ಕೆಲವೊಮ್ಮೆ ನೀವು ರಾತ್ರಿ 3 ಗಂಟೆಗೆ ಏಳುತ್ತೀರಿ, ಆಗ ಕೆಟ್ಟ ಆಲೋಚನೆಗಳು ಏಕೆ ಬರುತ್ತವೆ? ಉತ್ತರ ಇಲ್ಲಿದೆ ನೋಡಿ

ಮುಂಜಾನೆ 3 ಅಥವಾ 4ರ ಸುಮಾರಿಗೆ ಸಂಭವಿಸುವ ನರವೈಜ್ಞಾನಿಕ ಬದಲಾವಣೆಗಳ ಬಗ್ಗೆ ವಿಜ್ಞಾನಿಗಳು ಸೂಚಿಸಿದ್ದಾರೆ.

Written by - Puttaraj K Alur | Last Updated : Oct 16, 2021, 06:29 AM IST
  • ಅನೇಕರಿಗೆ ರಾತ್ರಿ 1-3 ಗಂಟೆ ವೇಳೆ ಗಾಢನಿದ್ರೆಯ ಸಮಸ್ಯೆ ಇರುತ್ತದೆ
  • ನಕಾರಾತ್ಮಕ ಆಲೋಚನೆಗಳಿಂದ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ
  • ಹಿಂದೆ ಮಾಡಿದ ಅನೇಕ ತಪ್ಪುಗಳು ರಾತ್ರಿ ವೇಳೆ ನಿಮ್ಮನ್ನು ಕಾಡುತ್ತವೆ
ಕೆಲವೊಮ್ಮೆ ನೀವು ರಾತ್ರಿ 3 ಗಂಟೆಗೆ ಏಳುತ್ತೀರಿ, ಆಗ ಕೆಟ್ಟ ಆಲೋಚನೆಗಳು ಏಕೆ ಬರುತ್ತವೆ? ಉತ್ತರ ಇಲ್ಲಿದೆ ನೋಡಿ title=
ನಿದ್ರಾ ಸಮಸ್ಯೆ ಬಗ್ಗೆ ತಿಳಿದುಕೊಳ್ಳಿ (Photo Courtesy: @Zee News)

ನವದೆಹಲಿ: ರಾತ್ರಿ 1 ರಿಂದ 3 ಗಂಟೆ ನಡುವಿನ ವೇಳೆಯು ನೀವು ಗಾಢ ನಿದ್ರೆ(Deep Sleep)ಯಲ್ಲಿರುವ ಸಮಯ. ಈ ಸಮಯದಲ್ಲಿ ನಿಮ್ಮ ಕಣ್ಣುಗಳು ಇದ್ದಕ್ಕಿದ್ದಂತೆ ತೆರೆದರೆ ಅಥವಾ ಈ ಸಂದರ್ಭದಲ್ಲಿ ನೀವು ಹಿಂದಿನ ಘಟನೆಗಳ ಬಗ್ಗೆ ಯೋಚಿಸಲು ಆರಂಭಿಸಿದರೆ? ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ ಈ ನೆನಪುಗಳು ಋಣಾತ್ಮಕವಾಗಿರುವುದರಿಂದ ನಮ್ಮ ಸಮಸ್ಯೆಗಳು ಬಗೆಹರಿಯುವುದಿಲ್ಲವೆಂದು ನಿಮಗೆ ಅನಿಸುತ್ತದೆ. ಈ ರೀತಿ ಆದಾಗ ನಾವು ಈ ಜಗತ್ತಿನಲ್ಲಿ ಒಬ್ಬಂಟಿಯಾಗಿರುವಂತೆ ತೋರುತ್ತದೆ. ಆದರೆ ಈ ಅನುಭವವು ನಾವು ಯೋಚಿಸುವುದಕ್ಕಿಂತಲೂ ಹೆಚ್ಚು ಭಿನ್ನವಾಗಿದೆ. ಆದರೆ ಇದು ಏಕೆ ಸಂಭವಿಸುತ್ತದೆ? ವಿಜ್ಞಾನಿಗಳು ಇದಕ್ಕೆ ಉತ್ತರ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ದಸರಾದಲ್ಲಿ ಪಾನ್ ತಿನ್ನುವುದು ಏಕೆ ಮುಖ್ಯ? ಮಹತ್ವ ಮತ್ತು ಕಾರಣಗಳನ್ನು ತಿಳಿಯಿರಿ

ರಾತ್ರಿಯಲ್ಲಿ ನಕಾರಾತ್ಮಕ ಆಲೋಚನೆಗಳು ಏಕೆ ಬರುತ್ತವೆ?

ಮುಂಜಾನೆ 3 ಅಥವಾ 4ರ ಸುಮಾರಿಗೆ ಸಂಭವಿಸುವ ನರವೈಜ್ಞಾನಿಕ ಬದಲಾವಣೆ(Neurobiological Changes)ಗಳ ಬಗ್ಗೆ ವಿಜ್ಞಾನಿಗಳು ಸೂಚಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಈ ಸಮಯದಲ್ಲಿ ಕಣ್ಣುಗಳನ್ನು ಹಠಾತ್ತಾಗಿ ತೆರೆದಾಗ ನಮ್ಮ ದೇಹದ ಉಷ್ಣತೆಯು ಹೆಚ್ಚಾಗಲು ಆರಂಭವಾಗುತ್ತದೆ. ನಾವು ಈಗಾಗಲೇ ಸ್ವಲ್ಪ ವಿಶ್ರಾಂತಿ ಪಡೆದಿರುವುದರಿಂದ ದೇಹದ ಹೆಚ್ಚು ನಿದ್ರೆ ಮಾಡುವ ಬಯಕೆಯು ಕಡಿಮೆಯಾಗುತ್ತದೆ. ಆದರೆ ಈ ಸಮಯದಲ್ಲಿ ನಿದ್ರೆಯ ಹಾರ್ಮೋನ್ ಮೆಲಟೋನಿನ್ ಸ್ರವಿಸುವಿಕೆಯು ಉತ್ತುಂಗದಲ್ಲಿರುತ್ತದೆ. ಇದಕ್ಕಾಗಿಯೇ ಒತ್ತಡದ ಹಾರ್ಮೋನ್ ಕಾರ್ಟಿಸೋಲ್(Cortisol) ಮಟ್ಟವು ಬೆಳಿಗ್ಗೆ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಜನರು ತಮ್ಮ ಕೆಟ್ಟ ಅನುಭವಗಳನ್ನು ನೆನಪಿಟ್ಟುಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ಯೋಚಿಸಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ: ಅಕ್ಟೋಬರ್ 17 ರಂದು ಸೂರ್ಯನ ಸ್ಥಾನಪಲ್ಲಟ, ತೆರೆಯಲಿದೆ ಈ 6 ರಾಶಿಗಳ ಭಾಗ್ಯದ ಬಾಗಿಲು

ಸಮಸ್ಯೆಗಳು ಯಾವಾಗಲೂ ಬಗೆಹರಿಯದಂತಿರುತ್ತವೆ

ರಾತ್ರಿ 3 ಗಂಟೆಗೆ ನೀವು ಎದ್ದಾಗ ನಿಮ್ಮ ತಲೆಯಲ್ಲಿ ಹೊಳೆಯುವ ಆಲೋಚನೆಗಳು ಒಂದು ರೀತಿ ಬಗೆಹರಿದಂತಿರುತ್ತವೆ. ಈ ಸಮಯದಲ್ಲಿ ಯಾರಿಗಾದರೂ ಕರೆ ಮಾಡುವ ಮೂಲಕ ನೀವು ಹಿಂದಿನ ತಪ್ಪುಗಳಿಗಾಗಿ ಕ್ಷಮೆ ಕೇಳಲು ಸಾಧ್ಯವಿಲ್ಲ. ನೀವು ತಪ್ಪುಗ್ರಹಿಕೆಯಿಂದ ಪಾರಾಗಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಆ ದಿನ ಮುಗಿಯುವವರೆಗೆ ಕಾಯಬೇಕು. ಆದರೆ ಆ ದಿನ ನಿಮಗೆ ತುಂಬಾ ತಡವಾಗಿರುತ್ತದೆ. ರಾತ್ರಿ ವೇಳೆ ಇದ್ದಕ್ಕಿದ್ದಂತೆ ಯಾರೋ ಒಬ್ಬರನ್ನು ಸಂಪರ್ಕಿಸಿ ನನ್ನ ಹಿಂದಿನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ ಎಂದು ಹೇಳುವ ಧೈರ್ಯ ನಿಮಗೆ ಬರುವುದಿಲ್ಲ. ಹೀಗಾಗಿಯೇ ಬಹುತೇಕ ಜನರು ನಕರಾತ್ಮಕ ಆಲೋಚನೆಯೊಂದಿಗೆ ಕತ್ತಲೆಯಲ್ಲಿಯೇ ಉಳಿಯುತ್ತಾರೆ ಮತ್ತು ಈ ಸಮಸ್ಯೆಗಳು ಎಂದಿಗೂ ಬಗೆಹರಿಯುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News