Shukra Rashi Parivartan: 25 ದಿನಗಳ ನಂತರ ಈ 3 ರಾಶಿಯವರಿಗೆ ಮಾಲವ್ಯ ರಾಜಯೋಗದಿಂದ ಹಣದ ಸುರಿಮಳೆ!

ಶುಕ್ರ ಗೋಚರ 2023: ಫೆಬ್ರವರಿ 15ರಂದು ಶುಕ್ರ ಗ್ರಹವು ಮೀನ ರಾಶಿಯಲ್ಲಿ ಸಾಗಲಿದೆ. ಈ ಶುಕ್ರ ಸಂಕ್ರಮದಿಂದ 3 ರಾಶಿಗಳಿಗೆ ಮಾಲವ್ಯ ರಾಜಯೋಗ ಉಂಟಾಗುತ್ತಿದೆ. ಈ ಶುಕ್ರ ಸಂಕ್ರಮದಿಂದ 3 ರಾಶಿಗಳ ಮೇಲೆ ಹಣ ಮತ್ತು ಸೌಕರ್ಯಗಳ ಮಳೆ ಸುರಿಯಲಿದೆ.

Written by - Puttaraj K Alur | Last Updated : Jan 22, 2023, 06:31 AM IST
  • ಮಾಲವ್ಯ ರಾಜಯೋಗದಿಂದ ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳು ಬರಲಿವೆ
  • ಶುಕ್ರ ಸಂಕ್ರಮದಿಂದ ಕರ್ಕಾಟಕ ರಾಶಿಯವರಿಗೆ ಉಂಟಾಗಲಿರುವ ಮಾಲವ್ಯ ರಾಜಯೋಗವು ಸಂತಸ ತರಲಿದೆ
  • ಮೀನ ರಾಶಿಯವರಿಗೆ ಮಾಲವ್ಯ ರಾಜಯೋಗ ಬಹಳ ಶುಭಕರವಾಗಿರಲಿದೆ
Shukra Rashi Parivartan: 25 ದಿನಗಳ ನಂತರ ಈ 3 ರಾಶಿಯವರಿಗೆ ಮಾಲವ್ಯ ರಾಜಯೋಗದಿಂದ ಹಣದ ಸುರಿಮಳೆ!  title=
ಶುಕ್ರ ರಾಶಿ ಪರಿವರ್ತನ

ನವದೆಹಲಿ: ಗ್ರಹಗಳು ದೂರದ ಬಾಹ್ಯಾಕಾಶದಲ್ಲಿ ತಮ್ಮ ಚಲನೆಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೂ ಕಂಡುಬರುತ್ತದೆ. ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಕೆಲವು ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ ಮತ್ತು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಕರ್ಯಗಳು, ಸುಖ-ಸಂಪತ್ತು ಮತ್ತು ಐಶ್ವರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 15ರಂದು ಶುಕ್ರ ಗ್ರಹವು ಮೀನ ರಾಶಿಯಲ್ಲಿ ಸಾಗಲಿದೆ. ಈ ಶುಕ್ರ ಸಂಕ್ರಮದಿಂದ 3 ರಾಶಿಗಳಿಗೆ ಮಾಲವ್ಯ ರಾಜಯೋಗ ಉಂಟಾಗುತ್ತಿದೆ. ಈ ಶುಕ್ರ ಸಂಕ್ರಮದಿಂದ 3 ರಾಶಿಗಳ ಮೇಲೆ ಹಣ ಮತ್ತು ಸೌಕರ್ಯಗಳ ಮಳೆ ಹೆಚ್ಚಾಗಲಿದೆ. ಆ 3 ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯಿರಿ.

ವೃಷಭ ರಾಶಿ: ಮಾಲವ್ಯ ರಾಜಯೋಗದಿಂದ ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳು ಬರಲಿವೆ. ಮಾಲವ್ಯ ರಾಜಯೋಗವು ಜಾತಕದ 11ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಆದಾಯವು ಹೆಚ್ಚಾಗುವುದಲ್ಲದೆ, ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಹೂಡಿಕೆಗೆ ಯೋಜಿಸುತ್ತಿದ್ದರೆ ಈ ಸಮಯವು ಉತ್ತಮವಾಗಿರುತ್ತದೆ.

ಇದನ್ನೂ ಓದಿ: ಸಂಗಾತಿ ಜೋತೆಗಿನ ನಿಮ್ಮ ಸಂಬಂಧ ಸುಮಧುರಗೊಳಿಸಬೇಕೆ? ಇಲ್ಲಿವೆ ಟಿಪ್ಸ್

ಕರ್ಕಾಟಕ ರಾಶಿ: ಶುಕ್ರ ಸಂಕ್ರಮದಿಂದ ಕರ್ಕಾಟಕ ರಾಶಿಯವರಿಗೆ ಉಂಟಾಗಲಿರುವ ಮಾಲವ್ಯ ರಾಜಯೋಗವು ಸಂತಸ ತರಲಿದೆ. ಈ ರಾಜಯೋಗವು ಕರ್ಕ ರಾಶಿಯ 9ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. 9ನೇಯ ಭಾಗವು ವಿದೇಶಗಳ ಸ್ಥಳ ಮತ್ತು ಅದೃಷ್ಟವೆಂದು ಪರಿಗಣಿಸಲಾಗಿದೆ. ಈ ಸಂಚಾರದಿಂದ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ ಮತ್ತು ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಮಾಲವ್ಯ ರಾಜಯೋಗ ಬಹಳ ಶುಭಕರವಾಗಿರಲಿದೆ. ಈ ಸಂಕ್ರಮವು ಜಾತಕದ ಲಗ್ನ ಮನೆಯಲ್ಲಿ ನಡೆಯುತ್ತದೆ. ಆದ್ದರಿಂದ ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡುತ್ತಿದ್ದರೆ, ಅದರಲ್ಲಿ ಲಾಭವನ್ನು ಪಡೆಯುತ್ತೀರಿ. ವೃತ್ತಿಯಲ್ಲಿಯೂ ಉನ್ನತಿಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ವ್ಯಾಪಾರ-ಹೂಡಿಕೆಯಿಂದ ಲಾಭವಾಗಲಿದೆ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News