Astro Tips: ಏಕಾದಶಿಯಂದು ಈ ಕೆಲಸ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗಲಿದೆ!

ರಂಗಭರಿ ಏಕಾದಶಿ 2023 ದಿನಾಂಕ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿಯನ್ನು ರಂಗಭರಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. ಕಾಶಿಯಲ್ಲಿ ಹೋಳಿ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ರಂಗಭರಿ ಏಕಾದಶಿಯನ್ನು ಮಾರ್ಚ್ 3ರ ಗುರುವಾರ ಆಚರಿಸಲಾಗುತ್ತದೆ.

Written by - Puttaraj K Alur | Last Updated : Feb 22, 2023, 10:56 AM IST
  • ಅಮಲಕಿ ಏಕಾದಶಿ ವ್ರತವನ್ನು ರಂಗಭರಿ ಏಕಾದಶಿ ವ್ರತ ಎಂತಲೂ ಕರೆಯಲಾಗುತ್ತದೆ
  • ಉದಯ ತಿಥಿಯ ಪ್ರಕಾರ ಮಾರ್ಚ್ 3ರಂದು ಅಮಲಕಿ ಏಕಾದಶಿ ಉಪವಾಸ ಆಚರಿಸಲಾಗುತ್ತದೆ
  • ಈ ಏಕಾದಶಿಯಂದು ನೆಲ್ಲಿಕಾಯಿ ಮರವನ್ನು ಭಕ್ತಿ-ಭಾವದಿಂದ ಪೂಜಿಸಲಾಗುತ್ತದೆ
Astro Tips: ಏಕಾದಶಿಯಂದು ಈ ಕೆಲಸ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗಲಿದೆ! title=
ರಂಗಭರಿ ಏಕಾದಶಿ ವ್ರತ

ನವದೆಹಲಿ: ಅಮಲಕಿ ಏಕಾದಶಿ ವ್ರತವನ್ನು ರಂಗಭರಿ ಏಕಾದಶಿ ವ್ರತ ಎಂತಲೂ ಕರೆಯಲಾಗುತ್ತದೆ. ಬ್ರಜ್ ಹೋಳಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪುರಾಣಗಳ ಪ್ರಕಾರ ಮಹಾಶಿವರಾತ್ರಿಯಂದು ಮದುವೆಯಾದ ನಂತರ ಶಿವ ಮತ್ತು ತಾಯಿ ಪಾರ್ವತಿ ಮೊದಲ ಬಾರಿಗೆ ರಂಗಭರಿ ಏಕಾದಶಿಯ ದಿನದಂದು ಪ್ರೀತಿಯ ನಗರವಾದ ಕಾಶಿಗೆ ಬಂದರು. ಅದಕ್ಕಾಗಿಯೇ ವಾರಣಾಸಿಯಲ್ಲಿ ಹೋಳಿಯಾಡುವ ಪ್ರಕ್ರಿಯೆಯು ಈ ದಿನದಿಂದಲೇ ಪ್ರಾರಂಭವಾಗುತ್ತದೆ. ಇದು ಹೋಳಿಯವರೆಗೆ ಮುಂದುವರಿಯುತ್ತದೆ. ರಂಗಭರಿ ಏಕಾದಶಿ ಅಥವಾ ಅಮಲಕಿ ಏಕಾದಶಿಯನ್ನು ಫಾಲ್ಗುನ್ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಇದನ್ನು ಮಾರ್ಚ್ 3ರಂದು ಆಚರಿಸಲಾಗುತ್ತದೆ.

ರಂಗಭರಿ ಏಕಾದಶಿ ಅಥವಾ ಅಮಲಕಿ ಏಕಾದಶಿ

ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕವು ಮಾರ್ಚ್ 2ರಂದು ಬೆಳಗ್ಗೆ 6.39ರಿಂದ ಪ್ರಾರಂಭವಾಗಿ ಮಾರ್ಚ್ 3ರಂದು ಬೆಳಗ್ಗೆ 9.12ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಮಾರ್ಚ್ 3ರಂದು ಅಮಲಕಿ ಏಕಾದಶಿ ಉಪವಾಸ ಆಚರಿಸಲಾಗುತ್ತದೆ ಮತ್ತು ಈ ದಿನ ರಂಗಭರಿ ಏಕಾದಶಿ ಆಚರಿಸಲಾಗುತ್ತದೆ. ಈ ಏಕಾದಶಿಯಂದು ನೆಲ್ಲಿಕಾಯಿ ಮರವನ್ನು ಪೂಜಿಸಲಾಗುತ್ತದೆ. ಆದ್ದರಿಂದ ಇದನ್ನು ಅಮಲಕಿ ಏಕಾದಶಿ ಎಂದು ಕರೆಯಲಾಗುತ್ತದೆ. ಅಮಲಕಿ ಏಕಾದಶಿಯಂದು ಬೆಳಗ್ಗೆ ನೆಲ್ಲಿಮರಕ್ಕೆ ನೀರು ಅರ್ಪಿಸಿ ಪೂಜಿಸಬೇಕು. ಅದೇ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು. ನೆಲ್ಲಿ ಮರಕ್ಕೆ ಪ್ರದಕ್ಷಿಣೆ ಹಾಕಬೇಕು. ನಂತರ ಭಗವಾನ್ ವಿಷ್ಣುವಿಗೆ ಅದೃಷ್ಟ, ಸಂತೋಷ ಮತ್ತು ಸಮೃದ್ಧಿ ನೀಡುವಂತೆ ಪ್ರಾರ್ಥಿಸಬೇಕು.

ಇದನ್ನೂ ಓದಿ: ಹಣ್ಣು ತಿಂದಾದ ಬಳಿಕ ಈ ಹಣ್ಣಿನ ಬೀಜಗಳನ್ನು ಎಸೆಯಬೇಡಿ, ಕಾರಣ ಇಲ್ಲಿದೆ

ಈ ಅದ್ಭುತ ಪರಿಹಾರವು ಸಮಸ್ಯೆ ನಿವಾರಿಸುತ್ತದೆ

ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿದ್ದರೆ, ಅಮಲಕಿ ಏಕಾದಶಿ ಅಥವಾ ರಂಗಭರಿ ಏಕಾದಶಿಯ ದಿನದಂದು ಬೆಳಗ್ಗೆ ಬೇಗನೆ ಸ್ನಾನ ಮಾಡಬೇಕು. ಶಿವಲಿಂಗದ ಮೇಲೆ ಶ್ರೀಗಂಧವನ್ನು ಹಚ್ಚಿ ನಂತರ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಇದಾದ ನಂತರ ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಿಂದ ಜಲಾಭಿಷೇಕ ಮಾಡಬೇಕು. ಬಳಿಕ ನಿಮ್ಮ ಎಲ್ಲಾ ಹಣಕಾಸಿನ ತೊಂದರೆ ನಿವಾರಿಸಲು ಶಿವನನ್ನು ಪ್ರಾರ್ಥಿಸಬೇಕು. ಹೀಗೆ ಮಾಡಿದ್ರೆ ನಿಮ್ಮ ಜೀವನದಲ್ಲಿ ಸಂಪತ್ತು ವೇಗವಾಗಿ ಹೆಚ್ಚಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಇದನ್ನೂ ಓದಿ: Alert! ನಿಮಗೂ ಪದೇ ಪದೇ ಆಕಳಿಕೆ ಬರುತ್ತದೆಯಾ? ಮರೆತೂ ಕೂಡ ನಿರ್ಲಕ್ಷಿಸಬೇಡಿ! ಕಾರಣ ಇಲ್ಲಿದೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News