Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?

ಈ ಜೀವಿಗಳು ಕನಸಿನಲ್ಲಿ ಕಂಡರೆ ಆ ವ್ಯಕ್ತಿ ಅದೃಷ್ಟವೇ ಬದಲಾಗುತ್ತದೆಯಂತೆ. ಅಲ್ಲದೆ ಅದೃಷ್ಟ ಬದಲಾಗುವ ಹೊತ್ತಿಗೇ ಈ ಜೀವಿಗಳು ಕನಸಿನಲ್ಲಿ ಕಾಣಿಸುತ್ತದೆ ಎಂದೂ ಹೇಳಲಾಗುತ್ತದೆ. 

Written by - Ranjitha R K | Last Updated : Aug 22, 2021, 01:01 PM IST
  • ಅದೃಷ್ಟವಂತರಷ್ಟೇ ಕಾಣುತ್ತಾರೆ ಈ ಕನಸನ್ನು
  • ಕನಸಿನಲ್ಲಿ ಬಿಳಿ ನವಿಲು, ಆನೆ, ಹಾವು ಕಾಣುವುದು ಶುಭಕರ
  • ಈ ಕನಸುಗಳು ಅಪಾರ ಸಂಪತ್ತು ಮತ್ತು ಸಂತೋಷವನ್ನು ತರುತ್ತವೆ
Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?  title=
ಈ ಕನಸುಗಳು ಅಪಾರ ಸಂಪತ್ತು ಮತ್ತು ಸಂತೋಷವನ್ನು ತರುತ್ತವೆ (file photo)

ನವದೆಹಲಿ : ಸುಪ್ತ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳ ಹೊರತಾಗಿ, ಕನಸುಗಳು ಭವಿಷ್ಯದ ಘಟನೆಗಳನ್ನೂ ಸೂಚಿಸುತ್ತವೆ. ಸ್ವಪ್ನ ಶಾಸ್ತ್ರದಲ್ಲಿ (Swapna Shastra), ಪ್ರತಿಯೊಂದು ರೀತಿಯ ಕನಸಿನ ಶುಭ ಮತ್ತು ಅಶುಭ ಅರ್ಥಗಳನ್ನು ಹೇಳಲಾಗಿದೆ. ಕೆಲವು ಕನಸುಗಳು ಜೀವನದಲ್ಲಿ ಸಂತೋಷ-ಆಸ್ತಿ, ವೈಭವ ಮತ್ತು ಸಮೃದ್ಧಿಯ ಆಗಮನದ ಸೂಚನೆಯಾಗಿರುತ್ತದೆ. ಹಾಗೆಯೇ ಈ ಜೀವಿಗಳು ಕನಸಿನಲ್ಲಿ ಕಂಡರೆ ಆ ವ್ಯಕ್ತಿ ಅದೃಷ್ಟವೇ ಬದಲಾಗುತ್ತದೆಯಂತೆ. ಅಲ್ಲದೆ ಅದೃಷ್ಟ ಬದಲಾಗುವ ಹೊತ್ತಿಗೇ ಈ ಜೀವಿಗಳು ಕನಸಿನಲ್ಲಿ ಕಾಣಿಸುತ್ತದೆ ಎಂದೂ ಹೇಳಲಾಗುತ್ತದೆ. 

ಈ ಕನಸುಗಳು ಬಂದರೆ ಅದೃಷ್ಟದ ಬಾಗಿಲು ತೆರೆದಂತೆ ..!
ಬಿಳಿ ಹಾವು: ಅಂದಹಾಗೆ, ಹಾವಿನ ಕನಸು (Sanke in dream) ಬಿತ್ತೆಂದರೆ ಜನ ಗಾಬರಿಯಾಗುತ್ತಾರೆ. ಹಾವು ಕನಸಿನಲ್ಲಿ ಬಂದರೆ ಏನೋ ಅಶುಭ ಸಂಭವಿಸುತ್ತದೆ ಎಂದು ಹೆದರುವವರೇ ಹೆಚ್ಚು. ಹಾವಿನ ಕನಸು ಸಾಮಾನ್ಯವಾಗಿ ಹೆಚ್ಚಿನವರು ಕಾಣುತ್ತಾರೆ. ಆದರೆ ಕನಸಿನಲ್ಲಿ ಬಿಳಿ ಹಾವು (white snake) ಕಾಣುವುದು ಬಹಳ ಕಡಿಮೆ. ಕನಸಿನಲ್ಲಿ ಬಿಳಿ ಹಾವು, ಚಿನ್ನದ ಬಣ್ಣ ಅಥವಾ ಹೊಳೆಯುವ ಹಾವು ಕಂಡುಬಂದರೆ, ಅದು ಅದೃಷ್ಟವನ್ನು ತೆರೆಯುವ ಸಂಕೇತವಾಗಿದೆ. 

ಇದನ್ನೂ ಓದಿ : Raksha Bandhan 2021 : ಇಂದು ರಕ್ಷಾಬಂಧನ, ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಅತೀ ಪ್ರಮುಖ ಅಂಶಗಳಿವು!

ಬಿಳಿ ಸಿಂಹ: ದುರ್ಗಾ ದೇವಿಯ (Godess Durga) ವಾಹನವಾದ ಸಿಂಹವನ್ನು ಕನಸಿನಲ್ಲಿ ನೋಡುವುದು ತುಂಬಾ ಮಂಗಳಕರ. ಮತ್ತೊಂದೆಡೆ, ಕನಸಿನಲ್ಲಿ ಬಿಳಿ ಸಿಂಹವು ಕಂಡುಬಂದರೆ, ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿಯಾಗಲಿದೆ ಎಂದೇ ಅರ್ಥ. ಇದರೊಂದಿಗೆ, ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಕಾರಾತ್ಮಕತೆ ಕೂಡ ಹೆಚ್ಚಾಗುತ್ತದೆ.

ಬಿಳಿ ಆನೆ: ಶಾಸ್ತ್ರದಲ್ಲಿ ಬಿಳಿ ಆನೆಯನ್ನು (white elephant) ಐರಾವತಿ ಆನೆ ಎಂದು ಕರೆಯಲಾಗುತ್ತದೆ. ಇದು ಇಂದ್ರ ದೇವನ ವಾಹನ. ನಿಮ್ಮ ಕನಸಿನಲ್ಲಿ ಬಿಳಿ ಆನೆ ಬಂದರೆ, ನಿಮ್ಮ ಜೀವನದಲ್ಲಿ ರಾಜಯೋಗ (Raja yoga) ಆರಂಭವಾಗಿದೆ ಎಂಬುದನ್ನು ಸೂಚಿಸುತ್ತದೆ. 

ಬಿಳಿ ನವಿಲು: ನವಿಲನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಕನಸಿನಲ್ಲಿ ಬಿಳಿ ನವಿಲನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಅಪಾರ ಸಂತೋಷವನ್ನು ಪಡೆಯಲಿದ್ದೀರಿ ಎಂದರ್ಥ.

ಇದನ್ನೂ ಓದಿ : Raksha Bandan 2021 : ಈ ದಿನ ರೂಪುಗೊಳ್ಳುತ್ತಿದೆ ಎರಡು ಮಹಾ ಯೋಗ, ಈ ಸಮಯದಲ್ಲಿ ರಾಖಿ ಕಟ್ಟುವುದು ಒಳ್ಳೆಯದು

ಬಿಳಿ ಹಂಸ: ಹಂಸವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಬಿಳಿ ಹಂಸವನ್ನು ನೋಡಿದರೆ, ಶುಭ ಕಾರ್ಯಗಳ ಸಂಕೇತವಾಗಿರುತ್ತದೆ. ಜೊತೆಗೆ ಸಾಕಷ್ಟು ಸಂಪತ್ತು, ಸಂತೋಷವನ್ನು ಪಡೆಯುವ ಸಂಕೇತವಾಗಿದೆ. ಅವಿವಾಹಿತ ವ್ಯಕ್ತಿಯು ಕನಸಿನಲ್ಲಿ ಬಿಳಿ ಹಂಸವನ್ನು ಕಂಡರೆ, ಶೀಘ್ರದಲ್ಲೇ ಮದುವೆಯ (Marriage) ಯೋಗ ಒಲಿದು ಬರುತ್ತದೆ ಎಂದರ್ಥ. ಉತ್ತಮ ಜೀವನ ಸಂಗಾತಿಯನ್ನು ಪಡೆಯುವುದರೊಂದಿಗೆ ಉತ್ತಮ ವೈವಾಹಿಕ ಜೀವನ ಕೂಡ ಪಡೆಯಲಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News