Surya Grahan: ಈ ದಿನ ವಿದೇಶ ಪ್ರವಾಸ ಬೇಡ, 3 ರಾಶಿಗಳ ಜನರಿಗೆ ಸೂರ್ಯ ಗ್ರಹಣದಿಂದ ಹಾನಿ ಸಂಭವ!

Surya Grahana Date And Time: ಸೂರ್ಯಗ್ರಹಣವು ಒಂದು ಪ್ರಮುಖ ಖಗೋಲೀಯ ಘಟನೆಯಾಗಿದೆ. ಧರ್ಮ ಮತ್ತು ಖಗೋಳಶಾಸ್ತ್ರ ಎರಡರಲ್ಲೂ ಇದು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಏಪ್ರಿಲ್ 2023 ರಲ್ಲಿ ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣದ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಬಹಳ ಜಾಗರೂಕರಾಗಿರಬೇಕು ಎಂದು ಜೋತಿಷ್ಯ ಪಂಡಿತರು ಹೇಳಿದ್ದಾರೆ.  

Written by - Nitin Tabib | Last Updated : Mar 5, 2023, 02:42 PM IST
  • ಏಪ್ರಿಲ್ 2023 ರಲ್ಲಿ ಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತಿದ್ದು,
  • ಈ ಗ್ರಹಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದೆ.
  • ಸೂರ್ಯಗ್ರಹಣವು ಯಾವ ರಾಶಿಗಳ ಜನರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ,
Surya Grahan: ಈ ದಿನ ವಿದೇಶ ಪ್ರವಾಸ ಬೇಡ, 3 ರಾಶಿಗಳ ಜನರಿಗೆ ಸೂರ್ಯ ಗ್ರಹಣದಿಂದ ಹಾನಿ ಸಂಭವ! title=
ಸೂರ್ಯಗ್ರಹಣ ಪ್ರಭಾವ 2023

Solar Eclipse 2023 Effect: 2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ. ಸೂರ್ಯಗ್ರಹಣ-ಚಂದ್ರಗ್ರಹಣವನ್ನು ಹಿಂದೂ ಧರ್ಮದಲ್ಲಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ, ಹೀಗಾಗಿ ಗ್ರಹಣದ ಅವಧಿಯಲ್ಲಿ ಯಾವುದೇ ಮಂಗಳಕರ ಕೆಲಸ ಮತ್ತು ಪೂಜೆ ನಡೆಸಲಾಗುವುದಿಲ್ಲ. ಗ್ರಹಣದ ಸಮಯದಲ್ಲಿ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಏಪ್ರಿಲ್ 2023 ರಲ್ಲಿ ಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತಿದ್ದು, ಈ ಗ್ರಹಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದೆ. ಸೂರ್ಯಗ್ರಹಣವು ಯಾವ ರಾಶಿಗಳ ಜನರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ,

ಏಪ್ರಿಲ್ ತಿಂಗಳ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಅಶುಭವಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣವು ಮೇಷ, ಕನ್ಯಾ, ಸಿಂಹ ರಾಶಿಯವರಿಗೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಈ ಸೂರ್ಯಗ್ರಹಣವು ಈ 3 ರಾಶಿಗಳ ಜನರಿಗೆ ಹಾನಿಯನ್ನುಂಟುಮಾಡುತ್ತದೆ. ಈ ಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿರುವುದರಿಂದ, ಈ ರಾಶಿಯ ಸ್ಥಳೀಯರ ಮೇಲೆ ಇದು ಅತ್ಯಂತ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ 3 ರಾಶಿಗಳ ಜನರು ಕೆಲಸದಲ್ಲಿ ಅಡಚಣೆ, ಒತ್ತಡ, ಹಣದ ನಷ್ಟವನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ-ಮೂರು ದಶಕಗಳ ಬಳಿಕ ಶನಿ-ಗುರುವಿನ ವಿಶೇಷ ಸಂಯೋಜನೆ, 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

ನೀವು ವಿದೇಶ ಪ್ರವಾಸ ಮಾಡುತ್ತಿದ್ದರೆ ಜಾಗರೂಕರಾಗಿರಿ
20 ಏಪ್ರಿಲ್ 2023 ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ ಮತ್ತು ಅದು ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಈ ಸೂರ್ಯಗ್ರಹಣವು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಂತಹ ಸ್ಥಳಗಳಲ್ಲಿ ಗೋಚರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯಗ್ರಹಣದ ಸಮಯದಲ್ಲಿ ಈ ಸ್ಥಳಗಳಲ್ಲಿ ಇರುವ ಜನರ ಮೇಲೆ ಪರಿಣಾಮ ಬೀರುತ್ತದೆ. ಮೇಷ, ಕನ್ಯಾ ಮತ್ತು ಸಿಂಹ ರಾಶಿಯ ಜನರು ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರೆ, ಸೂರ್ಯಗ್ರಹಣದ ಸಮಯದಲ್ಲಿ ವಿಶೇಷ ಕಾಳಜಿವಹಿಸಿ, ಇದರಿಂದ ನೀವು ಸಂಭವನೀಯ ಹಾನಿಯಿಂದ ಪಾರಾಗಬಹುದು.

ಇದನ್ನೂ ಓದಿ-Luxury Life Loving Girls: ಐಶಾರಾಮಿ ಜೀವನ ಇಷ್ಟಪಡ್ತಾರಂತೆ ಈ 4 ರಾಶಿಯ ಪೋರಿಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News