Rahu Transit 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ರಾಹು

Rahu Transit 2023 Effect: ನವಗ್ರಹಗಳಲ್ಲಿ ಶನಿ ಗ್ರಹದಂತೆಯೇ ರಾಹು ಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಜನರ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತದೆ. ರಾಹು 2023ರ ಅಕ್ಟೋಬರ್ ವರೆಗೂ ಮೇಷ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಸಮಯದಲ್ಲಿ ರಾಹುವಿನ ಹಿಮ್ಮುಖ ಚಲನೆಯು ನಾಲ್ಕು ರಾಶಿಯ ಜನರ ಅದೃಷ್ಟವನ್ನು ಬೆಳಗಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Nov 25, 2022, 07:38 AM IST
  • 2023ರ ಅಕ್ಟೋಬರ್ ವರೆಗೆ ಮೇಷ ರಾಶಿಯಲ್ಲಿ ರಾಹುವಿನ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ.
  • 2023 ರಲ್ಲಿ, ಅಕ್ಟೋಬರ್ ಮಾಸದವರೆಗೂ ಮೇಷ ರಾಶಿಯಲ್ಲಿರುವ ರಾಹುವು ನಾಲ್ಕು ರಾಶಿಯ ಜನರ ಜೀವನವನ್ನು ಬೆಳಗಲಿದ್ದಾನೆ.
  • ಈ ಸಮಯದಲ್ಲಿ ಜೀವನದ ಪ್ರತಿ ರಂಗದಲ್ಲೂ ಸಕಾರಾತ್ಮಕತೆಯನ್ನು ಹರಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Rahu Transit 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ರಾಹು  title=
Rahu Gochar 2023

Rahu Transit 2023 Effect: ವೈದಿಕ ಜ್ಯೋತಿಷ್ಯದಲ್ಲಿ ಪಾಪ ಗ್ರಹಗಳ ಕಾಟದಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಹಾಗೆಯೇ, ನವಗ್ರಹಗಳಲ್ಲಿ ಶನಿ ಗ್ರಹದಂತೆಯೇ ಈ ಗ್ರಹಗಳ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ 12 ರಾಶಿಗಳ ಜನರ ಜೀವನದಲ್ಲಿ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತವೆ. ರಾಹು ಮತ್ತು ಕೇತು ಈ ಎರಡೂ ಕೂಡ ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳು. ಇವು ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ತಮ್ಮ ರಾಶಿ ಚಕ್ರವನ್ನು ಬದಲಾಯಿಸುತ್ತವೆ. 

ಪ್ರಸ್ತುತ ಮೇಷ ರಾಶಿಯಲ್ಲಿರುವ ರಾಹು ಗ್ರಹವು ಹೊಸ ವರ್ಷದಲ್ಲಿ 10 ತಿಂಗಳುಗಳ ಕಾಲ ಇದೇ ರಾಶಿಯಲ್ಲಿ ಉಳಿಯಲಿದ್ದಾನೆ. 2023 ರ ಅಕ್ಟೋಬರ್ 30 ರಂದು ರಾಹು ತನ್ನ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023 ರಲ್ಲಿ, ಅಕ್ಟೋಬರ್ ಮಾಸದವರೆಗೂ ಮೇಷ ರಾಶಿಯಲ್ಲಿರುವ ರಾಹುವು ನಾಲ್ಕು ರಾಶಿಯ ಜನರ ಜೀವನವನ್ನು ಬೆಳಗಲಿದ್ದಾನೆ. ಅವರು ಈ ಸಮಯದಲ್ಲಿ ಜೀವನದ ಪ್ರತಿ ರಂಗದಲ್ಲೂ ಸಕಾರಾತ್ಮಕತೆಯನ್ನು ಹರಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

2023ರ ಅಕ್ಟೋಬರ್ ವರೆಗೂ ಈ 4 ರಾಶಿಯವರಿಗೆ ಬಂಪರ್ ಲಾಭ ನೀಡಲಿದ್ದಾನೆ ರಾಹು: 
ಮಿಥುನ ರಾಶಿ:
ಮೇಷ ರಾಶಿಯಲ್ಲಿರುವ ರಾಹು 2023 ರಲ್ಲಿ, ಅಕ್ಟೋಬರ್ ಮಾಸದವರೆಗೂ ಮಿಥುನ ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದಾದರೂ ಆದಾಯದ ಹೊಸ ಮೂಲಗಳು ಸೃಷ್ಟಿಯಾಗುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. 

ಇದನ್ನೂ ಓದಿ- ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ

ಕರ್ಕಾಟಕ ರಾಶಿ: 2023ರಲ್ಲಿ ರಾಹು ಸಂಚಾರವು ಕರ್ಕಾಟಕ ರಾಶಿಯವರಿಗೆ ಹಠಾತ್ ವಿತ್ತೀಯ ಲಾಭವನ್ನು ನೀಡಲಿದೆ. ವೃತ್ತಿ ರಂಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಕೈತುಂಬಾ ಹಣ ಸಂಪಾದಿಸುವಿರಿ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟ ಕೈ ಹಿಡಿಯಲಿದ್ದು ಯಶಸ್ಸಿನ ಉತ್ತುಂಗಕ್ಕೆ ಏರುವಿರಿ.

ವೃಶ್ಚಿಕ ರಾಶಿ: 2023ರ ಅಕ್ಟೋಬರ್ ವರೆಗೆ ಮೇಷ ರಾಶಿಯಲ್ಲಿ ರಾಹುವಿನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳ ವಿರುದ್ಧ ನೀವು ವಿಜಯಪತಾಕೆ ಹಾರಿಸುವಿರಿ. ಈ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಅದರ ಆಧಾರದ ಮೇಲೆ ನಿಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹೊಸ ಮೂಲಗಳಿಂದ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವೃತ್ತಿ ಜೀವನದಲ್ಲಿ ನಿಮ್ಮ ಊಹೆಗೂ ಮೀರಿದ ದೊಡ್ಡ ಅವಕಾಶ ನಿಮ್ಮನ್ನು ಹರಸಿ ಬರಲಿದೆ. ಹೊಸ ವರ್ಷದಲ್ಲಿ ನೀವು ಸ್ಮರಣೀಯ ಪ್ರವಾಸ ಕೈಗೊಳ್ಳಬಹುದು.

ಇದನ್ನೂ ಓದಿ- Remedies For Mercury: ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು ಸರಳ ಸಲಹೆಗಳು

ಕುಂಭ ರಾಶಿ: 2023ರಲ್ಲಿ ರಾಹು ಕುಂಭ ರಾಶಿಯವರಿಗೆ ಬಂಪರ್ ಲಾಭ ನೀಡಲಿದ್ದಾನೆ. ವ್ಯಾಪಾರ-ವ್ಯವಹಾರದಲ್ಲಿ ದೊಡ್ಡ ಆರ್ಡರ್ ಸಿಗಬಹುದು. ಕೆಲವು ವಿಚಾರಗಳಲ್ಲಿ ರಿಸ್ಕ್ ಇದ್ದರೂ ಕೂಡ ತುಂಬಾ ಶುಭ ಫಲಿತಾಂಶಗಳು ಲಭ್ಯವಾಗಲಿವೆ. ಉದ್ಯೋಗಸ್ಥರಿಗೆ ಲಾಭವಾಗಲಿದೆ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News