ನವದೆಹಲಿ : ಸೂರ್ಯನು ರಾಶಿ (Sun transit) ಬದಲಾಯಿಸಿ ಧನು ರಾಶಿ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯದಲ್ಲಿ (Astrology) ಸೂರ್ಯನನ್ನು ತಂದೆಯೊಂದಿಗಿನ ಸಂಬಂಧ, ಸಾಮಾಜಿಕ ಮೌಲ್ಯ, ಗೌರವ ಮತ್ತು ಆರೋಗ್ಯದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಸೂರ್ಯನನ್ನು ಗ್ರಹಗಳ ಆತ್ಮ ಎಂದು ಕೂಡಾ ಕರೆಯಲಾಗುತ್ತದೆ. ಸೂರ್ಯನ ರಾಶಿಯ ಬದಲಾವಣೆ ಎಲ್ಲಾ ರಾಶಿಚಕ್ರದ ಚಿಹ್ನೆಗಳ (Zodiac sign) ಮೇಲೆ ಪರಿಣಾಮ ಬೀರಲಿದೆ. ಆದರೆ ಕೆಲವೋನು ರಾಶಿಗೆ ವಿಶೇಷ ಲಾಭವಾಗಲಿದೆ.
ಮೇಷ (Aries) : ಸೂರ್ಯನ ಈ ಸ್ಥಾನ ಬದಲಾವಣೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿಯ ಜೊತೆಗೆ ಹಣವೂ ಉಳಿತಾಯವಾಗುತ್ತದೆ. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ.
ಇದನ್ನೂ ಓದಿ : ನಿಮ್ಮಲ್ಲಿ ಈ ಗುಣಗಳಿದ್ದರೆ ಸಾಡೇ ಸಾತಿ ಸಮಯದಲ್ಲಿಯೂ ಕೃಪೆ ತೋರಲಿದ್ದಾನೆ ಶನಿ
ಸಿಂಹ (Leo) : ಈ ಸಂಚಾರದ ಸಮಯದಲ್ಲಿ ಅದೃಷ್ಟ ಸದಾ ನಿಮ್ಮ ಕಡೆ ಇರುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸುಲಭವಾಗಿ ಸಿಗುತ್ತದೆ. ಪರೀಕ್ಷೆಯಲ್ಲಿ ಸಾಧನೆ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿಯೂ ಯಶಸ್ಸು ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ. ಸಂಬಂಧಗಳಲ್ಲಿ ಸಮಸ್ಯೆಗಳಿರಬಹುದು.
ತುಲಾ (Libra) : ಶತ್ರುಗಳಿಂದ ಮುಕ್ತಿ ಹೊಂದುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ಜೀವನದ ಸಂತೋಷವನ್ನು ಅನುಭವಿಸುವಿರಿ. ನೀವು ಸಹೋದರನಿಂದ ಆರ್ಥಿಕ ಲಾಭವಾಗಲಿದೆ. ಪ್ರಭಾವಿ ವ್ಯಕ್ತಿ ನಿಮ್ಮ ಸ್ನೇಹಿತನಾಗಬಹುದು.
ಧನು ರಾಶಿ (Sagittarius) : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ನೀವು ರಾಜಕೀಯ ಯಶಸ್ಸನ್ನು ಪಡೆಯಬಹುದು. ಸಮಾಜದಲ್ಲಿ ಗೌರವ ಸಿಗಲಿದೆ. ಕುಟುಂಬದಲ್ಲಿ ತಂದೆಯೊಂದಿಗೆ ಉತ್ತಮ ಸಂಬಂಧವು ರೂಪುಗೊಳ್ಳುತ್ತದೆ. ಮಕ್ಕಳಿಗೆ ಸಂತೋಷ ಸಿಗಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಇದನ್ನೂ ಓದಿ : Mercury Transit: ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ
ಕುಂಭ (Aquarius) : ಪ್ರೇಮ ಸಂಗಾತಿ ಉದ್ಯೋಗದಲ್ಲಿ ಪ್ರಗತಿ ಹೊಂದುವರು. ಉದ್ಯೋಗದಲ್ಲಿ ವೇತನ ಹೆಚ್ಚಾಗಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ, ಸಂಗಾತಿಯೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಸರ್ಕಾರಿ ನೌಕರರಿಗೆ ಕೆಲಸದ ಸ್ಥಳದಲ್ಲಿ ಲಾಭವಾಗಲಿದೆ.
ಮೀನ (Pisces): ಉದ್ಯೋಗಸ್ಥರಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ನೀವು ವ್ಯಾಪಾರದಲ್ಲಿ ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುವಿರಿ. ಸಂಚಾರದ ಸಮಯದಲ್ಲಿ ಕೋಪವನ್ನು ನಿಯಂತ್ರಿಸಬೇಕು. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬೆಂಬಲ ಸಿಗುತ್ತದೆ. ಗಂಟಲಿನ ಸಮಸ್ಯೆ ಕಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.