Remedies: ಕೇವಲ 24 ಗಂಟೆಗಳಲ್ಲಿ ಪ್ರಭಾವ ತೋರಿಸುವ ಅತ್ಯಂತ ಅದ್ಭುತ ಉಪಾಯಗಳು ಇಲ್ಲಿವೆ

Remedies To Control Money Loss - ಜೀವನವು ಸಮಸ್ಯೆಗಳಿಂದ ಸುತ್ತುವರಿದಿದ್ದರೆ, ಒಂದರ ಮೇಲೊಂದರಂತೆ ನಷ್ಟಗಳು ಸಂಭವಿಸುತ್ತಿದ್ದರೆ ಮತ್ತು ಹಣವನ್ನು ಕಳೆದುಕೊಳ್ಳುತ್ತಿದ್ದರೆ, ಅದು ಕೆಟ್ಟ ದೃಷ್ಟಿ ಬಿದ್ದ ಅಥವಾ ಜಾತಕದ ದೋಷದ ಪರಿಣಾಮವಾಗಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಕೆಲ ಕ್ರಮಗಳನ್ನು ಅನುಸರಿಸಬೇಕು.

Written by - Nitin Tabib | Last Updated : Mar 6, 2022, 05:47 PM IST
  • ಧನಹಾನಿಯಿಂದ ಪಾರಾಗುವ ಅದ್ಭುತ ಉಪಾಯಗಳು ಇಲ್ಲಿವೆ
  • 24 ಗಂಟೆಗಳಲ್ಲಿಯೇ ಪ್ರಭಾವ ಬೀರುತ್ತವೆ
  • ದೃಷ್ಟಿದೋಷದಿಂದಲೂ ಕೂಡ ಕಾಪಾಡುತ್ತವೆ.
Remedies: ಕೇವಲ 24 ಗಂಟೆಗಳಲ್ಲಿ ಪ್ರಭಾವ ತೋರಿಸುವ ಅತ್ಯಂತ ಅದ್ಭುತ ಉಪಾಯಗಳು ಇಲ್ಲಿವೆ title=
Remedies To Control Money Loss (File Photo)

ನವದೆಹಲಿ: Remedies To Get Rid Of Evil Eye - ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಏರಿಳಿತಗಳಿರುತ್ತವೆ. ಅವುಗಳನ್ನು ತಪ್ಪಿಸಲು ಅಥವಾ ಎದುರಿಸಲು ಕೆಲವು ಮಾರ್ಗಗಳಿವೆ. ಕೆಲವರು ಇದಕ್ಕಾಗಿ ಸ್ವ-ಸಹಾಯ ಪುಸ್ತಕಗಳು ಅಥವಾ ಲೈಫ್ ಕೋಚ್ ಗಳ ಸಹಾಯವನ್ನು ಪಡೆಯುತ್ತಾರೆ. ಆದರೆ ಕೆಲವರು ಜ್ಯೋತಿಷ್ಯ (Astrology), ತಂತ್ರ-ಮಂತ್ರ (Tantra-Mantra) ಇತ್ಯಾದಿಗಳ ಸಹಾಯವನ್ನು ಪಡೆದುಕೊಳ್ಳುತ್ತಾರೆ. ತಂತ್ರ ಶಾಸ್ತ್ರದಲ್ಲಿ, ಅಂತಹ ಸಮಸ್ಯೆಗಳನ್ನು ನಿವಾರಿಸಲು ಮತ್ತು ನಿಮ್ಮ ಆಸೆಗಳನ್ನು ಪೂರೈಸಲು ಕೆಲವು ಪರಿಣಾಮಕಾರಿ ಪರಿಹಾರಗಳನ್ನು ಸೂಚಿಸಲಾಗಿದೆ. ನೀವು ಅವುಗಳನ್ನು ಅನುಸರಿಸಿದರೆ ಕೆಲವೇ  ಗಂಟೆಗಳಲ್ಲಿ ತನ್ನ ಪ್ರಭಾವ ತೋರಿಸಲು ಪ್ರಾರಂಭಿಸುತ್ತವೆ.

ತಕ್ಷಣ ಪ್ರಭಾವ ಬೀರುತ್ತವೆ ಈ ಉಪಾಯಗಳು
>> ಮನೆಯಲ್ಲಿ ಪದೇ ಪದೇ ಜಗಳ, ಕಳ್ಳತನದಿಂದ ನಷ್ಟ ಅಥವಾ ಇನ್ನಾವುದೇ ಕಾರಣದಿಂದ ನಷ್ಟ ಉಂಟಾಗುತ್ತಿದ್ದರೆ, ಮನೆಯ ಸದಸ್ಯರು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಆಗಾಗ್ಗೆ ಧನ ಹಾನಿ ಸಂಭವಿಸುತ್ತಿದ್ದರೆ,  ಅಂತಹ ಪರಿಸ್ಥಿತಿಯಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪರಿಹಾರ ಸಿಗುತ್ತದೆ.

>> ಇಂತಹ ತೊಂದರೆಗಳು ಮತ್ತು ನಷ್ಟಗಳನ್ನು ತಪ್ಪಿಸಲು, ಬುಧವಾರದಂದು 7 ರೀತಿಯ ಧಾನ್ಯಗಳನ್ನು ದಾನ ಮಾಡಿ. ಜೊತೆಗೆ ನಾಗರ ಬೇರನ್ನು (ಸರ್ಪಗಂಧಿ) ಹಿಡಿದು ರಾಹು ಯಂತ್ರ ಸ್ಥಾಪಿಸಿದ ನಂತರ ಅದನ್ನೇ ಪೂಜಿಸುವುದರಿಂದ ಕೂಡ ತಕ್ಷಣ ಧನಾತ್ಮಕ ಫಲಿತಾಂಶ ಪ್ರಾಪ್ತಿಯಾಗುತ್ತದೆ. 

>> ಯಾರಾದ್ರ ದೃಷ್ಟಿ ತಗುಲಿದ್ದರೆ ಅಥವಾ ನಿರಂತರ ನಷ್ಟ, ಕೆಟ್ಟ ಘಟನೆ ಗಳು ಸಂಭವಿಸುತ್ತಿದ್ದರೆ, ನವಮುಖಿ ರುದ್ರಾಕ್ಷವನ್ನು ಧರಿಸಿ. ಇದಲ್ಲದೆ ಪಂಚಮುಖಿ ಹನುಮಾನ್ ಜೀ ಅವರ ಲಾಕೆಟ್ ಧರಿಸುವುದು ತುಂಬಾ ಪ್ರಯೋಜನಕಾರಿದೆ. ಈ ಲಾಕೆಟ್ ವ್ಯಾಪಾರ ವೃದ್ಧಿಯಲ್ಲಿ  ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

>> ಹನುಮಾನ್ ಚಾಲೀಸಾ ಮತ್ತು ಬಜರಂಗ್ ಬಾಣ  ಅನ್ನು ಪ್ರತಿದಿನ ಓದುವುದು  ಜೀವನದಲ್ಲಿನ ಎಲ್ಲಾ ತೊಂದರೆಗಳನ್ನು ತೆಗೆದುಹಾಕುತ್ತದೆ ಮತ್ತು ಮುಂಬರುವ ತೊಂದರೆಗಳಿಂದಲೋ ಕೂಡ ರಕ್ಷಿಸುತ್ತದೆ. ಇದಲ್ಲದೆ  ಆಂಜನೇಯನ ದೇವಸ್ಥಾನಕ್ಕೆ ಹೋಗಿ ಅವರ ಭುಜದ ಸಿಂಧೂರವನ್ನು ನಿಮ್ಮ ಹಣೆಯ ಮೇಲೆ ಲೇಪಿಸಿದರೆ, ನೀವು ಒಂದರ ಮೇಲೊಂದರಂತೆ ಯಶಸ್ಸನ್ನು ಪಡೆಯಲು ಪ್ರಾರಂಭಿಸುವಿರಿ.

>> ಭೈರವನ ದೇವಾಲಯದ ಕಪ್ಪು ದಾರವನ್ನು ಧರಿಸುವುದರಿಂದ ಕೆಟ್ಟ ದೃಷ್ಟಿ ಮತ್ತು ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

>> ಕೆಟ್ಟ ದೃಷ್ಟಿಯನ್ನು ತೊಡೆದುಹಾಕಲು, ರೊಟ್ಟಿಯನ್ನು ತಯಾರಿಸಿ ಮತ್ತು ಅದನ್ನು ಒಂದೇ ಕಡೆಯಿಂದ ಬೇಯಿಸಿ. ನಂತರ ಕರಿದ ಭಾಗಕ್ಕೆ ಎಣ್ಣೆಯನ್ನು ಹಚ್ಚಿ. ಅದರಲ್ಲಿ  ಕೆಂಪು ಮೆಣಸಿನಕಾಯಿ ಮತ್ತು ಸಮುದ್ರದ ಉಪ್ಪಿನ ಎರಡು ಉಂಡೆಯನ್ನು ಇರಿಸಿ. ನಂತರ ಆ ವ್ಯಕ್ತಿಯ ಮೇಲೆ 7 ಬಾರಿ ನಿವಾಳಿಸಿ ಅಡ್ಡ ರಸ್ತೆಯಲ್ಲಿರಿಸಿ.

ಇದನ್ನೂ ಓದಿ-Emerald Gem: ನಿಮ್ಮ ಭಾಗ್ಯ ಕೂಡ ನಿಮಗೆ ಸಾಥ್ ನೀಡುತ್ತಿಲ್ಲವೇ? ಈ ರತ್ನ ಧರಿಸಿ!

ಧನ ಹಾನಿ ತಡೆಯಲು ಈ ಉಪಾಯ ಅನುಸರಿಸಿ
ನೀವು ಪದೇ ಪದೇ  ಹಣವನ್ನು ಕಳೆದುಕೊಳ್ಳುತ್ತಿದ್ದರೆ, ಅದಕ್ಕೆ ಈ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ 2 ಕವಡೆಗಳನ್ನು  ಕೆಂಪು ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿಡಬೇಕು. ಕೆಲವೇ ದಿನಗಳಲ್ಲಿ ಹಣದ ನಷ್ಟ ನಿಂತುಹೋಗಿ ಹಣದ ಒಳಹರಿವು ಹೆಚ್ಚಾಗುತ್ತದೆ.

ಇದನ್ನೂ ಓದಿ-Holi Festival 2022 : ಹೋಳಿ ಮುನ್ನಾ ದಿನ ಈ ಕೆಲಸ ಮಾಡಿ : ವರ್ಷವಿಡೀ ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಿರಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Budh Gochar 2022: ಇಂದಿನಿಂದ ಈ 5 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News