ಸಾಡೇ ಸಾತಿ ಶನಿ ಧೈಯಾ ಸಮಯದಲ್ಲಿಯೂ ಈ ರಾಶಿಯವರನ್ನು ಕಾಡುವುದಿಲ್ಲವಂತೆ ಶನಿ ದೇವ..!

Favorite Zodiac of Shani Dev: ಕೆಲವೊಂದು ರಾಶಿಗಳಲ್ಲಿ ಶನಿ ದೆಸೆ ನಡೆಯುತ್ತಿದ್ದರೂ ಅವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಯಾಕಂದರೆ ಈ ರಾಶಿಗಳು ಶನಿದೇವ ಪ್ರಿಯ ರಾಶಿಗಳಾಗಿವೆ ಎಂದು ಹೇಳಲಾಗುತ್ತದೆ.

Written by - Ranjitha R K | Last Updated : Nov 21, 2022, 03:14 PM IST
  • ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಿರುತ್ತದೆ.
  • ಶನಿ ದೆಸೆಯ ಅವಧಿಯಲ್ಲಿ ಶನಿ ಮಹಾತ್ಮ ಬಹಳವಾಗಿ ಕಾಡಿ ಬಿಡುತ್ತಾನೆ.
  • ಕಷ್ಟ ನೋವುಗಳ ಸರಮಾಲೆಯನ್ನೇ ತಂದೊಡ್ಡಿ ಬಿಡುತ್ತಾನೆ.
 ಸಾಡೇ ಸಾತಿ ಶನಿ ಧೈಯಾ ಸಮಯದಲ್ಲಿಯೂ ಈ ರಾಶಿಯವರನ್ನು ಕಾಡುವುದಿಲ್ಲವಂತೆ ಶನಿ ದೇವ..!  title=
Favorite Zodiac of Shani Dev

Favorite Zodiac of Shani Dev : ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಯಾರ ಜಾತಕದಲ್ಲಿ ಶನಿಯ ಸಾಡೆಸಾತಿ  ಅಂದರೆ ಏಳೂವರೆ ವರ್ಷದ ಶನಿ ದೆಸೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ನಡೆಯಿತ್ತಿರುತ್ತದೆಯೋ ಅವರನ್ನು ಶನಿ ಮಹಾತ್ಮ ಬಹಳವಾಗಿ ಕಾಡಿ ಬಿಡುತ್ತಾನೆ. ಕಷ್ಟ ನೋವುಗಳ ಸರಮಾಲೆಯನ್ನೇ ತಂದೊಡ್ಡಿ ಬಿಡುತ್ತಾನೆ.  ಆದರೂ ಕೆಲವೊಂದು ರಾಶಿಗಳಲ್ಲಿ ಶನಿ ದೆಸೆ ನಡೆಯುತ್ತಿದ್ದರೂ ಅವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಯಾಕಂದರೆ ಈ ರಾಶಿಗಳು ಶನಿದೇವ ಪ್ರಿಯ ರಾಶಿಗಳಾಗಿವೆ ಎಂದು ಹೇಳಲಾಗುತ್ತದೆ.  ಈ ರಾಷಯಾಯವರ ಮೇಲೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ.
 
ಶನಿಯ ನೆಚ್ಚಿನ ರಾಶಿ ಗಳು : 
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಆದರೆ ಶುಕ್ರನ ಜೊತೆಗೆ ಶನಿದೇವನೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ.  ಸಾಡೇ ಸಾತಿ , ಶನಿ ಧೈಯ್ಯಾ ನಡೆಯುತ್ತಿದ್ದರೂ ಈ ರಾಶಿಯವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಮಾತ್ರವಲ್ಲ ಜೀವನದಲ್ಲಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಾರೆ. 

ಇದನ್ನೂ ಓದಿ : ಈ ಗುಣಗಳಿರುವ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆಯಂತೆ.!

ತುಲಾ ರಾಶಿ : ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಶುಕ್ರನ ಜೊತೆಗೆ ಶನಿಯ ಆಶೀರ್ವಾದವೂ ಇವರ ಮೇಲಿರುತ್ತದೆ. ತುಲಾ ರಾಶಿಯ ವ್ಯಕ್ತಿಯ ಜಾತಕದಲ್ಲಿ ಉಳಿದ ಗ್ರಹಗಳು ತುಂಬಾ ಅಶುಭವಾಗಿಲ್ಲದಿದ್ದರೆ, ಶನಿದೇವರು ಶನಿ ದೆಸೆಯ ಅವಧಿಯಲ್ಲಿಯೂ ಕೆಟ್ಟ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಶನಿಯ ಅನುಗ್ರಹದಿಂದ ತುಲಾ ರಾಶಿಯ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. 

ಕುಂಭ ರಾಶಿ : ಕುಂಭ ರಾಶಿಯ ಅಧಿಪತಿ ಶನಿಯೇ. ಶನಿಯು ಸಾಮಾನ್ಯವಾಗಿ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಈ ರಾಶಿಯವರ ಮೇಲೆ ಸದಾ ಶನಿಯ ಆಶೀರ್ವಾದವಿರುತ್ತದೆ. ಅವರು ತಮ್ಮ ಜೀವನದಲ್ಲಿ ಅಪಾರ ಹಣ ಮತ್ತು ಗೌರವವನ್ನು ಪಡೆಯುತ್ತಾರೆ. ಈ ಜನರು ಯಾವುದೇ ಹಣಕಾಸಿನ ಮುಗ್ಗಟ್ಟು ಎದುರಿಸುವುದಿಲ್ಲ. ಶನಿ ಸಾಡೆಸಾತಿ ಮತ್ತು ಧೈಯಾದ ಸಮಯದಲ್ಲಿಯೂ ಇವರು ನಷ್ಟದ ಬದಲು ಲಾಭವನ್ನೇ ಗಳಿಸುತ್ತಾರೆ.

ಇದನ್ನೂ ಓದಿ : Som Pradosh Vrat 2022: ಸೋಮ ಪ್ರದೋಷದಂದು ಆಯುಷ್ಮಾನ್ ಯೋಗ, ಶಿವನ ಈ ಮಂತ್ರಗಳನ್ನು ಪಠಿಸುವುದರಿಂದ ಇಷ್ಟಾರ್ಥ ಸಿದ್ಧಿ

ಧನು ರಾಶಿ : ಧನು ರಾಶಿಯ ಅಧಿಪತಿ ಗುರು. ಗುರು ಮತ್ತು ಶನಿಯು ಸಮ ಸಂಬಂಧವನ್ನು ಹೊಂದಿರುವುದರಿಂದ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಸಾಡೇಸಾತಿ ಮತ್ತು ಧೈಯ್ಯಾ ಸಮಯದಲ್ಲಿಯೂ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಬದಲಿಗೆ, ಅವರಿಗೆ ಸ್ಥಾನ, ಹಣ, ಪ್ರತಿಷ್ಠೆ ಮತ್ತು ಎಲ್ಲವನ್ನೂ ನೀಡುತ್ತಾನೆ. 

ಮಕರ ರಾಶಿ : ಶನಿಯು ಮಕರ ರಾಶಿಯ ಅಧಿಪತಿಯೂ ಹೌದು. ಶನಿ ದೇವ ಈ ರಾಶಿಯನ್ನು ತುಂಬಾ ಪ್ರೀತಿಸುತ್ತಾನೆ. ಆದ್ದರಿಂದ ಅವನು ಯಾವಾಗಲೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ.  ಶನಿಯ ಕೃಪೆಯಿಂದ ಈ ರಾಶಿಯವರು ಜೀವನದಲ್ಲಿ ಸಾಕಷ್ಟು ಪ್ರಗತಿ ಪಡೆಯುತ್ತಾರೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News