ಈ ಹೊತ್ತಿನಲ್ಲಿ ಕುಡಿಯುವ ನೀರು ವಿಷದಂತೆ ಕೆಲಸ ಮಾಡುತ್ತದೆ .! ನೀವೂ ಈ ತಪ್ಪು ಮಾಡುತ್ತಿದ್ದರೆ ಸರಿಪಡಿಸಿಕೊಳ್ಳಿ

 ಉತ್ತಮ ಆರೋಗ್ಯದ ಬಗ್ಗೆ ಕೂಡಾ ಚಾಣಾಕ್ಯ ನೀತಿಯಲ್ಲಿ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಆಯುರ್ವೇದವನ್ನು  ಬಲ್ಲವರಾಗಿದ್ದರು. ಹಾಗಾಗಿಯೇ ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಅನುಸರಿಸಬೇಕಾದ ಕೆಲವು ತತ್ವಗಳನ್ನು ಹೇಳಿದ್ದಾರೆ.

Written by - Ranjitha R K | Last Updated : Sep 2, 2022, 03:23 PM IST
  • ಈ ಸಮಯದಲ್ಲಿ ನೀರು ಕುಡಿಯಲೇ ಬಾರದು
  • ಸಲ್ಲದ ಸಮಯದಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಹಾನಿ
  • ನೀರು ಕುಡಿಯಲು ಸರಿಯಾದ ಸಮಯ ಯಾವುದು ?
ಈ ಹೊತ್ತಿನಲ್ಲಿ ಕುಡಿಯುವ ನೀರು ವಿಷದಂತೆ ಕೆಲಸ ಮಾಡುತ್ತದೆ .! ನೀವೂ ಈ ತಪ್ಪು ಮಾಡುತ್ತಿದ್ದರೆ ಸರಿಪಡಿಸಿಕೊಳ್ಳಿ  title=
Chanakya niti health tips (file photo)

ಬೆಂಗಳೂರು : ಆಚಾರ್ಯ ಚಾಣಕ್ಯ ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯ ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಬಗ್ಗೆಯೂ ಹೇಳಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ ಉತ್ತಮ ಆರೋಗ್ಯ, ಸಂತೋಷ-ಯಶಸ್ವಿ ಜೀವನ,  ಸಂಬಂಧಗಳು, ಅಪಾರ ಸಂಪತ್ತನ್ನು ಪಡೆಯಲು ಏನು ಮಾಡಬೇಕು ಎನ್ನುವ ಅಂಶಗಳನ್ನು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೆ, ಉತ್ತಮ ಆರೋಗ್ಯದ ಬಗ್ಗೆ ಕೂಡಾ ಚಾಣಾಕ್ಯ ನೀತಿಯಲ್ಲಿ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಆಯುರ್ವೇದವನ್ನು  ಬಲ್ಲವರಾಗಿದ್ದರು. ಹಾಗಾಗಿಯೇ ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಅನುಸರಿಸಬೇಕಾದ ಕೆಲವು ತತ್ವಗಳನ್ನು ಹೇಳಿದ್ದಾರೆ. ದೇಹಕ್ಕೆ ಬಹಳ ಮುಖ್ಯವಾಗಿರುವುದು ನೀರು. ಈ ನೀರಿನ ಬಗ್ಗೆ ಆಚಾರ್ಯ ಚಾಣಕ್ಯ ವಿಶೇಷ ಸಲಹೆ ನೀಡಿದ್ದಾರೆ. 

ಈ ಸಮಯದಲ್ಲಿ ನೀರು ಕುಡಿಯಲೇ ಬಾರದು :
ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸರಿಯಾದ ಸಮಯಕ್ಕೆ ನೀರನ್ನು ಯಾವಾಗಲೂ ಕುಡಿಯಬೇಕು. ಆದರೆ ತಪ್ಪಾದ ಸಮಯದಲ್ಲಿ ಕುಡಿಯುವ ನೀರು ವಿಷದಂತೆ ಕೆಲಸ ಮಾಡುತ್ತದೆ. ಆಚಾರ್ಯ ಚಾಣಕ್ಯ ಪ್ರಕಾರ, ಊಟ ಮಾಡಿದ ತಕ್ಷಣ ನೀರು ಕುಡಿಯಲೇ ಬಾರದು. ಒಂದೊಮ್ಮೆ ಊಟ ಮಾಡಿದ ಕೂಡಲೇ ನೀರು ಕುಡಿದರೆ ಅದು ವಿಷವಂತೆ. ಇದು ನಮ್ಮ ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಆಹಾರದ ಜೀರ್ಣಕ್ರಿಯೆಯಲ್ಲಿ ಅದು ಅಡಚಣೆಯನ್ನು ಉಂಟುಮಾಡುತ್ತದೆ. ಹಾಗಾಗಿ ಊಟವಾದ ತಕ್ಷಣ ನೀರು ಕುಡಿಯಬಾರದು .  

ಇದನ್ನೂ ಓದಿ : ರೂಪುಗೊಳ್ಳಲಿದೆ ಲಕ್ಷ್ಮೀ ನಾರಾಯಣ ಯೋಗ, ಈ ರಾಶಿಯವರಿಗೆ ಹಣಕಾಸಿನ ತೊಂದರೆಯಿಂದ ಸಿಗಲಿದೆ ಸಂಪೂರ್ಣ ಮುಕ್ತಿ

ನೀರು ಕುಡಿಯಲು ಸರಿಯಾದ ಸಮಯ :
ಆಚಾರ್ಯ ಚಾಣಕ್ಯ ಹೇಳುವಂತೆ,  ಊಟ ಮಾಡಿದ ಅರ್ಧ ಗಂಟೆಯ ನಂತರ ನೀರು ಕುಡಿಯಬೇಕು, ಆಗ ದೈಹಿಕ ಶಕ್ತಿ ಹೆಚ್ಚುತ್ತದೆ. ಆಹಾರವು ಜೀರ್ಣವಾದ ನಂತರ ಕುಡಿಯುವ ನೀರು ದೇಹಕ್ಕೆ ಅತ್ಯುತ್ತಮವಾಗಿರುತ್ತದೆ. ಅದು ದೇಹದಲ್ಲಿ ಔಷಧದಂತೆ ಕಾರ್ಯನಿರ್ವಹಿಸುತ್ತದೆ. ಊಟದ ನಡುವೆ ಒಂದು ಅಥವಾ ಎರಡು ಗುಟುಕು ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಆದರೆ ಊಟದ ಸಮಯದಲ್ಲಿ ಪದೇ ಪದೇ ನೀರು ಕುಡಿಯುವುದು ಅಥವಾ ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ. 

ಇದನ್ನೂ ಓದಿ : Palmistry: ಅಂಗೈಯಲ್ಲಿ ಈ ರೇಖೆಯಿದ್ದರೆ ಯಶಸ್ಸಿನ ಶಿಖರಕ್ಕೇರುತ್ತೀರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News