ಮನೆಯ ಭಾಗ್ಯವನ್ನು ಕೂಡಾ ದೌರ್ಭಾಗ್ಯವಾಗಿ ಬದಲಾಯಿಸಿ ಬಿಡುತ್ತವೆ ಸುತ್ತ ಇರುವ ಈ ಮರ ಗಿಡ ಗಳು

Vastu Tips for Plants: ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯೇ ನೆಲೆಯಾಗಬೇಕು ಎಂದು ಬಯಸುವುದಾದರೆ ಮನೆಯ ಸುತ್ತಲಿನಿಂದ ಈ ಸಸ್ಯಗಳನ್ನು ತೆಗೆದು ಬಿಡಿ.  ಯಾಕೆಂದರೆ ಈ ಸಸ್ಯಗಳು ಮನೆಯ ಸುತ್ತ ಇದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಿದ್ದರೆ ಆ ಸಸ್ಯಗಳು ಯಾವುವು ನೋಡೋಣ.

Written by - Ranjitha R K | Last Updated : Aug 12, 2022, 08:40 AM IST
  • ಯಾವ ಸಸ್ಯಗಳು ಮನೆಯ ಸುತ್ತ ಇರಬಾರದು?
  • ಈ ಸಸ್ಯಗಳು ನಕರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ದೌರ್ಭಾಗ್ಯಕ್ಕೆ ಕಾರಣವಾಗುತ್ತದೆ
ಮನೆಯ ಭಾಗ್ಯವನ್ನು ಕೂಡಾ ದೌರ್ಭಾಗ್ಯವಾಗಿ ಬದಲಾಯಿಸಿ ಬಿಡುತ್ತವೆ ಸುತ್ತ ಇರುವ ಈ ಮರ ಗಿಡ ಗಳು  title=
Vastu for Plants (file photo)

Vastu Tips for Plants: ಮನೆಯನ್ನು ಸುಂದರವಾಗಿಸಲು ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ಜನರು ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಸಸ್ಯಗಳನ್ನು ನೆಡುತ್ತಾರೆ. ಕೆಲವೊಮ್ಮೆ ಕೇವಲ ಸುಂದರ ಕಂಡರೆ ಸಾಕು ಎನ್ನುವ ಉದ್ದೇಶದಿಂದ ಹಿಂದೆ ಮುಂದೆ ಯೋಚಿಸದೆ ಕೆಲವು ಈ ಸಸ್ಯಗಳಲ್ಲಿ ತಂದು ನೆಟ್ಟು ಬಿಡುತ್ತೇವೆ. ಆದರೆ ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ  ತರಬಹುದು.  ಸಮಯಕ್ಕೆ ಸರಿಯಾಗಿ ಅಂಥಹ ಸಸ್ಯಗಳನ್ನು ಮನೆಯಿಂದ ಹೊರ ಹಾಕದಿದ್ದರೆ ಅಥವಾ ಮನೆಯ ಸುತ್ತಲಿನಿಂದ ಕಿತ್ತು ಬಿಸಾಡದಿದ್ದರೆ, ತೊಂದರೆ ಎದುರಿಸಬೇಕಾಗುತ್ತದೆ. 

ಯಾವ ಸಸ್ಯಗಳು ಮನೆಯ ಸುತ್ತ ಇರಬಾರದು : 
ಗೋರಂಟಿ ಗಿಡ : 
ವಾಸ್ತು ಶಾಸ್ತ್ರದ ಪ್ರಕಾರ  ಗೋರಂಟಿ ಗಿಡವನ್ನು ಮನೆಯ ಒಳಗೆ ಅಥವಾ ಹೊರಗೆ ನೆಡಬಾರದು. ಈ ಸಸ್ಯದಲ್ಲಿ ದುಷ್ಟಶಕ್ತಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಈ ಸಸ್ಯವನ್ನು ಎಲ್ಲಿ ನೆಟ್ಟರೂ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಆದ್ದರಿಂದ, ಈ ಗಿಡವನ್ನು ನೆಡಲೂಬಾರದು ಅಥವಾ ಯಾರಿಗೂ ಉಡುಗೊರೆಯಾಗಿ ಕೂಡಾ ನೀಡಬಾರದು.  

ಇದನ್ನೂ ಓದಿ : Zodiac signs : ಈ ರಾಶಿಯವರು ಅದೇನೇ ಆಗಲಿ ಪ್ರೀತಿಸಿದವರನ್ನೇ ಮದುವೆಯಾಗ್ತಾರೆ!

ಅಕೇಶಿಯಾ ಸಸ್ಯ: 
ಅಕೇಶಿಯವನ್ನು ಔಷಧೀಯ ಸಸ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಗಿಡವನ್ನು  ತಪ್ಪಿಯೂ ಮನೆಯ ಒಳಗೆ ಅಥವಾ ಸುತ್ತಮುತ್ತ ಎಲ್ಲಿಯೂ ನೆಡಬಾರದು. ವಾಸ್ತವವಾಗಿ ಈ ಸಸ್ಯವು ಅನೇಕ ಮುಳ್ಳುಗಳನ್ನು ಹೊಂದಿರುತ್ತದೆ. ಮುಳ್ಳುಗಳನ್ನು ಹೊಂದಿರುವ ಸಸ್ಯಗಳು ನಮ್ಮ ಜೀವನದಲ್ಲಿ ಕೂಡಾ ಮುಳ್ಳುಗಳನ್ನು ಹರಡುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.  ಈ ಕಾರಣದಿಂದ ಅಂಥಹ ಸಸ್ಯಗಳನ್ನು ನೆಡುವುದರಿಂದ ಸಂಕಟ ಮತ್ತು ಮಾನಸಿಕ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. 

ಒಣ ಗಿಡಗಳನ್ನು ತಕ್ಷಣ ಮನೆಯಿಂದ ಹೊರಗೆ ಹಾಕಿ:
ಒಣಗುತ್ತಿರುವ ಅಥವಾ ಕೊಳೆಯುತ್ತಿರುವ ಸಸ್ಯಗಳನ್ನು ತಕ್ಷಣವೇ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ತೆಗೆದುಹಾಕಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಒಣಗಿರುವ ಸಸ್ಯಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : ಈ ದಿನದಂದು ತಪ್ಪಿಯೂ ಬಂಗಾರ ಖರೀದಿಸಬೇಡಿ.! ಮನೆಯಲ್ಲಿ ಉಳಿಯುವುದೇ ಇಲ್ಲ ಸಂಪತ್ತು

ಹುಣಸೆ ಗಿಡ :
ಹುಣಸೆಹಣ್ಣು ತಿನ್ನಲು ತುಂಬಾ ರುಚಿ. ಆದರೆ ಅದರ ಗಿಡವನ್ನು  ಮಾತ್ರ ಮನೆಯ ಸುತ್ತ ನೆಡಬಾರದು. ಹುಣಸೆ ಗಿಡದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.  ಆದ್ದರಿಂದ, ಈ ಸಸ್ಯ ಅಥವಾ ಮರ ಮನೆಯ ಸುತ್ತ ಇರಬಾರದು. ವಾಸ್ತು ಶಾಸ್ತ್ರದ ಪ್ರಕಾರ ಯಾವ ಜಾಗದಲ್ಲಿ ಹುಣಸೆ ಮರ ಇರುತ್ತದೆಯೋ ಆ  ಜಾಗದಲ್ಲಿ ಮನೆ ಕಟ್ಟಬಾರದು ಎಂದು ಹೇಳಲಾಗುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News