9 ದಿನಗಳ ಬಳಿಕ ಈ ಮೂರು ರಾಶಿಯವರ ಭಾಗ್ಯ ಬೆಳೆಗಲಿದ್ದಾನೆ ಸೂರ್ಯ

ಗ್ರಹಗಳ ರಾಜನಾದ ಸೂರ್ಯನು ಜೂನ್ 15 ರಂದು ರಾಶಿ ಬದಲಾಯಿಸಿ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನ ರಾಶಿಚಕ್ರ ಬದಲಾವಣೆಯು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ ತುಂಬಾ ಮಂಗಳಕರವೆಂದು ಸಾಬೀತಾಗಲಿದೆ. 

Written by - Ranjitha R K | Last Updated : Jun 6, 2022, 05:36 PM IST
  • ಜ್ಯೋತಿಷ್ಯದಲ್ಲಿ ಸೂರ್ಯನಿಗೆ ಬಹಳ ಪ್ರಾಮುಖ್ಯತೆ ಇದೆ.
  • ಸೂರ್ಯನ ರಾಶಿ ಪರಿವರ್ತನೆ ಜಾತಕದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
  • 9 ದಿನಗಳ ನಂತರ ಸೂರ್ಯ ರಾಶಿ ಬದಲಾಯಿಸಲಿದ್ದಾನೆ
9 ದಿನಗಳ ಬಳಿಕ ಈ ಮೂರು ರಾಶಿಯವರ ಭಾಗ್ಯ ಬೆಳೆಗಲಿದ್ದಾನೆ ಸೂರ್ಯ  title=
Surya Transit in Gemini 2022 effect (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ ಸೂರ್ಯನಿಗೆ ಬಹಳ ಪ್ರಾಮುಖ್ಯತೆ ಇದೆ. ಸೂರ್ಯನನ್ನು ಯಶಸ್ಸು, ಗೌರವ, ತಂದೆ, ಗುರು, ಆರೋಗ್ಯಕ್ಕೆ ಸಂಬಂಧಿಸಿಡ ಗ್ರಹ ಎಂದು ಹೇಳಲಾಗುತ್ತದೆ. ಸೂರ್ಯನ ರಾಶಿ ಪರಿವರ್ತನೆ ವ್ಯಕ್ತಿಯ ಜೀವನದ  ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 9 ದಿನಗಳ ನಂತರ ಅಂದರೆ ಜೂನ್ 15 ರಂದು ಸೂರ್ಯನು ತನ್ನ ರಾಶಿಯನ್ನು ಬದಲಿಸಿ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧಣ ರಾಶಿಗೆ ಸೂರ್ಯನ ಪ್ರವೇಶವು ಕೆಲವರಿಗೆ ಅದೃಷ್ಟ ಮತ್ತು ಕೆಲವರಿಗೆ ದುರದೃಷ್ಟವನ್ನು ಹೊತ್ತು ತರಲಿದೆ. ಮಿಥುನ ರಾಶಿಗೆ ಸೂರ್ಯನ ಪ್ರವೇಶ ಈ ಕೆಳಗಿನ ರಾಶಿಯವರಿಗೆ ಶುಭ ಫಲವನ್ನು ಕರುಣಿಸಲಿದ್ದಾನೆ.  

ಈ ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾನೆ ಸೂರ್ಯ :  
ವೃಷಭ: ವೃಷಭ ರಾಶಿಯವರಿಗೆ ಸೂರ್ಯನ ಸಂಕ್ರಮಣವು ಬಹಳಷ್ಟು ಲಾಭವನ್ನು ನೀಡುತ್ತದೆ. ಬರಬೇಕಾಗಿದ್ದ ಹಣವು ಈ ಸಮಯದಲ್ಲಿ ಕೈ ಸೇರುತ್ತದೆ. ಇದು ಈ ರಾಶಿಯವರ ಆರ್ಥಿಕ ಸ್ಥಿತಿಯನ್ನು ಹೆಚ್ಚು ಬಲಪಡಿಸುತ್ತದೆ. ಹಲವು ದಿನಗಳಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ತಾವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಹೊಸ ಉದ್ಯೋಗ ಆಫರ್ ಬರಬಹುದು. ಉದ್ಯೋಗದಲ್ಲಿನ ಬದಲಾವಣೆಯು ನಿಮ್ಮ ಪ್ರಗತಿಯ ಬಾಗಿಲು ತೆರೆಯುತ್ತದೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. 

ಇದನ್ನೂ ಓದಿ :Vastu Tips For Tulsi : ತುಳಸಿ ಗಿಡದ ಜೊತೆಗೆ ಈ ಸಸ್ಯ ನೆಡಿ, ಇದು ಅಪಾರ ಸಂಪತ್ತು- ಯಶಸ್ಸು ನೀಡುತ್ತದೆ!

ಸಿಂಹ: ಸೂರ್ಯನ ರಾಶಿ ಬದಲಾವಣೆಯಿಂದ ಸಿಂಹ ರಾಶಿಯವರ ಆದಾಯ ಹೆಚ್ಚಾಗಲಿದೆ. ಹಣ ಬರಲು ಹೊಸ ಮಾರ್ಗಗಳು ತೆರೆದುಕೊಳ್ಳುತ್ತದೆ. ಹಠಾತ್ ಹಣಕಾಸಿನ ಲಾಭ ಇರುತ್ತದೆ. ವ್ಯಾಪಾರಸ್ಥರ ಲಾಭ ಹೆಚ್ಚಾಗುತ್ತದೆ. ಹೂಡಿಕೆ ಮಾಡಲು ಬಯಸುವವರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು.  

ಕನ್ಯಾ ರಾಶಿ: ಸೂರ್ಯದೇವನ ಮಿಥುನ ರಾಶಿಗೆ ಪ್ರವೇಶಿಸುವುದು ಕನ್ಯಾ ರಾಶಿಯ ಜನರ ವೃತ್ತಿಜೀವನವನ್ನು ಮಂಗಳಕರವಾಗಿಸುತ್ತದೆ. ಈ ಬಾರಿ ಹೊಸ ಕೆಲಸ ಸಿಗಬಹುದು. ಪ್ರಮೋಷನ್-ಇನ್ಕ್ರಿಮೆಂಟ್ ಪಡೆಯುವ ಬಲವಾದ ಅವಕಾಶಗಳೂ ಇವೆ.  ನಿಮ್ಮ ಕೆಲಸಕ್ಕೆ ಜನರಿಂದ ಪ್ರಶಂಸೆ ಸಿಗುತ್ತದೆ.  ಗೌರವ ಹೆಚ್ಚಾಗಲಿದೆ. 

ಇದನ್ನೂ ಓದಿ : Auspicious Gifts: ಈ ಉಡುಗೊರೆಗಳು ಸಿಗುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಯಾವ ಉಡುಗೊರೆ ಯಾವ ಸಂಕೇತ ನೀಡುತ್ತದೆ?

 

( ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News