Rudraksha- ರುದ್ರಾಕ್ಷಿ ಉತ್ಪತ್ತಿಯಾದದ್ದು ಹೇಗೆ, ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ

ಋಷಿ-ಮುನಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ರುದ್ರಾಕ್ಷವನ್ನು ಧರಿಸುತ್ತಾರೆ ಏಕೆಂದರೆ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಂದು ನಾವು ನಿಮಗೆ ರುದ್ರಾಕ್ಷದ ಮೂಲದ ಹಿಂದಿನ ಪುರಾಣಗಳ ಬಗ್ಗೆ ಮತ್ತು ಅದನ್ನು ಧರಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ.

Written by - Yashaswini V | Last Updated : Mar 12, 2021, 10:07 AM IST
  • ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ರುದ್ರಾಕ್ಷ ಸಹಾಯ ಮಾಡುತ್ತದೆ
  • ರುದ್ರಾಕ್ಷ ಹೇಗೆ ಹುಟ್ಟಿತು ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ
  • ರುದ್ರಕ್ಷನಿಗೆ ಶಿವನೊಂದಿಗೆ ಆಳವಾದ ಸಂಪರ್ಕವಿದೆ
Rudraksha- ರುದ್ರಾಕ್ಷಿ ಉತ್ಪತ್ತಿಯಾದದ್ದು ಹೇಗೆ, ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ title=
Benefits of wearing Rudraksha

ನವದೆಹಲಿ: ಸಾಧುಗಳು ಮತ್ತು ಸಂತರು ಮಾತ್ರವಲ್ಲದೆ ರುದ್ರಕ್ಷಾ ಹಾರವನ್ನು  (Rudraksha) ಧರಿಸಿರುವ ಸಾಮಾನ್ಯ ಜನರನ್ನು ನೀವು ನೋಡಿರಬೇಕು. ಹೆಚ್ಚಿನ ಮನೆಗಳಲ್ಲಿ  ಮಂತ್ರ ಜಪಿಸಲು ರುದ್ರಾಕ್ಷ/ರುದ್ರಾಕ್ಷಿ ಮಾಲೆಯನ್ನು ಬಳಸಲಾಗುತ್ತದೆ. ವಿಶೇಷವಾಗಿ ಕುಂಭದ ಸಮಯದಲ್ಲಿ ನಾಗಾ ಸಾಧು ರುದ್ರಾಕ್ಷ ಧರಿಸಿರುವುದನ್ನು ನೀವು ನೋಡಿರಬೇಕು. ಹಿಂದೂ ಧರ್ಮದಲ್ಲಿ, ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಶಿವನಿಗೆ ಸಂಬಂಧಿಸಿದೆ. ರುದ್ರಾಕ್ಷ/ರುದ್ರಾಕ್ಷಿ ಸಕಾರಾತ್ಮಕ ಶಕ್ತಿಯನ್ನು (Positive Energy) ಸಂವಹನ ಮಾಡುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ರುದ್ರಾಕ್ಷವನ್ನು ಧರಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ. ರುದ್ರಾಕ್ಷದ ಮೂಲ ಹೇಗೆ ಸಂಭವಿಸಿತು ಮತ್ತು ಅದನ್ನು ಧರಿಸುವುದರಿಂದ ಏನು ಪ್ರಯೋಜನ ಎಂದು ನಾವು ನಿಮಗೆ ಹೇಳುತ್ತಿದ್ದೇವೆ.

ಶಿವನ ಕಣ್ಣೀರಿನಿಂದ ರುದ್ರಾಕ್ಷ ಹುಟ್ಟಿಕೊಂಡಿತು:
ರುದ್ರಾಕ್ಷಾ ರುದ್ರ ಮತ್ತು ಅಕ್ಷ ಎಂಬ 2 ಪದಗಳಿಂದ ಕೂಡಿದೆ. ರುದ್ರ ಎಂದರೆ ಶಿವ ಮತ್ತು ಅಕ್ಷ ಎಂದರೆ ಕಣ್ಣೀರು. ಶಿವಪುರಾಣ, ಪದ್ಮಪುರಾಣ, ರುದ್ರಾಕ್ಷಕಲ್ಪ, ರುದ್ರಾಕ್ಷ ಮಹಾತ್ಮ್ಯ ಇತ್ಯಾದಿ ಗ್ರಂಥಗಳು ರುದ್ರಾಕ್ಷದ ಅಪಾರ ವೈಭವವನ್ನು ವಿವರಿಸಿದೆ. ಪುರಾಣಗಳ ಪ್ರಕಾರ, ಸತಿ ದೇವಿ ಶಿವನಿಂದ ದೂರವಾದ ಸಮಯದಲ್ಲಿ ಶಿವನ (Lord Shiva) ಹೃದಯದ ತುಂಬ ದುಃಖ ಮನೆಮಾಡಿತ್ತು ಮತ್ತು ಅವನ ಕಣ್ಣಿನಿಂದ ಕಣ್ಣೀರು ಸುರಿಯುತ್ತಿತ್ತು. ಅದು ಅನೇಕ ಸ್ಥಳಗಳಲ್ಲಿ ಬಿದ್ದಿತು. ಶಿವನ ಕಣ್ಣೀರು ಬಿದ್ದಲ್ಲೆಲ್ಲಾ ರುದ್ರಾಕ್ಷ ಮರದ (Rudraksha Tree) ಉಗಮವಾಯಿತು. ಶಿವನ ಕಣ್ಣೀರಿನಿಂದ ಉತ್ಪತ್ತಿಯಾದ ಈ ರುದ್ರಾಕ್ಷ ಎಲ್ಲರ ಆಸೆಗಳನ್ನು ಈಡೇರಿಸಬಹುದೆಂದು ನಂಬಲಾಗಿದೆ.

ಇದನ್ನೂ ಓದಿ - Rudraksh ಧರಿಸುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ

ಆಧ್ಯಾತ್ಮಿಕ ಗುರು ಸದ್ಗುರು ಅವರ ಪ್ರಕಾರ, ರುದ್ರಕ್ಷವು ನಕಾರಾತ್ಮಕ ಶಕ್ತಿಗಳ ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು, ರುದ್ರಕ್ಷ ಮರಗಳು (Rudraksha Tree) ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ದಿಷ್ಟ ಎತ್ತರದಲ್ಲಿ ಕಂಡುಬರುತ್ತವೆ, ವಿಶೇಷವಾಗಿ ಹಿಮಾಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಎಲೆಗಳು ಹಸಿರು ಮತ್ತು ಹಣ್ಣುಗಳು ಕಂದು ಬಣ್ಣದಲ್ಲಿರುತ್ತವೆ ಮತ್ತು ರುಚಿಯಲ್ಲಿ ಹುಳಿಯಾಗಿರುತ್ತವೆ. ರುದ್ರಾಕ್ಷ ಮರವು ವಿಶೇಷ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತದೆ ಏಕೆಂದರೆ ಮಣ್ಣು, ಪರಿಸರ ಮತ್ತು ಎಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಇದರ ಬೀಜಗಳು ವಿಶಿಷ್ಟವಾದ ಬಡಿತವನ್ನು ಹೊಂದಿರುತ್ತವೆ.

ಇದನ್ನೂ ಓದಿ - ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ? ಅವುಗಳ ಮಹತ್ವವೇನು? ಇಲ್ಲಿದೆ ಮಹತ್ವದ ಮಾಹಿತಿ

ರುದ್ರಾಕ್ಷ ಧರಿಸುವ ಪ್ರಯೋಜನಗಳು :
- ಪ್ರತಿ ರುದ್ರಾಕ್ಷದಲ್ಲೂ ಪಟ್ಟೆಗಳು ಉಳಿದಿವೆ, ಈ ಪಟ್ಟೆಗಳನ್ನು ರುದ್ರಾಕ್ಷದ ಮುಖ ಎಂದು ಕರೆಯಲಾಗುತ್ತದೆ. ಈ ಪಟ್ಟೆಗಳ ಸಂಖ್ಯೆ 1 ರಿಂದ 21 ರವರೆಗೆ ಇರಬಹುದು. ಈ ಪಟ್ಟೆಗಳನ್ನು ಎಣಿಸುವ ಮೂಲಕ, ರುದ್ರಾಕ್ಷವನ್ನು ಒಂದು ಮುಖಿಯಿಂದ 21 ಮುಖಿ ಎಂದು ವರ್ಗೀಕರಿಸಲಾಗಿದೆ, ಅಂದರೆ ರುದ್ರಾಕ್ಷದಲ್ಲಿ ಪಟ್ಟೆಗಳ ಸಂಖ್ಯೆಯನ್ನು ಮುಖಿ ರುದ್ರಾಕ್ಷ ಎಂದು ಕರೆಯಲಾಗುತ್ತದೆ.
- ರುದ್ರಾಕ್ಷ್ ಧರಿಸುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಬರುತ್ತದೆ ಮತ್ತು ವ್ಯಕ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.
- ಏಕ ಮುಖಿ ರುದ್ರಾಕ್ಷ ಅಪರೂಪ ಮತ್ತು ಇದು ಬಹಳ ವಿರಳವಾಗಿ ಕಂಡುಬರುತ್ತದೆ ಮತ್ತು ಅದರ ಬೆಲೆಯೂ ಹೆಚ್ಚು. ಆದರೆ ಇದರ ವಿಶೇಷತೆಯೆಂದರೆ ಏಕ ಮುಖಿ ರುದ್ರಾಕ್ಷ ಹೃದಯ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.
- ಪಂಚಮುಖಿ ರುದ್ರಾಕ್ಷ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಒಳ್ಳೆಯದು ಎಂದು ಆಧ್ಯಾತ್ಮಿಕ ಗುರು ಸದ್ಗುರು ಹೇಳುತ್ತಾರೆ. ಇದು ಸಾಮಾನ್ಯ ಸಂತೋಷ ಮತ್ತು ಆರೋಗ್ಯಕ್ಕಾಗಿ. ಇದನ್ನು ಧರಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ನರಗಳನ್ನು ಶಾಂತಗೊಳಿಸುತ್ತದೆ ಮತ್ತು ನರಮಂಡಲದಲ್ಲಿ ಜಾಗರೂಕತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
- 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಷಣ್ಮುಖಿ, ಅಂದರೆ ಆರು ಮುಖಗಳನ್ನು ಹೊಂದಿರುವ ರುದ್ರಾಕ್ಷಾ ಧರಿಸಬೇಕು ಎಂದು ಸದ್ಗುರು ಹೇಳುತ್ತಾರೆ, ಇದು ಅವರಿಗೆ ಶಾಂತ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
- ಇದಲ್ಲದೆ, ರುದ್ರಾಕ್ಷವನ್ನು ನಿಯಮಿತವಾಗಿ ಪೂಜಿಸುವ ಮನೆಯಲ್ಲಿ, ಆಹಾರ, ಬಟ್ಟೆ, ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಇರುವುದಿಲ್ಲ. ಅಂತಹ ಮನೆ ಲಕ್ಷ್ಮಿಯ ಸೈದವ ವಾಸಸ್ಥಾನವಾಗಿರಲಿದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News