Shani Dosha Remedies: ಈ ಸರಳ ಮಾರ್ಗಗಳನ್ನು ಅನುಸರಿಸಿದರೆ ಸುಲಭವಾಗಿ ಸಿಗಲಿದೆ ಶನಿ ಪ್ರಕೋಪದಿಂದ ಮುಕ್ತಿ

Shani Dosha Remedies: ಶನಿಯು ರಾಜನನ್ನು ಭಿಕ್ಷುಕ ಮತ್ತು ಭಿಕ್ಷುಕನನ್ನು ರಾಜನನ್ನಾಗಿ ಮಾಡಬಲ್ಲ ಅತ್ಯಂತ ಪ್ರಭಾವಶಾಲಿ ದೇವರು ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಶನಿ ಮಹಾತ್ಮನ ಕೋಪವನ್ನು ತಪ್ಪಿಸಲು, ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ.  ಹಾಗಿದ್ದರೆ, ಶನಿ ದೋಷವನ್ನು ತೊಡೆದುಹಾಕಲು ಇರುವ ಅತ್ಯಂತ ಪರಿಣಾಮಕಾರಿ ಪರಿಹಾರಗಳು ಯಾವುವು ನೋಡೋಣ.  

Written by - Ranjitha R K | Last Updated : Apr 28, 2022, 11:58 AM IST
  • ಶನಿ ಪ್ರಕೋಪದಿಂದ ಮುಕ್ತಿ ಪಡೆಯುವುದು ಹೇಗೆ ?
  • ಶನಿ ಕಾಟದಿಂದ ಪರಿಹಾರಕ್ಕೆ ಇಲ್ಲಿದೆ ಸುಲಭ ಮಾರ್ಗ
  • ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಾಕು
Shani Dosha Remedies: ಈ  ಸರಳ ಮಾರ್ಗಗಳನ್ನು ಅನುಸರಿಸಿದರೆ ಸುಲಭವಾಗಿ ಸಿಗಲಿದೆ ಶನಿ ಪ್ರಕೋಪದಿಂದ ಮುಕ್ತಿ    title=
Shani Dosha Remedies (file photo)

ಬೆಂಗಳೂರು : Shani Dosha Remedies : ಎರಡೂವರೆ ವರ್ಷಗಳ ನಂತರ ಶನಿಯು ತನ್ನ ರಾಶಿಯನ್ನು ಬದಲಾಯಿಸಿಕೊಂಡು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಕೆಲವರಿಗೆ ಶನಿಯ ಸಾಡೇ ಸಾತಿ  ಆರಂಭವಾದರೆ ಇನ್ನು ಕೆಲವರು ಶನಿ ದೆಸೆಯಿಂದ ಮುಕ್ತಿ ಪಡೆಯುತ್ತಾರೆ. ಶನಿ ಸಾಡೇ ಸತಿಯಲ್ಲಿ ಏಳೂವರೆ ವರ್ಷ ಮತ್ತು ಧೈಯ್ಯಾದಲ್ಲಿ ಎರಡೂವರೆ ವರ್ಷ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಶನಿಯು ಕರ್ಮಕ್ಕನುಸಾರವಾಗಿ ಫಲವನ್ನು ನೀಡುವುದರಿಂದ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಬೇಕು.

ಶನಿ ದೋಷವನ್ನು ತೊಡೆದುಹಾಕಲು ಪರಿಣಾಮಕಾರಿ ಪರಿಹಾರಗಳು :
ಶನಿ ದೋಷವನ್ನು ತೊಡೆದುಹಾಕಲು ಶನಿವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಅನುಸರಿಸುವ ಕೆಲವು ಕ್ರಮಗಳಿಂದ ಗರಿಷ್ಠ ಫಲವನ್ನು ಪಡೆಯಬಹುದು. 

ಇದನ್ನೂ ಓದಿ : ಅಕ್ಷಯ ತೃತೀಯದಂದು ಇದನ್ನು ದಾನ ಮಾಡಿದರೆ ಚಾರ್ ಧಾಮ್ ಯಾತ್ರೆ ಮಾಡಿದಷ್ಟೇ ಫಲ

ಶನಿಯ ಕೋಪವನ್ನು ತೊಡೆದುಹಾಕಲು ಉತ್ತಮ ಮಾರ್ಗವೆಂದರೆ ಆಂಜನೇಯನ ಆಶ್ರಯ  ಪಡೆಯುವುದು. ಸಂಕಟ ಹರಣ ಹನುಮಂತನ ಕೃಪೆಯು ಎಲ್ಲಾ ತೊಂದರೆಗಳಿಂದ ಪಾರು  ಮಾಡುತ್ತದೆ. ಇದಕ್ಕಾಗಿ ಪ್ರತಿನಿತ್ಯ ಹನುಮಾನ್ ಚಾಲೀಸಾ ಓದಬೇಕು. ವಿಶೇಷವಾಗಿ ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ದೇವಸ್ಥಾನಕ್ಕೆ ಹೋಗಿ ಪ್ರಸಾದವನ್ನು ಅರ್ಪಿಸಬೇಕು. ಇದರೊಂದಿಗೆ  ಸುಂದರಕಾಂಡವನ್ನೂ ಪಠಿಸಬೇಕು. 

ಶಿವನ ಆರಾಧನೆಯು ಶನಿಯ ಕೋಪವನ್ನು ತೊಡೆದುಹಾಕಲು ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ ಶಿವ ಸಹಸ್ರನಾಮ ಅಥವಾ ಶಿವನ ಪಂಚಾಕ್ಷರಿ ಮಂತ್ರವನ್ನು ನಿಯಮಿತವಾಗಿ ಪಠಿಸಿ. ಇದು ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. 

ಶನಿಯು ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ, ಆದ್ದರಿಂದ ಶನಿದೇವನಿಗೆ ಇಷ್ಟವಾದವುಗಳನ್ನು ಮಾಡಿ. ನಿಮ್ಮ ಹೆತ್ತವರನ್ನು ಗೌರವಿಸಿ, ಅವರ ಸೇವೆ ಮಾಡಿ. ಮಹಿಳೆಯರನ್ನು ಗೌರವಿಸಿ. ಅಸಹಾಯಕರಿಗೆ ಮತ್ತು ಬಡವರಿಗೆ ಸಹಾಯ ಮಾಡಿ. 

ಇದನ್ನೂ ಓದಿ:  ಸೂರ್ಯ ಗ್ರಹಣ: 100 ವರ್ಷಗಳ ನಂತರ ಸೂರ್ಯಗ್ರಹಣದಲ್ಲಿ ವಿಶಿಷ್ಟ ಕಾಕತಾಳೀಯ!

ಶನಿ ಸಂಬಂಧಿ ವಸ್ತುಗಳನ್ನು ಮಾಡುವುದರ ಜೊತೆಗೆ ಮನೆಯಲ್ಲಿ ಶಮಿ ಗಿಡ ನೆಟ್ಟರೆ ಶನಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ. ನಿಮಗೆ ಶಮಿ ಗಿಡವನ್ನು ನೆಡಲು ಸಾಧ್ಯವಾಗದಿದ್ದರೆ, ಕನಿಷ್ಠ 3 ಇಂಚು ಉದ್ದದ ಶಮೀ ವೃಕ್ಷದ ಬೇರನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಅದನ್ನು ನಿಮ್ಮ ಬಲಗೈಗೆ ಧರಿಸಿ. ಇದರೊಂದಿಗೆ ಶನಿಯು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ. 

ಬೆಲ್ಲ ಅಥವಾ ಸಕ್ಕರೆ ಬೆರೆಸಿದ ಸಿಹಿ ನೀರನ್ನು ಅಶ್ವಥದ ಮರಕ್ಕೆ ಅರ್ಪಿಸಿ. ಅದರ ನಂತರ  ದೀಪವನ್ನು ಬೆಳಗಿ. ಪ್ರತಿ ಶನಿವಾರ ಈ ಕೆಲಸವನ್ನು ಮಾಡಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.  

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News