮಾಡುತ್ತೆ..! ಟ್ರೈ ಮಾಡಿ ನೋಡಿ

ಕರಿದ ಆಹಾರಗಳು: 
ಚಹಾ ಜೊತೆಗೆ ಬೋಂಡ, ಬಜ್ಜಿ, ಪಕೋಡ ಇದ್ದರೆ... ಆಹಾ... ಈ ರುಚಿಯನ್ನು ತಿಂದವರೇ ಬಲ್ಲರು. ಆದರೆ, ಟೀ ಜೊತೆಗೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಹೊಟ್ಟೆ ನೋವು, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ, ಇಂತಹ ಆಹಾರ ಪದಾರ್ಥಗಳನ್ನು ಟೀ ಜೊತೆಗೆ ಸೇವಿಸಬಾರದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News