ಕೇವಲ ಒಂದು ತಿಂಗಳಿನಲ್ಲಿ ನಿಮ್ಮ ಕೂದಲುದುರುವಿಕೆ ಸಮಸ್ಯೆಗೆ ಹೇಳಿ ಗುಡ್ ಬೈ

Home Remedies For Hair Loss: ನಿಮಗೂ ಕೂಡ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಚಿಂತೆಬಿಡಿ, ನಿಮ್ಮ ದಿನಚರಿ ಮತ್ತು ಆಹಾರ ಪದ್ದತಿಯ ಬಗ್ಗೆ ಈ ರೀತಿ ಗಮನಹರಿಸಿ ಕೇವಲ ಒಂದೇ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ. 

Written by - Yashaswini V | Last Updated : Oct 14, 2023, 11:39 AM IST
  • ಕೂದಲು ಉದುರುವಿಕೆಯನ್ನು ತಡೆಯಲು ಆಯುರ್ವೇದದಲ್ಲಿ ಹಲವಾರು ಕ್ರಮಗಳನ್ನು ಸೂಚಿಸಲಾಗಿದೆ.
  • ಇದನ್ನು ಅಳವಡಿಸಿಕೊಳ್ಳುವುದರಿಂದ ಕೇವಲ ಒಂದೇ ಒಂದು ತಿಂಗಳಿನಲ್ಲಿ ಕೂದಲುದುರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಬಹುದು ಎಂದು ನಂಬಲಾಗಿದೆ.
ಕೇವಲ ಒಂದು ತಿಂಗಳಿನಲ್ಲಿ ನಿಮ್ಮ ಕೂದಲುದುರುವಿಕೆ ಸಮಸ್ಯೆಗೆ ಹೇಳಿ ಗುಡ್ ಬೈ  title=

Home Remedies For Hair Loss: ಬದಲಾದ ಜೀವನ ಶೈಲಿಯಲ್ಲಿ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಲ್ಲೂ ಕೂಡ ಸರ್ವೇ ಸಾಮಾನ್ಯವಾದ ಸಮಸ್ಯೆಯಾಗಿದೆ. ಕೂದಲು ಉದುರುವಿಕೆಗೆ ಆಯುರ್ವೇದದಲ್ಲಿ ಅನೇಕ ಕಾರಣಗಳನ್ನು ಉಲ್ಲೇಖಿಸಲಾಗಿದೆ. 

ಕೂದಲುದುರುವಿಕೆಗೆ ಕಾರಣ: 
ಕೂದಲುದುರುವಿಕೆ ಸಮಸ್ಯೆಗೆ ಹಲವು ಕಾರಣಗಳಿವೆ. ಕೆಲವರಲ್ಲಿ ಇದು ಅನುವಂಶಿಕ ಸಮಸ್ಯೆ ಆಗಿದ್ದರೆ, ಇನ್ನೂ ಕೆಲವರಲ್ಲಿ ಹಾರ್ಮೋನುಗಳ ಅಸಮರ್ಪಕತೆ, ಕೆಟ್ಟ ಜೀವನಶೈಲಿ, ಒತ್ತಡ, ನಿದ್ರೆ ಕೊರತೆ, ಧೂಳು ಹೀಗೆ ಹಲವು ಕಾರಣಗಳಿರಬಹುದು. 

ಆಯುರ್ವೇದ  ಸಲಹೆ: 
ಕೂದಲು ಉದುರುವಿಕೆಯನ್ನು ತಡೆಯಲು ಆಯುರ್ವೇದದಲ್ಲಿ ಹಲವಾರು ಕ್ರಮಗಳನ್ನು ಸೂಚಿಸಲಾಗಿದೆ. ಇದನ್ನು ಅಳವಡಿಸಿಕೊಳ್ಳುವುದರಿಂದ ಕೇವಲ ಒಂದೇ ಒಂದು ತಿಂಗಳಿನಲ್ಲಿ ಕೂದಲುದುರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಬಹುದು ಎಂದು ನಂಬಲಾಗಿದೆ. 

ಇದನ್ನೂ ಓದಿ- ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

ದೇಸಿ ತುಪ್ಪದೊಂದಿಗೆ ಈ 2 ಪದಾರ್ಥ ಸೇವಿಸಿ: 
ಆಯುರ್ವೇದದ ಪ್ರಕಾರ, ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, 1/2 ಚಮಚ ಆಮ್ಲಾ ಪುಡಿಯೊಂದಿಗೆ 1/2 ಚಮಚ  ಆಮ್ಲಾ ಪುಡಿ ಮತ್ತು 1/2 ಚಮಚ ದೇಸಿ ತುಪ್ಪವನ್ನು ಬೆರೆಸಿ ದಿನಕ್ಕೆರಡು ಬಾರಿ ಅಗಿದು ತಿನ್ನುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ಎಲ್ಲಾ ಮೂರು ದೋಷಗಳು (ವಾತ, ಪಿತ್ತ ಮತ್ತು ಕಫ) ದೇಹದಲ್ಲಿ ನಿಯಂತ್ರಣದಲ್ಲಿರುತ್ತವೆ.

ಪೋಷಕಾಂಶಯುಕ್ತ ಆಹಾರ: 
ಇದಲ್ಲದೆ, ಕೂದಲಿನ ಬೆಳವಣಿಗೆ ಮತ್ತು ಅದರ ಆರೋಗ್ಯವು ನೇರವಾಗಿ ಪೋಷಣೆಗೆ ಸಂಬಂಧಿಸಿದೆ, ಆದ್ದರಿಂದ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ನೀವು ತೆಗೆದುಕೊಳ್ಳುವ ಆಹಾರವು ಜೀವಸತ್ವಗಳಿಂದ ಪ್ರೋಟೀನ್‌ಗಳವರೆಗೆ ಎಲ್ಲಾ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರಬೇಕು ಎಂಬುದನ್ನೂ ನೆನಪಿನಲ್ಲಿಡಿ. 

ನಿಮ್ಮ ದೈನಂದಿನ ಆಹಾರದಲ್ಲಿರಲಿ ಈ ಪದಾರ್ಥಗಳು: 
ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಸೊಪ್ಪು-ತರಕಾರಿಗಳು, ಆಮ್ಲಾ, ಸೌತೆಕಾಯಿ, ಮಜ್ಜಿಗೆ, ಬಾದಾಮಿ, ವಾಲ್ನಟ್ಸ್, ಕಡಲೆಬೀಜ, ಎಳ್ಳು, ಜೀರಿಗೆ, ತೆಂಗಿನಕಾಯಿ, ತ್ರಿಫಲ, ಮೆಂತ್ಯ ಬೀಜಗಳು, ದಾಳಿಂಬೆ, ಫೆನ್ನೆಲ್ ಬೀಜಗಳು, ಮೊಟ್ಟೆ ಮತ್ತು ವಿಟಮಿನ್ ಬಿ 12ನ ಇತರ ಮೂಲಗಳನ್ನು ತಪ್ಪದೇ ಸೇರಿಸಿ. ಇದೂ ಕೂಡ ನಿಮ್ಮ ಕೂದಲುದುರುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!

ಕೂದಲುದುರುವಿಕೆಯನ್ನು ತಪ್ಪಿಸಲು ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿ: 
>> ಕೊಬ್ಬರಿ ಎಣ್ಣೆ, ಅರಳೆಣ್ಣೆಯಂತಹ ತೈಲಗಳಿಂದ ನಿಮ್ಮ ತಲೆಯನ್ನು ನಿಯಮಿತವಾಗಿ ಮಸಾಜ್ ಮಾಡಿ.
>> ನೆತ್ತಿಯನ್ನು ಹೆಚ್ಚು ಹೊತ್ತು ಒಣಗಲು ಬಿಡಬೇಡಿ.
>> ನಿತ್ಯ ತಪ್ಪದೇ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ. 
>> ಪ್ರತಿದಿನ ಶಿರಶಾಸನ ಮತ್ತು ಸರ್ವಾಂಗಾಸನದಂತಹ ಯೋಗವನ್ನು ಮಾಡಿ. ಇದು ತಲೆಯ ಕಡೆಗೆ ರಕ್ತದ ಹರಿವನ್ನು ಹೆಚ್ಚಿಸುವುದರಿಂದ, ಕೂದಲುದುರುವಿಕೆ ಸಮಸ್ಯೆ ನಿವಾರಿಸಲು ಮತ್ತು ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News