Russia-Ukraine ಯುದ್ಧದ ಪ್ರಭಾವ ಭಾರತದ ಮೇಲೆ ಯಾವಾಗ? ಇಲ್ಲಿದೆ ಬೆಚ್ಚಿಬೀಳಿಸುವ ಭವಿಷ್ಯವಾಣಿ!

Rahu Gochar: ಜಗತ್ತು ಮೂರನೇ ಮಹಾಯುದ್ಧದ (Third World War) ಹೊಸ್ತಿಲಲ್ಲಿ ನಿಂತಿದೆ. ಷೇರುಪೇಟೆಯಿಂದ ಹಿಡಿದು ಕೋಟ್ಯಂತರ ಜನರ ಸುರಕ್ಷತೆಯವರೆಗೂ ಎಲ್ಲವೂ ಅಪಾಯದಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ತಿಂಗಳು ಸಂಭವಿಸಲಿರುವ ರಾಹು ಸಂಕ್ರಮಣದಿಂದ (Rahu-Gochar March 2022) ರಷ್ಯಾ-ಉಕ್ರೇನ್ (Russia-Ukraine War) ಪರಿಸ್ಥಿತಿ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ.

Written by - Nitin Tabib | Last Updated : Mar 3, 2022, 12:08 PM IST
  • ಮಾರ್ಚ್ 17 ರಂದು ರಾಹು ಸಂಕ್ರಮಣ ನಡೆಯಲಿದೆ.
  • ಮೇಷ ರಾಶಿಯ ರಾಹು ದೇಶ ಮತ್ತು ವಿಶ್ವದಲ್ಲಿ ದೊಡ್ಡ ಕ್ರಾಂತಿಯನ್ನೇ ತರಲಿದ್ದಾನೆ.
  • ಹಣದುಬ್ಬರ, ರಾಜಕೀಯ, ಷೇರು ಮಾರುಕಟ್ಟೆ ಮೇಲೆ ಇದು ಭಾರಿ ಪರಿಣಾಮ ಬೀರಲಿದೆ.
Russia-Ukraine ಯುದ್ಧದ ಪ್ರಭಾವ ಭಾರತದ ಮೇಲೆ ಯಾವಾಗ? ಇಲ್ಲಿದೆ ಬೆಚ್ಚಿಬೀಳಿಸುವ ಭವಿಷ್ಯವಾಣಿ! title=
Rahu Gochar (File Photo)

ನವದೆಹಲಿ: Rahu Gochar 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು(Rahu Transit Effect On India And World) ಪಾಪ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅದರ ಸ್ಥಾನದಲ್ಲಿ ಆಗುವ ಬದಲಾವಣೆಗಳು ಅನೇಕ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಮಾರ್ಚ್ 17, 2022 ರಂದು, ರಾಹು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. 18 ತಿಂಗಳ ನಂತರ ರಾಹುವಿನ ರಾಶಿ ಬದಲಾವಣೆಯು ಇಡೀ ವಿಶ್ವಕ್ಕೆ ದೊಡ್ಡ ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ. ನಿಸ್ಸಂಶಯವಾಗಿ ಭಾರತವು ಇದರಿಂದ ಅಸ್ಪೃಶ್ಯವಾಗಿ ಉಳಿಯುವುದಿಲ್ಲ. ಮಾರ್ಚ್ 2022 ರಲ್ಲಿ ಸಂಭವಿಸಲಿರುವ ಈ ರಾಹು ಸಂಕ್ರಮವು ದೇಶದ ರಾಜಕೀಯ, ಆರ್ಥಿಕತೆ ಮತ್ತು ಸಾಮಾನ್ಯ ಜೀವನದ ಮೇಲೆ ಭಾರಿ ಪರಿಣಾಮ ಬೀರಲಿದೆ ಎನ್ನಲಾಗಿದೆ. 

ರಾಹುವಿನ ನಡೆ ಯಾವಾಗಲು ಹಿಮ್ಮುಖ ನಡೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತು ಗ್ರಹಗಳು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇಬ್ಬರು ಕೂಡ 18 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ. ಮಾರ್ಚ್ 17 ರಂದು, ರಾಹು ವೃಷಭ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಅಲ್ಲಿ ಆತ ಮುಂದಿನ ಒಂದೂವರೆ ವರ್ಷಗಳವರೆಗೆ ಇರಲಿದ್ದಾನೆ. ಮೇಷ ರಾಶಿಗೆ ರಾಹು ಪ್ರವೇಶ ಸಮಯದಲ್ಲಿ ಜಾತಕವನ್ನು ವಿಶ್ಲೇಷಿಸುವುದಾದರೆ, ಮಕರ ರಾಶಿಯಲ್ಲಿ ಶನಿ, ಮಂಗಳ ಮತ್ತು ಶುಕ್ರ 3 ಗ್ರಹಗಳು ಇರಲಿವೆ. ಇದು ಇಡೀ ವಿಶ್ವದಲ್ಲಿ ದೊಡ್ಡ ಕ್ರಾಂತಿಯ ಸಾಧ್ಯತೆಯನ್ನು ಸೃಷ್ಟಿಸುತ್ತಿದೆ ಮತ್ತು ಅದು ಭಾರತದ ಮೇಲೂ ಕೂಡ ಪ್ರಭಾವ ಬೀರುತ್ತದೆ.

ಆಹಾರ-ಪಾನೀಯಗಳ ಸಂಕಷ್ಟ ತರಬಹುದು (Rahu Transit In Aris)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ (Rahu Transit In Aris 2022) ರಾಹುವಿನ ಆಗಮನ ಆಹಾರ ಪಾನೀಯಗಳ ಸಂಕಷ್ಟ ತರಬಹುದು. ಹೀಗಾಗಿ ರಾಹುವು ಮೇಷರಾಶಿಗೆ ಪ್ರವೇಶಿಸಿದ ಕೂಡಲೇ ನಡೆಯುತ್ತಿರುವ  ರಷ್ಯಾ-ಉಕ್ರೇನ್ ಯುದ್ಧ ಭಾರತದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಇದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಾರೆ ಎನ್ನಲಾಗಿದೆ.

ಉಕ್ರೇನ್ ಮತ್ತು ರಷ್ಯಾ (Russia-Ukraine War) ವಿಶ್ವದ ಅತಿದೊಡ್ಡ ಗೋಧಿ ಉತ್ಪಾದಿಸುವ ದೇಶಗಳಾಗಿರುವುದರಿಂದ ಮತ್ತು ಈ ಎರಡೂ ದೇಶಗಳು ಯುದ್ಧಭೂಮಿಯಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಧಾನ್ಯಗಳ ಬೆಳೆಗಳು ಹೆಚ್ಚಾಗಲಿವೆ.  ಇದು ಅನೇಕ ದೇಶಗಳಲ್ಲಿ ಆಹಾರ ಬಿಕ್ಕಟ್ಟನ್ನು ಉಂಟುಮಾಡಲಿದೆ. ಅಲ್ಲದೆ, ರಾಹುವಿನ ಸಂಕ್ರಮಣವು ಭಾರತದಲ್ಲಿ ಅಕಾಲಿಕ ಮಳೆಯನ್ನು ಉಂಟುಮಾಡುತ್ತದೆ, ಇದು ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.

ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ (Rahu Transit In Aries Effect On Economy)
ಏಪ್ರಿಲ್‌ನಲ್ಲಿ ಮೇಷ ರಾಶಿಯಿಂದ ಏಕಾದಶ ಭಾವದಲ್ಲಿ ಕುಂಭ ರಾಶಿಯಲ್ಲಿ ಶನಿ-ಮಂಗಳರ ಸಂಯೋಜನೆ ಷೇರು ಮಾರುಕಟ್ಟೆಯಲ್ಲಿ ಅಪಾರಏರಿಳಿತಗಳಿಗೆ ಕಾರಣವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ತುಂಬಾ ಯೋಚಿಸಿ ಹಣ ಹೂಡಿಕೆ ಮಾಡಬೇಕು. 

ಇದನ್ನೂ ಓದಿ-ಬೆಳಗ್ಗೆ ಈ ಆಹಾರಗಳನ್ನು ತಿಂದರೆ ಬೊಜ್ಜು ಸುಲಭವಾಗಿ ಕರಗುತ್ತದೆ

ರಾಜಕೀಯ ಗೊಂದಲ ಉಂಟಾಗಲಿದೆ (Rahu Transit Effect On Indina Politics)
ರಾಹುವಿನ ಈ ಸಂಕ್ರಮಣ  ಭಾರತದ ರಾಜಕೀಯದಲ್ಲಿ ಕೋಲಾಹಲವನ್ನು ಉಂಟುಮಾಡಬಹುದು. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ದೊಡ್ಡ ರಾಜಕೀಯ ಕ್ರಾಂತಿ ಸಂಭವಿಸಬಹುದು. ದೊಡ್ಡ ನಾಯಕರು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿದ ಅಹಿತಕರ ಘಟನೆಗಳು ಸಂಭವಿಸಬಹುದು. ಇದಲ್ಲದೆ, ಪ್ರವಾಹ ಮತ್ತು ಭೂಕುಸಿತದಂತಹ ನೈಸರ್ಗಿಕ ವಿಕೋಪಗಳಂತಹ ಘಟನೆಗಳು ನಡೆಯುವ ಸಾಧ್ಯತೆಯನ್ನು ಕೂಡ ವರ್ತಿಸಲಾಗಿದೆ.

ಇದನ್ನೂ ಓದಿ-ಈ ತಿಂಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿರುತ್ತಾರೆ! ಅವರ ಯಶಸ್ಸಿನ ಹಿಂದಿದೆ ಅದ್ಬುತ ಕಾರಣ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

ಇದನ್ನೂ ಓದಿ-ಎಂಥಹ ಸನ್ನಿವೇಶವೇ ಬರಲಿ, ಈ ಮಾತುಗಳನ್ನು ಯಾವತ್ತೂ ಆಡಬೇಡಿ, ಜೀವನ ಪೂರ್ತಿ ಪಶ್ಚಾತಾಪ ಪಡಬೇಕಾದೀತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News