ಈ ರಾಶಿಚಕ್ರದ ಜನರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುತ್ತಾರೆ , ಎಂಥಹ ಸವಾಲೇ ಆದರೂ ಎದುರಿಸಿ ಗೆಲ್ಲುತ್ತಾರೆ

ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ನಿಲುವು, ದೈಹಿಕ ಸಾಮರ್ಥ್ಯ ಮತ್ತು ಮನೋಧರ್ಮವನ್ನು ಹೊಂದಿರುತ್ತಾನೆ. ಜ್ಯೋತಿಷ್ಯದ (astology) ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಈ ಗುಣ ಧರ್ಮಗಳು ಆತನ ರಾಶಿಚಕ್ರವನ್ನು ಅವಲಂಬಿಸಿರುತ್ತದೆ. 

Written by - Ranjitha R K | Last Updated : Sep 16, 2021, 05:23 PM IST
  • ಸವಾಲುಗಳನ್ನು ಎದುರಿಸಿ ಗೆದ್ದು ಬಿಡುತ್ತಾರೆ ಈ ರಾಶಿಯವರು
  • ಯಾವ ಕೆಲಸಕ್ಕಾದರೂ ಇಳಿದರೆ ಸಾಧಿಸಿಯೇ ತೀರುತ್ತಾರೆ
  • ಈ ರಾಶಿಯವರನ್ನು ವಿಜೇತರೆಂದೇ ಕರೆಯುತ್ತಾರೆ
ಈ ರಾಶಿಚಕ್ರದ ಜನರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುತ್ತಾರೆ , ಎಂಥಹ ಸವಾಲೇ ಆದರೂ ಎದುರಿಸಿ ಗೆಲ್ಲುತ್ತಾರೆ    title=
ಸವಾಲುಗಳನ್ನು ಎದುರಿಸಿ ಗೆದ್ದು ಬಿಡುತ್ತಾರೆ ಈ ರಾಶಿಯವರು (file photo)

ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ನಿಲುವು, ದೈಹಿಕ ಸಾಮರ್ಥ್ಯ ಮತ್ತು ಮನೋಧರ್ಮವನ್ನು ಹೊಂದಿರುತ್ತಾನೆ. ಜ್ಯೋತಿಷ್ಯದ (astrology) ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಈ ಗುಣ ಧರ್ಮಗಳು ಆತನ ರಾಶಿಚಕ್ರವನ್ನು ಅವಲಂಬಿಸಿರುತ್ತದೆ.  ವ್ಯಕ್ತಿಯ ರಾಶಿ ಚಿಹ್ನೆಯ ಮೂಲಕ ಆತನ ಗುಣ ಲಕ್ಷಣಗಳನ್ನು ಕೂಡಾ ಅಂದಾಜಿಸಬಹುದು. ಈ ರಾಶಿಯವರು (Zodiac sign) ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ  ಸದೃಢರಾಗಿರುತ್ತಾರೆ. ತಮ್ಮ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಿಕೊಳ್ಳುತ್ತಾರೆ.  

ವೃಶ್ಚಿಕ ರಾಶಿಯವರು ದೃಢ ನಿಶ್ಚಯಿಗಳು : 
ವೃಶ್ಚಿಕ ರಾಶಿಯ (Scorpio) ಜನರು ಏನನ್ನಾದರೂ ಸಾಧಿಸಲು ಮನಸ್ಸು ಮಾಡಿದರೆ ಅದನ್ನು ಸಾಧಿಸಿಯೇ ಬಿಡುತ್ತಾರೆ. ಈ ರಾಶಿಚಕ್ರದ (Zodiac sign) ಜನರು ಯಾವ  ವಿಷಯದಲ್ಲೂ ಇತರರೊಂದಿಗೆ ಜಗಳವಾಡುವುದಿಲ್ಲ. ಅವರು ತಮ್ಮ ಬುದ್ಧಿವಂತಿಕೆ ಮತ್ತು ದೈಹಿಕ ಸಾಮರ್ಥ್ಯದ ಮೂಲಕ ಏನು ಬೇಕಾದರೂ ಸಾಧಿಸುತ್ತಾರೆ. 

ಇದನ್ನೂ ಓದಿ : Vastu Tips: ಈ 3 ಅದ್ಭುತ ಟಿಪ್ಸ್ ಅನುಸರಿಸಿದರೆ, ನಿಮ್ಮ ಪರ್ಸ್ ಎಂದಿಗೂ ಖಾಲಿ ಆಗಲ್ಲ

ಇವರು ಎಲ್ಲದರಲ್ಲೂ ನಿಪುಣರು :
ಮಕರ ರಾಶಿಯ (Capricorn) ಜನರು ಎಲ್ಲದರಲ್ಲೂ ನಿಪುಣರು. ಈ ಜನರು ತುಂಬಾ ಶ್ರಮಜೀವಿಗಳು ಮತ್ತು ಇತರ ಜನರಿಗೆ ತಮ್ಮ ಕೆಲಸದಿಂದ ಸ್ಫೂರ್ತಿ ನೀಡುತ್ತಾರೆ. ಈ ರಾಶಿಚಕ್ರದ ಜನರು ಕೆಟ್ಟ ಪರಿಸ್ಥಿತಿಗೆ ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಸತತ ಪಯತ್ನಗಳ ಮೂಲಕ ಗುರು ಸಾಧಿಸಿಬಿಡುತ್ತಾರೆ.  

ಈ ರಾಶಿಯವರು ವಿಜೇತರು :
ಮೇಷ ರಾಶಿಯ (Aries) ಜನರನ್ನು ವಿಜೇತರು ಎಂದು ಕರೆಯಲಾಗುತ್ತದೆ. ಇವರು  ಸೃಜನಶೀಲರು ಮತ್ತು ಉಗ್ರ ಸ್ವಭಾವದವರಾಗಿರುತ್ತಾರೆ. ಈ ರಾಶಿಯ ಜನರು ಏನೇ ಕೆಲಸ ಮಾಡಲು ಹೊರಟರೂ, ಆ ಕೆಲಸ ಮುಗಿಯುವ ತನಕ ಸುಮ್ಮನಿರುವುದಿಲ್ಲ. ಇದಕ್ಕಾಗಿ, ತನ್ನ ಬುದ್ಧಿವಂತಿಕೆ, ಸ್ನಾಯು ಶಕ್ತಿ ಮತ್ತು ಸಂಪರ್ಕ ಹೀಗೆ ಎಲ್ಲವನ್ನೂ ಬಳಸಿ ತಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಿ ಬಿಡುತ್ತಾರೆ. ಇವರ ಈ ಗುಣದಿಂದಲೇ ಎಲ್ಲರಿಂದಲೂ ಮುಂದಿರುತ್ತಾರೆ. 

ಇದನ್ನೂ ಓದಿ : Death Sign-ಸಾವಿಗೂ ಮುನ್ನ ಸಿಗುತ್ತವೆ ಈ ಸಂಕೇತಗಳು, ಕನಸಿನಲ್ಲಿ ಕಾಣುತ್ತವೆ ಈ ವಿಚಿತ್ರ ಸಂಗತಿಗಳು

ವೃಷಭ ರಾಶಿಯವಲ್ಲಿ ಅಡಗಿರುತ್ತದೆ ನಾಯಕತ್ವದ ಗುಣಗಳು :
ವೃಷಭ ರಾಶಿಯ ಜನರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಇವರು ಕಷ್ಟದ ಸಮಯದಲ್ಲಿ ತಮ್ಮ ಜನರನ್ನು ಬಿಟ್ಟು ಬಿಡುವುದಿಲ್ಲ.  ಈ ರಾಶಿಚಕ್ರದ ಜನರು ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದನ್ನು ಪಡೆಯಲು ಯಾರೊಂದಿಗೆಬೇಕಾದರೂ ಹೋರಾಡಲು ಸಿದ್ಧರಾಗಿರುತ್ತಾರೆ. 

ಕರುಣಾಮಯಿಗಳಾಗುತ್ತಾರೆ  ಸಿಂಹ ರಾಶಿಯ ಜನರು :  
ಸಿಂಹ (Leo) ರಾಶಿಚಕ್ರದ ಜನರನ್ನು ತುಂಬಾ ಕರುಣಾಮಯಿ ಎಂದು ಪರಿಗಣಿಸಲಾಗುತ್ತದೆ. ಅವರು ಯಾರ ಮನಸ್ಸನ್ನು ನೋಯಿಸುವುದಿಲ್ಲ. ನೋವಿನಲ್ಲಿರುವವರನ್ನು ಕಂಡರೆ ಸಹಾಯಕ್ಕೆ ಮುಂದಾಗುತ್ತಾರೆ. ಯಾವುದೇ ಸಮಸ್ಯೆಯ ಬಗ್ಗೆ ಚಿಂತಿಸುವ ಬದಲು, ಅದರ ಪರಿಹಾರದ ಕಡೆಗೆ ಯೋಚಿಸಲು ಪ್ರಾರಂಭಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News