Skin Care Tips for Men: ಪುರುಷರಿಗೆ ಸೌಂದರ್ಯ ಸಲಹೆ; ಆಕರ್ಷಕ ತ್ವಚೆಯನ್ನು ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ

Skin Care Tips for Men: ಮಹಿಳೆಯರಂತೆ, ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಹೊಂದಿರುತ್ತಾರೆ, ಇದು ಅವರ ಮುಖದ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ.

Written by - Yashaswini V | Last Updated : Oct 19, 2021, 11:56 AM IST
  • ಮಹಿಳೆಯರಂತೆ, ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಹೊಂದಿರುತ್ತಾರೆ
  • ಮಹಿಳೆಯರಂತೆ ಪುರುಷರು ಕೂಡ ಮೊಡವೆಗಳು, ಕಪ್ಪು ಕಲೆಗಳು, ಡಾರ್ಕ್ ಸರ್ಕಲ್ಸ್, ಡ್ರೈ ಸ್ಕಿನ್ ಹೀಗೆ ಹಲವು ಸಮಸ್ಯೆಗಳನ್ನು ಹೊಂದಿರುತ್ತಾರೆ
  • ಇದು ಅವರ ಮುಖದ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ
Skin Care Tips for Men: ಪುರುಷರಿಗೆ ಸೌಂದರ್ಯ ಸಲಹೆ; ಆಕರ್ಷಕ ತ್ವಚೆಯನ್ನು ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ title=
Men Skin Care Tips: ಪುರುಷರ ಮುಖವನ್ನು ಆಕರ್ಷಕವಾಗಿಸುತ್ತೆ ಈ ಸಿಂಪಲ್ ಟಿಪ್ಸ್

Skin Care Tips for Men: ಸೌಂದರ್ಯ ಎಂದೊಡನೆ ಎಲ್ಲರಿಗೂ ನೆನಪಾಗುವುದು ಹೆಣ್ಣು ಅಥವಾ ಮಹಿಳೆಯರು. ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು ಎಂದು ಬಣ್ಣಿಸುವುದೂ ಉಂಟು. ಆದರೆ ಮಹಿಳೆಯರಂತೆ, ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಮಹಿಳೆಯರಂತೆ ಪುರುಷರು ಕೂಡ ಮೊಡವೆಗಳು, ಕಪ್ಪು ಕಲೆಗಳು, ಡಾರ್ಕ್ ಸರ್ಕಲ್ಸ್, ಡ್ರೈ ಸ್ಕಿನ್ ಹೀಗೆ ಹಲವು ಸಮಸ್ಯೆಗಳನ್ನು ಹೊಂದಿರುತ್ತಾರೆ. ಇದು ಅವರ ಮುಖದ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಆದರೆ ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಪುರುಷರು ಮತ್ತೆ ತಮ್ಮ ಚರ್ಮ ಮತ್ತು ಮುಖವನ್ನು ಆಕರ್ಷಕ ಮತ್ತು ಹೊಳೆಯುವಂತೆ ಮಾಡಬಹುದು. ಈ ಪರಿಹಾರಗಳಿಂದ, ಕಲೆಗಳು, ಮೊಡವೆಗಳು, ಡಾರ್ಕ್ ಸರ್ಕಲ್ಸ್, ಸುಕ್ಕುಗಳು ಮುಂತಾದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದಕ್ಕಾಗಿ ಹೆಚ್ಚು ಶ್ರಮ ಪಡಬೇಕಿಲ್ಲ. ಕೆಲವು ಸಿಂಪಲ್ ಮನೆ ಮದ್ದುಗಳನ್ನು ಟ್ರೈ ಮಾಡಿದರೆ ಸಾಕು.

ಪುರುಷರಿಗೆ ಸೌಂದರ್ಯ ಸಲಹೆ; ಆಕರ್ಷಕ ತ್ವಚೆಯನ್ನು ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ: 
* ಟೊಮ್ಯಾಟೋ ಜ್ಯೂಸ್:

ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ನಿವಾರಣೆಗೆ ಟೊಮ್ಯಾಟೋ ರಾಮಬಾಣ ಇದ್ದಂತೆ. ಟೊಮ್ಯಾಟೋದಲ್ಲಿ ಅಥವಾ ಟೊಮ್ಯಾಟೋ ರಸದಲ್ಲಿ (Tomato Juice) ಬಹಳಷ್ಟು ವಿಟಮಿನ್ ಸಿ ಇರುತ್ತದೆ. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಟೊಮ್ಯಾಟೋ ರಸಕ್ಕೆ ಸ್ವಲ್ಪ ನಿಂಬೆ ರಸವನ್ನು ಮಿಕ್ಸ್ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಯ ಬಾಗಕ್ಕೆ ಮಾಸ್ಕ್ ರೀತಿ ಹಚ್ಚಿ. ಅದು ಒಣಗಿದ ನಂತರ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ- Best Face Scrub: ಈ 2 ವಸ್ತುಗಳನ್ನು ಬೆರೆಸಿ ಸ್ಕ್ರಬ್ ಮಾಡಿ, ಕಲೆ-ಮೊಡವೆ ಮಾಯ; ಹೊಳೆಯುತ್ತೆ ತ್ವಚೆ

ಕಡಲೆ ಹಿಟ್ಟು ಮತ್ತು ಮೊಸರು: 
ಮೊಡವೆಗಳು, ಕಲೆಗಳು, ಟ್ಯಾನಿಂಗ್ ಇತ್ಯಾದಿ ಚರ್ಮದ ಸಮಸ್ಯೆಗಳನ್ನು (Skin Problems) ಹೋಗಲಾಡಿಸಲು ಕಡಲೆ ಹಿಟ್ಟು ಮತ್ತು ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಹಚ್ಚಿ. ಮೊಸರು ಮತ್ತು ಕಡಲೇ ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಅದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 10-15 ನಿಮಿಷಗಳ ನಂತರ ಪೇಸ್ಟ್ ಒಣಗಿದಾಗ, ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಪರಿಹಾರವನ್ನು ಅನುಸರಿಸಿ.

ಇದನ್ನೂ ಓದಿ- Benefits and Harms of Pani Puri: ನೀವೂ ಕೂಡ ಗೋಲ್ಗಪ್ಪ ಪ್ರಿಯರೇ! ಅದರ ಅನುಕೂಲ- ಅನಾನುಕೂಲಗಳ ಬಗ್ಗೆಯೂ ಗೊತ್ತಿರಲಿ

ಸೇಬು:
ಎಣ್ಣೆಯುಕ್ತ ಚರ್ಮ, ಮೊಡವೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸೇಬಿನ ತುಂಡನ್ನು ಚೆನ್ನಾಗಿ ಪೇಸ್ಟ್ ಮಾಡಿ, ನಂತರ 1 ಟೀಚಮಚ ಮೊಸರು, 1 ಟೀಚಮಚ ನಿಂಬೆ ಮಿಶ್ರಣ ಮಾಡಿ ಮತ್ತು ಅದನ್ನು ಮುಖಕ್ಕೆ ಹಚ್ಚಿ. ಇದು ಒಣಗಿದ ನಂತರ 10-15 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

ಈ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಪುರುಷರು ತಮ್ಮ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ನಿಮಗೆ ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಇಲ್ಲದೆ ಇವುಗಳನ್ನು ಅನುಸರಿಸದೇ ಇರುವುದು ಒಳ್ಳೆಯದು.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News