Skin Care Tips: ಬೇಸಿಗೆ ಕಾಲದಲ್ಲಿ ಇವುಗಳನ್ನು ಹಚ್ಚಿದ್ರೆ ಮುಖದ ಕಾಂತಿ ಹೆಚ್ಚುತ್ತದೆ!

Skin Care Tips: ಬೇಸಿಗೆ ಕಾಲ ನಡೆಯುತ್ತಿದೆ. ಈ ಋತುವಿನಲ್ಲಿ ಹೆಚ್ಚಿನವರು ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ. ಕೆಲವು ವಸ್ತುಗಳನ್ನು ಹಚ್ಚುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಮಾಡಬಹುದು.

Written by - Puttaraj K Alur | Last Updated : Mar 30, 2023, 08:53 PM IST
  • ಬೇಸಿಗೆ ಕಾಲದಲ್ಲಿ ಮುಖಕ್ಕೆ ಅಲೋವೆರಾ ಹಚ್ಚಿದ್ರೆ ಉತ್ತಮ ಚರ್ಮ ಪಡೆಯಬಹುದು
  • ಬೇಸಿಗೆಯಲ್ಲಿ ಮುಖಕ್ಕೆ ಮುಲ್ತಾನಿ ಮಿಟ್ಟಿ ಹಚ್ಚುವುದು ತುಂಬಾ ಪ್ರಯೋಜನಕಾರಿ
  • ಬೇಸಿಗೆಯಲ್ಲಿ ಮೊಸರನ್ನು ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ
Skin Care Tips: ಬೇಸಿಗೆ ಕಾಲದಲ್ಲಿ ಇವುಗಳನ್ನು ಹಚ್ಚಿದ್ರೆ ಮುಖದ ಕಾಂತಿ ಹೆಚ್ಚುತ್ತದೆ! title=
ಬೇಸಿಗೆಯಲ್ಲಿ ಮುಖದ ಆರೈಕೆ

ನವದೆಹಲಿ: ಬೇಸಿಗೆ ಕಾಲ ನಡೆಯುತ್ತಿದೆ. ಈ ಋತುವಿನಲ್ಲಿ ಹೆಚ್ಚಿನ ಜನರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ. ಬೇಸಿಗೆಯಲ್ಲಿ ಟ್ಯಾನಿಂಗ್ ಪ್ರಾರಂಭವಾಗುತ್ತದೆ, ಇದರಿಂದ ಚರ್ಮವು ಕಪ್ಪಾಗಿ ಕಾಣಲು ಪ್ರಾರಂಭಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಮುಖದ ಕಾಳಜಿಯ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ. ಆದರೆ ಇದರ ಹೊರತಾಗಿಯೂ ತ್ವಚೆಯು ನಿಸ್ತೇಜವಾಗಿ ಕಾಣುತ್ತದೆ. ಇದರಿಂದ ನೀವು ಚಿಂತಿಸಬೇಕಾಗಿಲ್ಲ, ಏಕೆಂದರೆ ನೀವು ಕೆಲವು ವಸ್ತುಗಳನ್ನು ಹಚ್ಚುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಮಾಡಬಹುದು.

ಬೇಸಿಗೆಯಲ್ಲಿ ಇವುಗಳನ್ನು ಮುಖಕ್ಕೆ ಹಚ್ಚಿಕೊಳ್ಳಿ

ಅಲೋವೆರಾ: ಬೇಸಿಗೆ ಕಾಲದಲ್ಲಿ ಅಲೋವೆರಾವನ್ನು ಮುಖಕ್ಕೆ ಹಚ್ಚಿದರೆ ಸಾಕು. ಅಲೋವೆರಾ ತಂಪಾಗಿರುತ್ತದೆ, ಇದನ್ನು ಮುಖಕ್ಕೆ ಹಚ್ಚುವುದು ಚರ್ಮಕ್ಕೆ ಉತ್ತಮ. ಅಲೋವೆರಾ ಆರ್ಧ್ರಕ ಗುಣ ಹೊಂದಿದ್ದು, ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಸುಂದರವಾಗಿಸುತ್ತದೆ. ಅಲೋವೆರಾ ಮುಖದ ಟ್ಯಾನಿಂಗ್ ಮತ್ತು ಕಂದು ಮಚ್ಚೆಗಳನ್ನು ತೆಗೆದುಹಾಕಲು ಸಹಕಾರಿ. ಮೊದಲು ನೀರಿನಿಂದ ಮುಖ  ತೊಳೆದು, ಬಳಿಕ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ನೀರಿನಿಂದ ತೊಳೆದರೆ ಮುಖವು ಹೊಳೆಯುತ್ತದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಗೊತ್ತಿಲ್ಲದೆ ಕಾಣಿಸಿಕೊಳ್ಳುತ್ತವೆ ಈ ಸೈಲೆಂಟ್ ಕಿಲ್ಲರ್ ಕಾಯಿಲೆಗಳು, ಇಲ್ಲಿವೆ ಎಚ್ಚರಿಕೆಯ ಸಂಕೇತಗಳು!

ಮುಲ್ತಾನಿ ಮಿಟ್ಟಿ: ಬೇಸಿಗೆಯಲ್ಲಿ ಮುಲ್ತಾನಿ ಮಿಟ್ಟಿಯನ್ನು ಮುಖಕ್ಕೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಮುಲ್ತಾನಿ ಮಿಟ್ಟಿ ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಮುಲ್ತಾನಿ ಮಿಟ್ಟಿ ಮುಖದ ತ್ವಚೆ  ತಂಪಾಗಿರಿಸಲು ಸಹ ಇದು ಸಹಕಾರಿ. ಇದನ್ನು ಹಚ್ಚುವುದರಿಂದ ಮೊಡವೆಗಳು ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಇದನ್ನು ಬಳಸಲು 2 ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಂಡು, ರೋಸ್ ವಾಟರ್ ಸೇರಿಸಿ 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ. ಒಣ ತ್ವಚೆ ಇರುವವರು ಮುಲ್ತಾನಿ ಮಿಟ್ಟಿಯನ್ನು ಬಳಸಬಾರದು.

ಮೊಸರು: ಬೇಸಿಗೆಯಲ್ಲಿ ಮೊಸರು ಸೇವಿಸುವುದು ಪ್ರಯೋಜನಕಾರಿ. ಅದೇ ರೀತಿ ಮೊಸರನ್ನು ಮುಖಕ್ಕೆ ಹಚ್ಚುವುದು ಸಹ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ. ಇದರಿಂದ ತ್ವಚೆಯೂ ಮೃದು ಮತ್ತು ಸುಂದರವಾಗುತ್ತದೆ.

ಇದನ್ನೂ ಓದಿ: ಬಿಳಿ ಕೂದಲನ್ನು ಬುಡ ಸಮೇತ ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎರಡು ವಸ್ತು ಬೆರೆಸಿ ಬಳಸಿ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News