Relationship Tips: ಮದುವೆಗೂ ಮುನ್ನ ನೀವು ನರ್ವಸ್ ಆಗುತ್ತಿದ್ದೀರಾ? ಇಲ್ಲಿದೆ ಪರಿಹಾರ

Pre-wedding anxiety: ಹೆಚ್ಚಿನ ಜನರು ಮದುವೆಗೆ ಮುಂಚೆಯೇ ಬಹಳ ಆತಂಕವನ್ನು ಹೊಂದಿರುತ್ತಾರೆ. ಯಾವ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನೀವು ಈ ಹೆದರಿಕೆಯಿಂದ ಮುಕ್ತಿ ಹೊಂದಬಹುದು ಅನ್ನೋದರ ಬಗ್ಗೆ ತಿಳಿಯಿರಿ.  

Written by - Puttaraj K Alur | Last Updated : Dec 13, 2022, 05:45 PM IST
  • ಮದುವೆ ಬಗ್ಗೆ ಚಿಂತಿಸುತ್ತಿದ್ದರೆ ನೀವು ಭವಿಷ್ಯದ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು
  • ಆತಂಕವನ್ನು ಜಯಿಸುವ ಉತ್ತಮ ಮಾರ್ಗವೆಂದರೆ ವಾಸ್ತವ ಪರಿಸ್ಥಿತಿ ಒಪ್ಪಿಕೊಳ್ಳುವುದು
  • ಜೀವನ ಸಂಗಾತಿ ಮೇಲೆ ನಂಬಿಕೆ ಇಡುವುದರಿಂದ ನಿಮ್ಮ ಎಲ್ಲಾ ರೀತಿಯ ಆತಂಕ ದೂರವಾಗುತ್ತದೆ
Relationship Tips: ಮದುವೆಗೂ ಮುನ್ನ ನೀವು ನರ್ವಸ್ ಆಗುತ್ತಿದ್ದೀರಾ? ಇಲ್ಲಿದೆ ಪರಿಹಾರ title=
Pre-wedding anxiety

ನವದೆಹಲಿ: ಹೆಚ್ಚಿನ ಜನರು ಮದುವೆಗೂ ಮುಂಚೆಯೇ ಹೆದರಿಕೆಯಿಂದ ಬಳಲುತ್ತಾರೆ. ಇದು ಸಾಮಾನ್ಯ ವಿಷಯವಾಗಿದ್ದರೂ ಅನೇಕರು ಮದುವೆಯ ನಂತರ ಜೀವನದ ಬಗ್ಗೆ ತುಂಬಾ ಚಿಂತಿಸುತ್ತಾರೆ. ಇಂತಹ ಜನರು ಆತಂಕಕ್ಕೆ ಬಲಿಯಾಗುತ್ತಾರೆ. ಅರೇಂಜ್ಡ್ ಮ್ಯಾರೇಜ್‌ನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ನೀವು ಮದುವೆ ಬಗ್ಗೆ ನರ್ವಸ್ ಆಗಿದ್ದರೆ ಚಿಂತಿಸಬೇಕಾಗಿಲ್ಲ. ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಮದುವೆಯ ಬಗ್ಗೆ ಇರುವ ಆತಂಕದಿಂದ ಮುಕ್ತಿ ಹೊಂದಬಹುದು.  

ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ: ಮದುವೆ ಅಥವಾ ಮದುವೆಯ ನಂತರದ ಜೀವನಕ್ಕೆ ನೀವು ಸಿದ್ಧತೆಗಳ ಬಗ್ಗೆ ಚಿಂತಿಸುತ್ತಿದ್ದರೆ, ನೀವು ನಿಮ್ಮ ಭವಿಷ್ಯದ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಹೇಳಬೇಕು. ಹೀಗೆ ಮಾಡುವುದರಿಂದ ನೀವು ಉತ್ತಮ ಭಾವನೆ ಹೊಂದುವಿರಿ.

ಇದನ್ನೂ ಓದಿ: Palmistry: ಹಸ್ತದಲ್ಲಿ ಈ ರೇಖೆಯಿದ್ರೆ ಸರ್ಕಾರಿ ಉದ್ಯೋಗ ನಿಮ್ಮದಾಗುತ್ತದೆ

ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ: ಆತಂಕವನ್ನು ಜಯಿಸುವ ಉತ್ತಮ ಮಾರ್ಗವೆಂದರೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು. ಹೀಗೆ ಮಾಡುವುದರಿಂದ ನೀವು ಮದುವೆಗೆ ಸಿದ್ಧರಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ನಿಮ್ಮ ಆತಂಕವೂ ದೂರವಾಗುತ್ತದೆ.  

ಸ್ನೇಹಿತರೊಂದಿಗೆ ಮಾತನಾಡಿ: ಮದುವೆ ಬಗ್ಗೆ ನೀವು ಭಯಪಡುತ್ತಿದ್ದರೆ ಮತ್ತು ಮನಸ್ಸಿನಲ್ಲಿ ವಿಚಿತ್ರ ಆಲೋಚನೆ ಬರುತ್ತಿದ್ದರೆ, ನಿಮ್ಮ ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಮಾತನಾಡಿ. ಹೀಗೆ ಮಾಡುವುದರಿಂದ ನೀವು ಉತ್ತಮ ಭಾವನೆ ಹೊಂದುತ್ತೀರಿ. ಇದಕ್ಕಾಗಿ ನೀವು ವಿವಾಹಿತ ಸ್ನೇಹಿತರ ಸಹಾಯ ತೆಗೆದುಕೊಳ್ಳುವುದು ಉತ್ತಮ.  

ನಿಮ್ಮ ಸಂಗಾತಿಯನ್ನು ನಂಬಿರಿ: ಮದುವೆ ಮತ್ತು ಮದುವೆ ನಂತರದ ಜೀವನದ ಬಗ್ಗೆ ನೀವು ಹೆಚ್ಚು ಚಿಂತಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯ ಮೇಲೆ ನಂಬಿಕೆ ಇಡಬೇಕು. ಇದರೊಂದಿಗೆ ನಿಮ್ಮ ಮಾನಸಿಕ ಪರಿಸ್ಥಿತಿಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ನರ್ವಸ್ ದೂರವಾಗುತ್ತದೆ.

ಇದನ್ನೂ ಓದಿ: Vastu Tips: ವೀಳ್ಯದೆಲೆಯ ಈ ಟ್ರಿಕ್‍ನಿಂದ ವೃತ್ತಿಜೀವನದಲ್ಲಿ ಅಪಾರ ಯಶಸ್ಸು, ಹಣದ ಮಳೆಯಾಗಲಿದೆ! 

ಪರಿಪೂರ್ಣತೆಯ ವಲಯದಲ್ಲಿ ಇರಬೇಡಿ: ನೀವು ಎಲ್ಲದರಲ್ಲೂ ಪರಿಪೂರ್ಣರಾಗಲು ಸಾಧ್ಯವಿಲ್ಲವೆಂಬುದನ್ನು ಯಾವಾಗಲೂ ನೆನಪಿಡಿ. ಹೀಗೆ ಆಲೋಚಿಸಿ ಮದುವೆಗೆ ತಯಾರಿ ನಡೆಸಿದರೆ ಆಗ ನಿಮಗೆ ಒಳ್ಳೆಯದಾಗುತ್ತದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News