ಕನಸಿನಲ್ಲಿ ಈ ರೂಪದಲ್ಲಿ ಮಹಿಳೆಯನ್ನು ನೋಡಿದರೆ ಶುಭ ಸಂಕೇತ, ಸಂಪತ್ತು ಹರಿದುಬರಲಿದೆ!

ಸಾಮಾನ್ಯವಾಗಿ ಜನರು ಕನಸು ಕಂಡ ನಂತರ ಮರೆತುಬಿಡುತ್ತಾರೆ. ಆದರೆ ಕೆಲವು ಕನಸುಗಳು ನಿದ್ದೆಯಿಂದಎದ್ದ ನಂತರವೂ ನಮ್ಮ ಮೆದುಳಿನಲ್ಲಿ ಉಳಿಯುತ್ತವೆ. ಕನಸಿನಲ್ಲಿ ಮಹಿಳೆಯನ್ನು ನೋಡುವುದು ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನೂ ನೀಡುತ್ತದೆ.

Written by - Puttaraj K Alur | Last Updated : Jan 15, 2022, 07:17 AM IST
  • ಕನಸಿನಲ್ಲಿ ಮಹಿಳೆಯ ಆಗಮನವು ವಿಶೇಷ ಸಂಕೇತವನ್ನು ನೀಡುತ್ತದೆ
  • ಕನಸುಗಳು ಶುಭ ಮತ್ತು ಅಶುಭ ಫಲಿತಾಂಶಗಳನ್ನು ಹೊಂದಿರುತ್ತವೆ
  • ಕನಸುಗಳು ನಿಮ್ಮ ಮುಂದಿನ ಭವಿಷ್ಯವನ್ನು ಸೂಚಿಸುವ ಸಂಕೇತಗಳಾಗಿವೆ
ಕನಸಿನಲ್ಲಿ ಈ ರೂಪದಲ್ಲಿ ಮಹಿಳೆಯನ್ನು ನೋಡಿದರೆ ಶುಭ ಸಂಕೇತ, ಸಂಪತ್ತು ಹರಿದುಬರಲಿದೆ! title=
ಕನಸಿನಲ್ಲಿ ಮುದುಕಿಯನ್ನು ಕಂಡರೆ ಏನಾಗುತ್ತೆ ಗೊತ್ತಾ..?

ನವದೆಹಲಿ: ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ(Dream Interpretation) ಒಂದೊಂದು ಅರ್ಥವಿದೆ. ಒಬ್ಬ ವ್ಯಕ್ತಿಯು ಕನಸಿನಲ್ಲಿ ಏನು ನೋಡಿದರೂ ಅದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಜನರು ಕನಸು ಕಂಡ ನಂತರ ಮರೆತುಬಿಡುತ್ತಾರೆ. ಆದರೆ ಕೆಲವು ಕನಸುಗಳು ನಿದ್ದೆಯಿಂದ ಎದ್ದ ನಂತರವೂ ನಮ್ಮ ಮೆದುಳಿನಲ್ಲಿ ಉಳಿಯುತ್ತವೆ. ಕನಸು(Dreams)ಗಳು ಶುಭ ಮತ್ತು ಅಶುಭ ಫಲಿತಾಂಶಗಳನ್ನು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ ಕನಸಿನಲ್ಲಿ ಮಹಿಳೆಯನ್ನು ನೋಡುವುದು ಶುಭ ಅಥವಾ ಅಶುಭ ಚಿಹ್ನೆಗಳನ್ನು ನೀಡುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.

ಕನಸಿನಲ್ಲಿ ಮುದುಕಿ ಕಂಡರೆ..?

ಕನಸಿನಲ್ಲಿ ವಯಸ್ಸಾದ ಮಹಿಳೆ(Old Women In Dream)ಯನ್ನು ನೋಡುವುದು ಶುಭ ಸಂಕೇತ. ಕನಸಿನ ವಿಜ್ಞಾನದ ಪ್ರಕಾರ ಇಂತಹ ಕನಸು ಕಾಣುವುದು ಸಂಪತ್ತು ಮತ್ತು ಗೌರವವನ್ನು ಹೆಚ್ಚಿಸುತ್ತದಂತೆ. ಅದೇ ರೀತಿ ಜೀವನದ ಕೆಲವು ಹಂತದಲ್ಲಿ ನಿಮಗೆ ಹೆಚ್ಚಿನ ಸಂಪತ್ತು ವೃದ್ಧಿಯಾಗಲಿದೆ.

ಇದನ್ನೂ ಓದಿ: ಮನೆಯಲ್ಲಿ ಪಾರಿವಾಳ ಅಥವಾ ಜೇನು ಹುಳು ಗೂಡು ಕಟ್ಟಿವೆಯಾ? ಹಾಗಿದ್ರೆ, ಎಚ್ಚರದಿಂದಿರಿ!

ಮೇಕಪ್‌ನಲ್ಲಿ ಮಹಿಳೆ ಕಂಡರೆ..?

ಕನಸಿನ ಗ್ರಂಥಗಳ ಪ್ರಕಾರ ಕನಸಿನಲ್ಲಿ ಮಹಿಳೆ(Woman In Dream) ಸಂಪೂರ್ಣವಾಗಿ ಮೇಕ್ಅಪ್ನಲ್ಲಿ ಕಾಣಿಸಿಕೊಂಡರೆ ಅದು ಒಳ್ಳೆಯ ಕನಸು. ಇದರಿಂದ ಸ್ಥಗಿತಗೊಂಡಿರುವ ನಿಮ್ಮ ಕೆಲಸಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ.

ಕನಸಿನಲ್ಲಿ ಸುಂದರ ಮಹಿಳೆಯನ್ನು ಅಪ್ಪಿಕೊಳ್ಳುವುದು

ಕನಸಿನಲ್ಲಿ ಸುಂದರ ಮಹಿಳೆಯನ್ನು ತಬ್ಬಿಕೊಳ್ಳುವುದು ತುಂಬಾ ಮಂಗಳಕರ(Reality Of Dreams) ಕನಸು. ಅಂತಹ ಕನಸುಗಳು ಶೀಘ್ರದಲ್ಲೇ ಸಂತೋಷ ಮತ್ತು ಏನಾದರೂ ಸಾಧಿಸುವ ಶುಭ ಸಂಕೇತವನ್ನು ನೀಡುತ್ತವೆ. ಮತ್ತೊಂದೆಡೆ ಒಬ್ಬ ಮಹಿಳೆ ಪುರುಷನೊಂದಿಗೆ ತಬ್ಬಿಕೊಳ್ಳುವಾಗ ಕನಸು ಕಂಡರೆ ಅಂತಹ ಕನಸಿನ ಫಲವು ಅವಳಿಗೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಕನಸು ಮುಂಬರುವ ಸಮಯದಲ್ಲಿ ದೈಹಿಕ ನೋವುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: Auspicious Planets: ಇಂತಹ ಯುವತಿಯರಿಗೆ ಮನಮೆಚ್ಚಿದ ಜೀವನ ಸಂಗಾತಿ ಸಿಗುತ್ತಾರೆ

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News