ಈ ವರ್ಷ 2 ಬಾರಿ ‘ಶನಿ’ ರಾಶಿ ಬದಲಾವಣೆ; 4 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ

ಎರಡೂವರೆ ವರ್ಷಗಳಲ್ಲಿ ರಾಶಿ ಬದಲಾಯಿಸುವ ಶನಿಯು ಈ ವರ್ಷ 2 ಬಾರಿ ರಾಶಿಯನ್ನು ಬದಲಾಯಿಸಲಿದೆ. ಇದರಿಂದ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳು 4 ರಾಶಿಚಕ್ರದ ಜನರಿಗೆ ಮಂಗಳಕರವಾಗಿರುತ್ತದೆ.

Written by - Puttaraj K Alur | Last Updated : Mar 18, 2022, 01:23 PM IST
  • ಈ ವರ್ಷ ಶನಿದೇವನು 2 ಬಾರಿ ರಾಶಿಯನ್ನು ಬದಲಾಯಿಸಲಿದೆ
  • ಶನಿಯ ರಾಶಿ ಬದಲಾವಣೆಯಿಂದ 4 ರಾಶಿಯವರಿಗೆ ಭರ್ಜರಿ ಲಾಭ
  • ಉದ್ಯೋಗದಲ್ಲಿ ಬಡ್ತಿ, ಧನಲಾಭದ ಜೊತೆಗೆ ಗೌರವವೂ ಹೆಚ್ಚಾಗಲಿದೆ
ಈ ವರ್ಷ 2 ಬಾರಿ ‘ಶನಿ’ ರಾಶಿ ಬದಲಾವಣೆ; 4 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ title=
ಶನಿದೇವ 2 ಬಾರಿ ರಾಶಿ ಬದಲಾಯಿಸಲಿದೆ

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೆಂದು ಹೇಳಲಾಗಿದೆ. ಶನಿದೇವ ಎರಡೂವರೆ ವರ್ಷಕ್ಕೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾರೆ(Saturn Transit 2022). 2021ರಲ್ಲಿ ಶನಿ ಒಮ್ಮೆಯೂ ರಾಶಿಯನ್ನು ಬದಲಾಯಿಸಲಿಲ್ಲ, ಆದರೆ 2022ರಲ್ಲಿ 2 ಬಾರಿ ರಾಶಿಯನ್ನು ಬದಲಾಯಿಸಲಿದೆ.

ವಾಸ್ತವವಾಗಿ ಒಂದು ಸರಿ ಮಾತ್ರ ಶನಿ(Shani Dev)ಯು ಸಾಮಾನ್ಯವಾಗಿ ಸಾಗುತ್ತದೆ. ಅಂದರೆ ಏಪ್ರಿಲ್ 29ರಂದು ಶನಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಈ ವೇಳೆ ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಆದರೆ ಶನಿ ಜೂನ್ 5ರಿಂದ ಹಿಂದೆ ಸರಿದು ಮತ್ತೆ ಮಕರ ರಾಶಿಯಲ್ಲಿ ಉಳಿಯುತ್ತದೆ. ತದನಂತರ 2023ರ ಜನವರಿ 17ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ. ಬಳಿಕ ಮತ್ತೆ ಕುಂಭ ರಾಶಿಗೆ ಬರಲಿದೆ. ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದ್ದು, ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು 2 ಬಾರಿ ರಾಶಿಚಕ್ರ ಬದಲಾಯಿಸುವುದರಿಂದ ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ.

ಇದನ್ನೂ ಓದಿ: ವಧು ಆರಿಸುವ ವೇಳೆ ಮಾಡುವ ಈ ತಪ್ಪು ಜೀವನಪರ್ಯಂತ ಪಶ್ಚಾತಾಪ ಪಡುವಂತೆ ಮಾಡುತ್ತದೆ

ಈ ರಾಶಿಯವರ ಮೇಲೆ ಶನಿಯ ಕೃಪೆ ಇರುತ್ತದೆ

2022ರಲ್ಲಿ ಶನಿಯ 2 ಬಾರಿ ರಾಶಿಚಕ್ರದ ಬದಲಾವಣೆ(Shani Rashi Parivartan)ಯು 4 ರಾಶಿಯ ಜನರಿಗೆ ತುಂಬಾ ಮಂಗಳಕರವೆಂದು ಹೇಳಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಮೇಷ ರಾಶಿ: ಶನಿಯ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಇವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಬಡ್ತಿ-ಹೆಚ್ಚಳದೊಂದಿಗೆ ಗೌರವವೂ ಸಿಗಲಿದೆ. ನಿಮಗೆ ಹೊಸ ಉದ್ಯೋಗವೂ ಸಿಗಬಹುದು. ಕೆಲಸದ ಸ್ಥಳದಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಏಪ್ರಿಲ್ 29ರ ನಂತರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈಗ ನಿಮ್ಮ ಶ್ರಮಕ್ಕೆ ಪೂರ್ಣಫಲ ಸಿಗುತ್ತದೆ. ನೀವು ಬಯಸಿದ ಕೆಲಸವನ್ನು ನೀವು ಪಡೆಯಬಹುದು. ಮೇಲಧಿಕಾರಿಯೊಂದಿಗೆ ಉತ್ತಮ ಸಂಬಂಧವಿರುತ್ತದೆ. ಹೆಚ್ಚಿನ ಮೆಚ್ಚುಗೆ ಸಿಗಲಿದ್ದು, ನಿಮಗೆ ಧನಲಾಭವೂ ಆಗಲಿದೆ.   

ಇದನ್ನೂ ಓದಿ: Rahu Gochar 2022: ಇಂದಿನಿಂದ ಬದಲಾಗಲಿದೆ ಈ 5 ರಾಶಿಯವರ ಭವಿಷ್ಯ, ಸುರಿಯಲಿದೆ ಹಣದ ಮಳೆ

ಧನು ರಾಶಿ: ಈ ಸಮಯವು ಧನು ರಾಶಿಯವರಿಗೆ ಬಹಳಷ್ಟು ಹಣವನ್ನು ತರುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಕಷ್ಟು ಶಕ್ತಿ ಇರುತ್ತದೆ. ವಿದೇಶ ಪ್ರಯಾಣವೂ ಸಾಧ್ಯವಾಗಬಹುದು. ವಿಶೇಷವಾಗಿ ಉದ್ಯಮಿಗಳಿಗೆ ಈ ಸಮಯವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಮಕರ ರಾಶಿ: ಈ ಸಮಯವು ಮಕರ ರಾಶಿ(Shani Gochar 2022)ಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ನಿಮಗೆ ಸಾಕಷ್ಟು ಧನಲಾಭವಿರುತ್ತದೆ. ಈ ಸಮಯವು ವೃತ್ತಿ-ವ್ಯವಹಾರಕ್ಕೆ ತುಂಬಾ ಒಳ್ಳೆಯದು. ಹೊಸ ಉದ್ಯೋಗ ಸಿಗಬಹುದು. ಹಳೆಯ ಉದ್ಯೋಗದಲ್ಲಿ ಬಡ್ತಿ-ಹೆಚ್ಚಳ ಕಾಣಬಹುದು. ಅದೇ ರೀತಿ ಈ ಸಮಯವು ಉದ್ಯಮಿಗಳಿಗೆ ಸಾಕಷ್ಟು ಲಾಭವನ್ನು ತರುತ್ತದೆ.  

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News