Shani Retrograde Effect: 141 ದಿನಗಳವರೆಗೆ ಶನಿಯ ಹಿಮ್ಮುಖ ಚಲನೆ, ಯಾರಿಗೆ ಲಾಭ-ಯಾರಿಗೆ ನಷ್ಟ? ಇಲ್ಲಿ ತಿಳಿದುಕೊಳ್ಳಿ

Shani Vakri Effect: ಜೂನ್ 5 ರಂದು ಕುಂಭ ರಾಶಿಯಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಶನಿಯ ಈ ನಡೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಶನಿಯ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯ ಜನರಿಗೆ ಲಾಭ ಸಿಗಲಿದೆ ಮತ್ತು ಯಾವ ರಾಶಿಯ ಜನರಿಗೆ ನಷ್ಟ ಸಂಭವಿಸಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jun 7, 2022, 07:53 PM IST
  • ಜೂನ್ 5 ರಂದು ಕುಂಭ ರಾಶಿಯಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ.
  • ಶನಿಯ ಈ ನಡೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
  • ಶನಿಯ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯ ಜನರಿಗೆ ಲಾಭ ಸಿಗಲಿದೆ ಮತ್ತು ಯಾವ ರಾಶಿಯ ಜನರಿಗೆ ನಷ್ಟ ಸಂಭವಿಸಲಿದೆ ತಿಳಿದುಕೊಳ್ಳೋಣ ಬನ್ನಿ.
Shani Retrograde Effect: 141 ದಿನಗಳವರೆಗೆ ಶನಿಯ ಹಿಮ್ಮುಖ ಚಲನೆ, ಯಾರಿಗೆ ಲಾಭ-ಯಾರಿಗೆ ನಷ್ಟ? ಇಲ್ಲಿ ತಿಳಿದುಕೊಳ್ಳಿ  title=
Shani Vakri 2022

Shani Vakri 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ಸ್ಥಾನವನ್ನು ಪರಿವರ್ತಿಸಿದರೆ, ಅದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಇರಲಿದೆ ಎನ್ನಲಾಗುತ್ತದೆ. ಜೂನ್ 5, 2022 ರಂದು ಶನಿ ಕುಂಭ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಿದ್ದಾನೆ. ಎಲ್ಲಾ ಗ್ರಹಗಳಲ್ಲಿ ಶನಿ ತುಂಬಾ ನಿಧಾನ ಗತಿಯಲ್ಲಿ ಚಲಿಸುವ ಗ್ರಹವಾಗಿರುವ ಕಾರಣ, ಆತನ ಒಂದು ಸಣ್ಣ ಸ್ಥಾನ ಪರಿವರ್ತನೆ ಕೂಡ ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜೂನ್ 5 ರಂದು ಶನಿ ತನ್ನ ಮಾರ್ಗವನ್ನು ಬಿಟ್ಟು ವಕ್ರ ನಡೆ ಅನುಸರಿಸಿರುವ ಕಾರಣ. ಆತನ ಈ ದೊಡ್ಡ ಸ್ಥಾನ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಬೀಳಲಿದೆ. 

ಯಾವುದೇ ಒಂದು ಗ್ರಹ ಎರಡು ಗತಿಯಲ್ಲಿ ಚಲಿಸುತ್ತದೆ. ಒಂದು ತನ್ನ ನೇರ ನಡೆ ಮತ್ತು ಮತ್ತೊಂದು ವಕ್ರ ನಡೆ. ಹೆಸರೇ ಸೂಚಿಸುವಂತೆ ನೇರ ನಡೆ ಗ್ರಹಗಳ ನೇರ ನಡೆಯಾಗಿದೆ. ವಕ್ರ ನಡೆ ಗ್ರಹಗಳ ಹಿಮ್ಮುಖ ಚಲನೆಯಾಗಿದೆ. ಶನಿ ಕುಂಭ ರಾಶಿಯಲ್ಲಿ ಒಟ್ಟು 141 ದಿನಗಳ ಕಾಲ ವಕ್ರ ನಡೆಯನ್ನು ಅನುಸರಿಸಲಿದೆ. ಸಾಮಾನ್ಯ ಜನರ ಜೀವನದ ಮೇಲೆ ಇದರ ಪ್ರಭಾವ ಏನಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ. 

>> ಶನಿಯ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟವನ್ನು ಎದುರಿಸುವವರ ಮೇಲೆ ಶನಿಯ ಈ ವಕ್ರ ನಡೆ ವಿಶೇಷ ಪ್ರಭಾವ ಬೀರಲಿದೆ. ಇವರ ಪಾಲಿಗೆ ಹಲವು ರೀತಿಯ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಇದರ ಜೊತೆಗೆ ಅಜ್ಞಾತ ಭಯ ಇವರ ಮನಸ್ಸಿಗೆ ಅಶಾಂತಿಯನ್ನು ತರಲಿದೆ.

>> ಇನ್ನೊಂದೆಡೆ ಶನಿಯ ಮಹಾದೆಸೆ ಹಾಗೂ ಅಂತರ್ದೆಸೆಯಿಂದ ಸಾಗುತ್ತಿರುವವರ ಮೇಲೆ ವಕ್ರಶನಿಯ ಪ್ರತಿಕೂಲ ಪರಿಣಾಮಗಳು ಗೋಚರಿಸಲಿವೆ. 

>> ಕೈಗೂಡಿದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿ ಕೈಜಾರಲಿವೆ. ಕೌಟುಂಬಿಕ ಜೀವನದಲ್ಲಿ ವ್ಯಕ್ತಿಗೆ ಕಲಹಗಳು ಎದುರಾಗಲಿವೆ. 

>> ಯಾರ ಜನ್ಮ ಜಾತಕದಲ್ಲಿ ಶನಿ ಲಗ್ನ ಹಾಗೂ ಸಪ್ತಮ ಭಾವದಲ್ಲಿ ವಿರಾಜಮಾನನಾಗಿದ್ದಾನೆಯೋ, ಅವರ ಮೇಲೆ ಶನಿಯ ಈ ಹಿಮ್ಮುಖ ಚಲನೆಯ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಿರುವಾಗ ವಿವಾಹದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಈಗಾಗಲೇ ವಿವಾಹವಾಗಿರುವವರ ವೈವಾಹಿಕ ಜೀವನದಲ್ಲಿ ಕಲಹ ಮತ್ತು ಅಶಾಂತಿ ಇರಲಿದೆ. 

>> ಭೂಮಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿರುವವರಿಗೆ ಈ ಅವಧಿಯಲ್ಲಿ ಆಕಸ್ಮಿಕ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. 

>> ಒಟ್ಟಾರೆ ಹೇಳುವುದಾದರೆ, ಈ ಅವಧಿಯಲ್ಲಿ ಕರ್ಕ, ವೃಶ್ಚಿಕ, ಮಕರ, ಕುಂಭ ಹಾಗೂ ಮೀನ ರಾಶಿಯ ಜಾತಕದವರು ವಿಶೇಷ ಎಚ್ಚರಿಕೆವಹಿಸಬೇಕಾದ ಅವಶ್ಯಕತೆ ಇದೆ. ಈ ಅವಧಿಯಲ್ಲಿ ನಿಮಗೆ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ತರ್ಕ-ವಿತರ್ಕಗಳಿಂದ ಆದಷ್ಟು ದೂರ ಉಳಿಯಿರಿ. ಸಾಕಷ್ಟು ಯೋಚಿಸಿ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳಿ.

ಇದನ್ನೂ ಓದಿ-Emerald Panna stone: ಪಚ್ಚೆ ರತ್ನ ಧರಿಸುವುದರಿಂದ ಈ ರಾಶಿಯವರಿಗೆ ಬರುತ್ತೆ ಅದಷ್ಟ!

>> ಇನ್ನೊಂದೆಡೆ ಮೇಷ, ಕನ್ಯಾ ಹಾಗೂ ಧನು ರಾಶಿಯ ಜಾತಕದವರಿಗೆ ಈ ಸಮಯ ಲಾಭದಾಯಕ ಸಾಬೀತಾಗಲಿದೆ. ಆದರೆ, ಜನ್ಮ ಜಾತಕದಲ್ಲಿ ಶನಿ ಪೀಡೆ ಇಲ್ಲದಿದ್ದರೆ ಮಾತ್ರ ಇದರ ಲಾಭ ನಿಮಗೆ ಸಿಗಲಿದೆ.

ಇದನ್ನೂ ಓದಿ-Name Astrology: ಗಂಡನನ್ನು ಹುಚ್ಚರಂತೆ ಪ್ರೀತಿಸುವರು ಈ ಹುಡುಗಿಯರು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News