ಚಳಿಗಾಲದಲ್ಲಿ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಸಿಂಪಲ್ ಮನೆಮದ್ದುಗಳು

Home Remedies: ಬೇಸಿಗೆ ಕಾಲದಲ್ಲಿ ಅತಿಯಾದ ಬೆವರಿನಿಂದಾಗಿ ದೇಹದ ದುರ್ವಾಸನೆ ಬರುವುದು ಸಹಜವೇ. ಆದರೆ, ಕೆಲವರಿಗೆ ಚಳಿಗಾಲದಲ್ಲಿಯೂ ಕೂಡ ಈ ಸಮಸ್ಯೆ ಮುಜುಗರಕ್ಕೆ ಕಾರಣವಾಗುತ್ತದೆ. ನೀವೂ ಸಹ ದೇಹದ ದುರ್ವಾಸನೆಯಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಬಯಸಿದರೆ ಅದಕ್ಕಾಗಿ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮಗೆ ಪ್ರಯೋಜನಕಾರಿ ಆಗಲಿವೆ. 

Written by - Yashaswini V | Last Updated : Jan 13, 2023, 12:35 PM IST
  • ಚಳಿಗಾಲದಲ್ಲಿ ದೇಹದ ದುರ್ವಾಸನೆ ಹೋಗಲಾಡಿಸುವುದು ಹೇಗೆ?
  • ಚಳಿಗಾಲದಲ್ಲಿಯೂ ನಿಮ್ಮ ದೇಹವು ದುರ್ವಾಸನೆಯಿಂದ ಕೂಡಿದ್ದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ.
  • ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ದೊರೆಯಲಿದೆ.
ಚಳಿಗಾಲದಲ್ಲಿ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಸಿಂಪಲ್ ಮನೆಮದ್ದುಗಳು  title=
Home Remedies For Body Odor

Home Remedies: ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಇದು ದೇಹದ ದುರ್ವಾಸನೆಗೂ ಕಾರಣವಾಗುತ್ತದೆ. ಆದರೆ, ಕೆಲವರು ಚಳಿಗಾಲದಲ್ಲಿಯೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ವಾಸ್ತವವಾಗಿ, ಚಳಿಯಿಂದಾಗಿ ಕೆಲವರು ನಿತ್ಯ ಸ್ನಾನ ಮಾಡುವುದಿಲ್ಲ. ಇನ್ನೂ ಕೆಲವರಿಗೆ ಅನುವಂಶಿಯವಾಗಿ ಎಲ್ಲಾ ಋತುವಿನಲ್ಲೂ ಬೆವರುವಿಕೆ ಸಮಸ್ಯೆಯಿಂದಾಗಿ ದೇಹದ ದುರ್ವಾಸನೆಗೆ ಇದು ಕಾರಣವಾಗಬಹುದು. ಕಾರಣ ಏನೇ ಇರಲಿ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ದೊರೆಯಲಿದೆ. 

ಚಳಿಗಾಲದಲ್ಲಿ ದೇಹದ ದುರ್ವಾಸನೆಯಿಂದ ಪರಿಹಾರ ಪಡೆಯಲು ಸರಳ ಮನೆಮದ್ದುಗಳು:
ಬೇವಿನ ಎಲೆಗಳು: 

ಆಯುರ್ವೇದ ಗಿಡಮೂಲಿಕೆ ಆಗಿರುವ ಬೇವು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬೇವಿನ ಎಲೆಗಳ ಬಳಕೆಯಿಂದ ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಕಾರಿ ಆಗಲಿದೆ. ಇದಕ್ಕಾಗಿ, ನೀವು ಸ್ನಾನ ಮಾಡುವ ನೀರಿನಲ್ಲಿ 10 ರಿಂದ 15 ಬೇವಿನ ಎಲೆಗಳನು ಹಾಕಿ ಅದರಿಂದ ಸ್ನಾನ ಮಾಡಿ.

ಇದನ್ನೂ ಓದಿ- Cooking Tips: ಈ ಚಳಿಗಾಲದಲ್ಲಿ ಸಾಧಾರಣ ಟೀ ಬದಲು ಬಟರ್ ಟೀ ಟ್ರೈ ಮಾಡಿ ನೋಡಿ

ಸಾಕಷ್ಟು ನೀರು ಕುಡಿಯಿರಿ:
ಚಳಿಗಾಲದಲ್ಲಿ ಕೆಲವರು ಸರಿಯಾಗಿ ನೀರು ಕುಡಿಯುವುದಿಲ್ಲ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದಿದ್ದಾಗಲೂ ಬ್ಯಾಕ್ಟೀರಿಯಾಗಳಿಂದ ದೇಹ ದುರ್ವಾಸನೆ ಬೀರಬಹುದು. ಇದನ್ನು ತಪ್ಪಿಸಲು ಚಳಿಗಾಲದಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. 

ಇದನ್ನೂ ಓದಿ- Hair Care Tips: ತಲೆ ಕೂದಲು ಭಾರೀ ಉದುರುವುದಕ್ಕೆ ಸ್ನಾನ ಮಾಡುವಾಗ ಮಾಡುವ ಈ ತಪ್ಪುಗಳೇ ಕಾರಣ

ಟೊಮ್ಯಾಟೋ:
ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಟೊಮ್ಯಾಟೋ ರಸದಿಂದಲೂ ಕೂಡ ದೇಹದ ದುರ್ವಾಸನೆಯನ್ನು ಹೋಗಲಾಡಿಸಬಹುದು. ವಾಸ್ತವವಾಗಿ, ಟೊಮ್ಯಾಟೋದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿವೆ. ಹಾಗಾಗಿ, ಟೊಮ್ಯಾಟೋ ರಸದಿಂದ ಕಂಕುಳಿನ ಕೆಳಗೆ ಮಸಾಜ್ ಮಾಡಿ ಸ್ವಚ್ಚಗೊಳಿಸುವುದರಿಂದ ದೇಹದ ದುರ್ವಾಸನೆಯನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News