ಯಾರ ಹಸ್ತದಲ್ಲಿ ಈ ಚಿಹ್ನೆಗಳಿರುತ್ತವೆಯೋ ಅವರು ಜೀವನ ಪೂರ್ತಿ ರಾಜನಂತೆ ಬದುಕುತ್ತಾರೆ

ಅಂಗೈಯಲ್ಲಿರುವ ಈ ಗುರುತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ  ಸ್ವಸ್ತಿಕದಂತಹ ಚಿಹ್ನೆಯು ತುಂಬಾ ಮಂಗಳಕರವಾಗಿರುತ್ತದೆ.

Written by - Zee Kannada News Desk | Last Updated : Feb 22, 2022, 04:24 PM IST
  • ರಾಜನಂತೆ ಸಂತೋಷ ಅನುಭವಿಸುತ್ತಾರೆ
  • ಅಂಗೈಯ ಈ ಚಿಹ್ನೆಗಳು ವಿಶೇಷವಾಗಿರುತ್ತವೆ
  • ಇವರು ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ
ಯಾರ ಹಸ್ತದಲ್ಲಿ ಈ ಚಿಹ್ನೆಗಳಿರುತ್ತವೆಯೋ ಅವರು ಜೀವನ ಪೂರ್ತಿ ರಾಜನಂತೆ ಬದುಕುತ್ತಾರೆ   title=
ಅಂಗೈಯ ಈ ಚಿಹ್ನೆಗಳು ವಿಶೇಷವಾಗಿರುತ್ತವೆ (file photo)

ನವದೆಹಲಿ : ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ (Palmistry)ಅಂಗೈಯ ರೇಖೆಗಳಲ್ಲದೆ ಗುರುತುಗಳಿಗೂ ವಿಶೇಷ ಮಹತ್ವವಿದೆ. ವಿವಿಧ ಪರ್ವತಗಳಲ್ಲಿ ಕಂಡುಬರುವ ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಪ್ರಗತಿ ಮತ್ತು ಅವನತಿಯ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತವೆ (Palm Special Sign). ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ಕೆಲವು ಚಿಹ್ನೆಗಳು ಶುಭ ಸೂಚಕಗಳಾಗಿರುತ್ತವೆ. ಆದರೆ ಕೆಲವು ಅಶುಭ. 

ಅಂಗೈಯಲ್ಲಿರುವ ಈ ಗುರುತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ (Palm Special Sign) . ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ  ಸ್ವಸ್ತಿಕದಂತಹ ಚಿಹ್ನೆಯು ತುಂಬಾ ಮಂಗಳಕರವಾಗಿರುತ್ತದೆ. ತಮ್ಮ ಅಂಗೈಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹೊಂದಿರುವವರು ಅಪಾರ ಸಂಪತ್ತು, ಸಾಮಾಜಿಕ ಪ್ರತಿಷ್ಠೆ ಮತ್ತು ಎಲ್ಲಾ ರೀತಿಯ ಸಂತೋಷಗಳನ್ನು ಪಡೆಯುತ್ತಾರೆ (Palmistry). 

ಇದನ್ನೂ ಓದಿ : ಶೀಘ್ರವೇ ಶನಿದೇವನ ಪ್ರಕೋಪಕ್ಕೆ ಒಳಗಾಗಲಿದೆ ಈ ಎರಡು ರಾಶಿಗಳು, ಆರಂಭವಾಗಲಿದೆ ಶನಿ ಧೈಯಾ

ಕೈಯಲ್ಲಿ ಶಂಖದ ಚಿಹ್ನೆಯಿದ್ದರೆ ತುಂಬಾ ಶುಭ. ಈ ಗುರುತು ಇದ್ದ ವ್ಯಕ್ತಿ ಜೀವನದಲ್ಲಿ ಸಮುದ್ರಯಾನ ಮಾಡುತ್ತಾನೆಯಂತೆ. ಇದರೊಂದಿಗೆ, ಕೈಯಲ್ಲಿ ಈ ಗುರುತು  ಇದ್ದವರಿಗೆ ವಿದೇಶ ಪ್ರವಾಸದ ಯೋಗವೂ (foreign tour yoga) ಇರುತ್ತದೆ.  

ಕೈಯಲ್ಲಿ ತ್ರಿಕೋನದ ಚಿಹ್ನೆ ಇದ್ದರೆ, ವ್ಯಕ್ತಿಯು ದೊಡ್ಡ ಮಟ್ಟದ  ಆಸ್ತಿಯ ಮಾಲೀಕರಾಗಿರುತ್ತಾರೆ. ಅಂತಹವರಿಗೆ ಧನ ಲಾಭಗಳ ಜೊತೆಗೆ ಸಾಮಾಜಿಕ ಪ್ರತಿಷ್ಠೆಯೂ ಸಿಗುತ್ತದೆ (Palmistry). 

ಇದಲ್ಲದೆ ಪದ್ಮದ ಗುರುತು ವ್ಯಕ್ತಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ನೀಡುತ್ತದೆ. ಅಲ್ಲದೆ, ಕೈಯಲ್ಲಿ ಈ ಗುರುತಿದ್ದ ಜನರು ರಾಜನಂತೆ ಜೀವನ ನಡೆಸುತ್ತಾರೆ. ಅವರಿಗೆ ಜೀವನದಲ್ಲಿ ಎಲ್ಲಾ  ಸೌಕರ್ಯಗಳೂ ಸಿಗುತ್ತವೆ. ಅಂಗೈಯಲ್ಲಿ ಚಕ್ರ  ಮತ್ತು ಷಡ್ಭುಜಾಕೃತಿಯ ಚಿಹ್ನೆಯಿದ್ದರೆ,   ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ. 

ಇದನ್ನೂ ಓದಿ : Vastu Tips: ಮನೆಯ ಮುಖ್ಯದ್ವಾರದಲ್ಲಿ ಈ 3 ವಸ್ತುಗಳಿದ್ದರೆ ಕುಟುಂಬದಲ್ಲಿ ಪ್ರೀತಿ ಹೆಚ್ಚಲಿದೆ!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಕತ್ತಿಯ ಗುರುತು ಇದ್ದರೆ ಬಹಳ ಮಂಗಳಕರವಾಗಿರುತ್ತದೆ. ಈ ಚಿಹ್ನೆಯು ವ್ಯಕ್ತಿಯು ತನ್ನ ಜೀವನದಲ್ಲಿ ತುಂಬಾ ಅದೃಷ್ಟಶಾಲಿಯಾಗುತ್ತಾನೆ ಎಂದು ಸೂಚಿಸುತ್ತದೆ. 

ಅಂಗೈಯಲ್ಲಿ ಛತ್ರಿಯ ಗುರುತು ಇದ್ದರೆ, ಆ ವ್ಯಕ್ತಿ ರಾಜನಂತೆ ಜೀವನ ನಡೆಸುತ್ತಾನೆ. ಮತ್ತೊಂದೆಡೆ, ಅಂಗೈಯಲ್ಲಿ ಮೀನಿನ ಚಿಹ್ನೆ ಇದ್ದರೆ ಅದೃಷ್ಟ ಯಾವಾಗಲೂ ಜೊತೆಗೆ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್

Trending News