Astrology: ಅಪಾಯದೊಂದಿಗೆ ಸರಸ ಆಡುವುದೆಂದರೆ ಈ ರಾಶಿಯವರಿಗೆ ಅಚ್ಚುಮೆಚ್ಚು

ಕೆಲವರಿಗೆ ಎಷ್ಟು ಬೇಡ ಎಂದರೂ, ಅಪಾಯಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ.  ಈ ಜನರಿಗೆ ಅಪಾಯದೊಂದಿಗೆ ಜೀವನ ಮಾಡುವುದೆಂದರೆ ಇಷ್ಟ . 

Written by - Ranjitha R K | Last Updated : Sep 3, 2021, 06:34 PM IST
  • ಈ ರಾಶಿಚಕ್ರದ ಜನರು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುತ್ತಾರೆ
  • ಸವಾಲುಗಳಿಗೆ ಹೆದರುವವರಲ್ಲಿ ಈ ರಾಶಿಯ ಜನರು
  • ಏನೇ ಬಂದರು ಧೈರ್ಯದಿಂದ ಮುನ್ನುಗ್ಗುತ್ತಾರೆ
Astrology: ಅಪಾಯದೊಂದಿಗೆ ಸರಸ ಆಡುವುದೆಂದರೆ ಈ ರಾಶಿಯವರಿಗೆ ಅಚ್ಚುಮೆಚ್ಚು   title=
ಈ ರಾಶಿಚಕ್ರದ ಜನರು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುತ್ತಾರೆ (file photo)

ನವದೆಹಲಿ : ಪ್ರತಿ ರಾಶಿಚಕ್ರದ (Zodiac sign) ಜನರು ವಿಭಿನ್ನ ಜೀವನ ವಿಧಾನವನ್ನು ಅನುಸರಿಸುತ್ತಾರೆ. ಕೆಲವರಿಗೆ ಎಲ್ಲದರಲ್ಲೂ ಅಪಾಯ ತೆಗೆದುಕೊಳ್ಳುವುದೆಂದರೆ  ಇಷ್ಟ. ಆದರೆ, ಕೆಲವರು ಅಪಾಯವಿಲ್ಲದೆ ಸುರಕ್ಷಿತ ಜೀವನವನ್ನೇ ನಡೆಸಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ (astrology), ಕೆಲವು ರಾಶಿಯ ಜನರು ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ನಷ್ಟವನ್ನು ಅನುಭವಿಸುತ್ತಾರೆ. ಇನ್ನು ಕೆಲವರಿಗೆ ಎಷ್ಟು ಬೇಡ ಎಂದರೂ, ಅಪಾಯಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ.  ಈ ಜನರಿಗೆ ಅಪಾಯದೊಂದಿಗೆ ಜೀವನ ಮಾಡುವುದೆಂದರೆ ಇಷ್ಟ . 

ಈ ರಾಶಿಯವರು ಅಪಾಯವನ್ನು ತೆಗೆದುಕೊಳ್ಳದೆ ಬದುಕುವುದಿಲ್ಲ:
ಮೇಷ (Aries): ಈ ರಾಶಿಚಕ್ರದ ಜನರು ಆತ್ಮವಿಶ್ವಾಸದ ಜೊತೆಗೆ ಧೈರ್ಯವಂತರು. ಅವರು ಅಪಾಯಗಳೊಂದಿಗೆ ಸರಸವಾಡುವುದೆಂದರೆ ಇವರಿಗೆ ಬಹಳ ಇಷ್ಟ. ಸಾಹಸ ಆಟವಾಗಲಿ ಅಥವಾ ವೃತ್ತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರವಾಗಲಿ ರಿಸ್ಕ್ ತೆಗೆದುಕೊಂಡೇ ಮುನ್ನಡೆಯುತ್ತಾರೆ. 

ಇದನ್ನೂ ಓದಿ : Loved Ones Death: ಮೃತ ಪ್ರೀತಿಪಾತ್ರರ ನೆನಪಿಗಾಗಿ ಅವರ ಬಟ್ಟೆ ಧರಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ವೃಷಭ ರಾಶಿ (Taurus): ಈ ರಾಶಿಚಕ್ರದ (Zodiac sign) ಜನರು ತೆರೆದ ಮತ್ತು ತೀಕ್ಷ್ಣ ಮನಸ್ಸಿನವರು. ಈ ಜನರು ಜೀವನದಲ್ಲಿ ಎಂಥ ಅಪಾಯಕ್ಕೂ ಹಿಂಜರಿಯುವುದಿಲ್ಲ. ಆದರೆ, ಹೀಗೆ ಅಪಾಯಗಳತ್ತ ಮುನ್ನುಗ್ಗುವಾಗಲೂ ಲೆಕ್ಕಾಚಾರ ಹಾಕುತ್ತಾರೆ.  

ಸಿಂಹ (Leo): ಈ ರಾಶಿಯ ಜನರು ತುಂಬಾ ಧೈರ್ಯಶಾಲಿಗಳು. ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ಯೋಚಿಸುವುದಿಲ್ಲ. ಏನು ಮಾಡಬೇಕೆಂದು ನಿರ್ಧಾರ ಮಾಡುತ್ತಾರೋ ಅದೇ ನಿರ್ಧಾರದ ಪ್ರಕಾರ ಬದುಕುತ್ತಾರೆ.  ಕೆಲವೊಮ್ಮೆ ತಮ್ಮ ಹಠದಿಂದಲೇ ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. 

ಇದನ್ನೂ ಓದಿ: Shree Lakshmi Chalisa: ಈ ದಿನ ಲಕ್ಷ್ಮೀ ದೇವಿ ಮಂತ್ರ ಜಪಿಸುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಸಿಗುತ್ತೆ ಮುಕ್ತಿ

ವೃಶ್ಚಿಕ (Scorpio): ಈ ರಾಶಿಯವರು ಕಠಿಣ ಪರಿಶ್ರಮದಲ್ಲಿ ಎಷ್ಟು ಮುಂದಿದ್ದಾರೋ, ಅಷ್ಟೇ ಅವರು ಅಪಾಯಗಳನ್ನು ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ.

ಧನು (Sagittarius): ಈ ಜನರು ಅಪಾಯಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲ, ಅದರ ನಂತರ ಬರುವ ಸವಾಲುಗಳಿಗೆ ಹೆದರುವುದಿಲ್ಲ. ಅವನ ಈ ಉತ್ಸಾಹ ಅವನನ್ನು ಇತರರಿಗಿಂತ ಭಿನ್ನವಾಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News