ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ

 ಜನ್ಮ ರಾಶಿಗನುಗುಣವಾಗಿ ಕೆಲವು ರಾಶಿಚಕ್ರಗಳ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ. ಅವರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ನನಸಾಗಿಸಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.   

Written by - Ranjitha R K | Last Updated : Nov 26, 2021, 12:27 PM IST
  • ಈ 4 ರಾಶಿಯ ಜನರು ತುಂಬಾ ಭಾವೋದ್ರಿಕ್ತರು
  • ಕನಸುಗಳನ್ನು ಈಡೇರಿಸಿಯೇ ಶಾಂತರಾಗುತ್ತಾರೆ.
  • ಜೀವನದಲ್ಲಿ ದೊಡ್ಡ ಸ್ಥಾನ ಪಡೆಯುತ್ತಾರೆ
 ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ title=
ಈ 4 ರಾಶಿಯ ಜನರು ತುಂಬಾ ಭಾವೋದ್ರಿಕ್ತರು (file photo)

ನವದೆಹಲಿ : ಜ್ಯೋತಿಷ್ಯದ (Astrology) ಪ್ರಕಾರ 12 ರಾಶಿಗಳಿವೆ. ಪ್ರತಿಯೊಬ್ಬ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯನ್ನು (Zodiac sign) ಅವನ ಜನ್ಮದ ದಿನ , ಸಮಯವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಅದರ ಆಧಾರದ ಮೇಲೆ ಗ್ರಹಗಳು ಮತ್ತು ನಕ್ಷತ್ರಗಳ ಲೆಕ್ಕಾಚಾರದ ಮೂಲಕ ಅವನ ಭವಿಷ್ಯವನ್ನು ಕಂಡುಹಿಡಿಯಲಾಗುತ್ತದೆ. ಇದಲ್ಲದೆ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ.  ಜನ್ಮ ರಾಶಿಗನುಗುಣವಾಗಿ ಕೆಲವು ರಾಶಿಚಕ್ರಗಳ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ. ಅವರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ನನಸಾಗಿಸಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. 

ಈ ರಾಶಿಚಕ್ರ ಚಿಹ್ನೆಗಳ ಜನರು ಭಾರೀ ಯಶಸ್ಸು ಪಡೆಯುತ್ತಾರೆ. :
 ಮೇಷ ರಾಶಿ (Aries): ಮೇಷ ರಾಶಿಯ ಜನರು ಗೆಲ್ಲುವ, ತಮ್ಮನ್ನು ತಾವು ಸಾಬೀತುಪಡಿಸುವ ಛಲವನ್ನು ಹೊಂದಿರುತ್ತಾರೆ. ಪ್ರತಿ ಸವಾಲನ್ನು ಸ್ವೀಕರಿಸಿ, ಅದರಲ್ಲಿ ಜಯ ಸಾಧಿಸುತ್ತಾರೆ. ಯಾವುದೇ ಕೆಲಸ ಹಿಡಿದರೂ ಅದನ್ನು ಸಾಧಿಸುವ ತನಕ ಸುಮ್ಮನಿರುವುದಿಲ್ಲ. ಕೆಲಸ ಮುಗಿಸಿದ ನಂತರವೇ ಸಮಾಧಾನವಾಗಿರುತ್ತಾರೆ. 

ಇದನ್ನೂ ಓದಿ : ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ

ವೃಷಭ ರಾಶಿ (Taurus) : ವೃಷಭ ರಾಶಿಯ ಜನರು ತುಂಬಾ ಭಾವೋದ್ರಿಕ್ತರು. ಅವರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ನನಸಾಗಿಸಲು ತಮ್ಮ  ಶಕ್ತಿ ಮೀರಿ ಶ್ರಮಿಸುತ್ತಾರೆ. ಅವರ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕನಸು ಕಾಣುವುದನ್ನು ಮತ್ತು ಮುಂದೆ ಸಾಗುವುದನ್ನು ನಿಲ್ಲಿಸುವುದಿಲ್ಲ. 

ತುಲಾ ರಾಶಿ (Libra): ತುಲಾ ರಾಶಿಯ ಜನರು ತುಂಬಾ ಬುದ್ಧಿವಂತರು ಮತ್ತು ಸಮತೋಲಿತ ಚಿಂತನೆಯನ್ನು ಹೊಂದಿರುತ್ತಾರೆ. ಈ ಜನರು ತುಂಬಾ ಆಕರ್ಷಕ ಸ್ವಾಭಾವದವರಾಗಿರುತ್ತಾರೆ, ಮತ್ತು ಸ್ಪರ್ಧಾತ್ಮಕರಾಗಿದ್ದಾರೆ. ಈ ಜನರು ಗೆಲ್ಲಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ತಮ್ಮ ಕೆಲಸದಲ್ಲಿ ಯಶಸ್ವಿಯಾದ ನಂತರವೇ ನಿಟ್ಟುಸಿರು ಬಿಡುತ್ತಾರೆ.  

ಇದನ್ನೂ ಓದಿ : Horoscope 2022: ಇವು 2022 ರ ಅತ್ಯಂತ ಅದೃಷ್ಟದ 6 ರಾಶಿಚಕ್ರ ಚಿಹ್ನೆಗಳು

ವೃಶ್ಚಿಕ (Scorpio): ವೃಶ್ಚಿಕ ರಾಶಿಯ ಜನರು ತುಂಬಾ ಬುದ್ಧಿವಂತರು. ತಮ್ಮ ಕನಸುಗಳನ್ನು ನನಸಾಗಿಸದೆ ಬಿಡುವುದಿಲ್ಲ. ಆದರೆ ತಮ್ಮ ಕೆಲಸ ಸಾಧಿಸಲು ಸಾಮ, ಧಾಮ, ದಂಡ ಭೇದ  ಹೀಗೆ ಎಲ್ಲಾ ಅಸ್ತ್ರವನ್ನೂ ಬಳಸುತ್ತಾರೆ. ಒಟ್ಟಾರೆಯಾಗಿ, ಗೆಲ್ಲಲು ಪ್ರತಿಯೊಂದು ವಿಧಾನವನ್ನು ಬಳಸಿಕೊಳ್ಳುತ್ತಾರೆ. ಈ ರಾಶಿಯವರಿಗೆ ಸವಾಲು ಹಾಕುವುದು ಒಳ್ಳೆಯದಲ್ಲ. ಯಾಕೆಂದರೆ ಇವ್ರು ತಮ್ಮ ಗೆಲುವಿಗೆ ಯಾರಿಗೆ ಬೇಕಾದರೂ ಹಾನಿ ಉಂಟು ಮಾಡ ಬಲ್ಲರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News