ಜೀವನಪೂರ್ತಿ ಧನಿಕರೇ ಆಗಿರುತ್ತಾರೆ ಈ ಮೂರು ರಾಶಿಯವರು, ಸದಾ ಇರಲಿದೆ ಶನಿ ಮಹಾತ್ಮನ ಕೃಪೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಚಕ್ರದಲ್ಲಿ ನಾಲ್ಕು ಅಂಶಗಳನ್ನು ಇರಿಸಲಾಗಿದೆ. ಈ ನಾಲ್ಕು ಅಂಶಗಳೆಂದರೆ ಬೆಂಕಿ, ಭೂಮಿ, ಗಾಳಿ ಮತ್ತು ನೀರು.   

Written by - Ranjitha R K | Last Updated : Dec 17, 2021, 08:50 AM IST
  • 3 ರಾಶಿಚಕ್ರ ಚಿಹ್ನೆಗಳ ಜನರೂ ಯಾವಾಗಲೂ ಶ್ರೀಮಂತರಾಗಿರುತ್ತಾರೆ
  • ಸಂಪತ್ತಿನ ಅಧಿಪತಿ ಶುಕ್ರನೊಂದಿಗೆ ಆಳವಾದ ಸಂಪರ್ಕವಿದೆ.
  • ಶನಿದೇವನ ಆಶೀರ್ವಾದ ಸದಾ ಇವರ ಮೇಲಿರುತ್ತದೆ
ಜೀವನಪೂರ್ತಿ ಧನಿಕರೇ ಆಗಿರುತ್ತಾರೆ ಈ ಮೂರು ರಾಶಿಯವರು, ಸದಾ ಇರಲಿದೆ ಶನಿ ಮಹಾತ್ಮನ ಕೃಪೆ  title=
3 ರಾಶಿಚಕ್ರ ಚಿಹ್ನೆಗಳ ಜನರೂ ಯಾವಾಗಲೂ ಶ್ರೀಮಂತರಾಗಿರುತ್ತಾರೆ (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (astrology) ರಾಶಿಚಕ್ರದಲ್ಲಿ ನಾಲ್ಕು ಅಂಶಗಳನ್ನು ಇರಿಸಲಾಗಿದೆ. ಈ ನಾಲ್ಕು ಅಂಶಗಳೆಂದರೆ ಬೆಂಕಿ, ಭೂಮಿ, ಗಾಳಿ ಮತ್ತು ನೀರು. ಮೇಷ, ಸಿಂಹ ಮತ್ತು ಧನು ರಾಶಿಯನ್ನು ಬೆಂಕಿಯ ಅಂಶದಲ್ಲಿ ಇರಿಸಲಾಗಿದೆ. ವೃಷಭ, ಕನ್ಯಾ ಮತ್ತು ಮಕರ ರಾಶಿಗಳು ಭೂಮಿಯ ಅಂಶದಲ್ಲಿ ಬರುತ್ತವೆ. ಆದರೆ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯನ್ನು ನೀರಿನ ಅಂಶದಲ್ಲಿ ಇರಿಸಲಾಗಿದೆ. ಇವುಗಳಲ್ಲಿ, ಭೂಮಿಯ ಅಂಶವು ಜ್ಯೋತಿಷ್ಯದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಭೂಮಿಯ ಅಂಶದ ವೃಷಭ , ಕನ್ಯಾರಾಶಿ ಮತ್ತು ಮಕರ ರಾಶಿಗಳು ಬುಧ ಗ್ರಹಕ್ಕೆ ನಿಕಟ ಸಂಬಂಧ ಹೊಂದಿವೆ.  ಈ ರಾಶಿಚಕ್ರ ಚಿಹ್ನೆಗಳ (Zodiac Sign) ಜನರು ಅತ್ಯಂತ ಸುಂದರ ಮತ್ತು ಶ್ರೀಮಂತರಾಗಿರುತ್ತಾರೆಯಂತೆ.   

ವೃಷಭ ರಾಶಿ
ವೃಷಭ ರಾಶಿಯ (Taurus) ಅಧಿಪತಿ ಶುಕ್ರ (Venus). ಅಲ್ಲದೆ, ಈ ರಾಶಿಚಕ್ರದ ಜನರಜಾತಕದಲ್ಲಿ ಚಂದ್ರನು ತುಂಬಾ ಪ್ರಬಲನಾಗಿರುತ್ತಾನೆ. ಇದಲ್ಲದೆ, ಬುಧವು ಈ ರಾಶಿಚಕ್ರದ (Zodiac Sign)  ಜನರ ಮೇಲೆ ಪ್ರಭಾವ ಬೀರುತ್ತದೆ. ಶುಕ್ರ ಮತ್ತು ಬುಧನ ಪ್ರಭಾವದಿಂದ, ಈ ರಾಶಿಚಕ್ರದ ಜನರು ಧೈರ್ಯ, ಆತ್ಮವಿಶ್ವಾಸ ಮತ್ತು ಹಣದ ವಿಷಯದಲ್ಲಿ ಇತರರಿಗಿಂತ ಮುಂದಿರುತ್ತಾರೆ. ಆದರೂ ಈ ರಾಶಿಚಕ್ರದ ಜನರು ಹಠಮಾರಿ ಮತ್ತು ಕೋಪದ ಸ್ವಭಾವವರಾಗಿರುತ್ತಾರೆ.  

ಇದನ್ನೂ ಓದಿ : 18 ವರ್ಷಗಳ ನಂತರ ಈ ರಾಶಿಗೆ ರಾಹು ಪ್ರವೇಶ, ನಾಲ್ಕು ರಾಶಿಯವರಿಗೆ ಆಗಲಿದೆ ಭಾರೀ ಧನ ಲಾಭ

ಕನ್ಯಾರಾಶಿ
ಭೂಮಿಯ ಅಂಶದ ಕನ್ಯಾ ರಾಶಿಯ ಅಧಿಪತಿ ಬುಧ (Mercury). ಜ್ಯೋತಿಷ್ಯದ ಪ್ರಕಾರ, ಕನ್ಯಾರಾಶಿ (Virgo) ಭೂಮಿಯ ಅಂಶದ ಅತಿದೊಡ್ಡ ರಾಶಿ ಚಿಹ್ನೆ. ಬುಧಗ್ರಹದ ಪ್ರಭಾವದಿಂದಾಗಿ ಈ ರಾಶಿಯವರಲ್ಲಿ ಚಾಕಚಕ್ಯತೆ, ವಾಕ್ಚಾತುರ್ಯ, ನಿರ್ವಹಣೆಯ ಗುಣಗಳು ಇರುತ್ತವೆ. ಇದಲ್ಲದೇ ಈ ರಾಶಿಯ ಜನರು ಹಣಕಾಸಿನ ವಿಷಯದಲ್ಲಿ ಬೇರೆಯವರಿಗಿಂತ ಮುಂದಿರುತ್ತಾರೆ. ಆದರೆ ಈ ರಾಶಿಯವರು ಬಹಳ ಸ್ವಾರ್ಥ ಪ್ರವೃತ್ತಿ ಹೊಂದಿರುತ್ತಾರೆ. ಇದೇ ಈ ರಾಶಿಚಕ್ರದ ದೊಡ್ಡ ದೌರ್ಬಲ್ಯ. 

ಮಕರ 
ಶನಿಯು (Shanidev) ಮಕರ ರಾಶಿಯ ಅಧಿಪತಿ. ಬುಧನು ಈ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುತ್ತಾನೆ. ಇದರಿಂದಾಗಿ ಈ ರಾಶಿಯ ಜನರು ಬುದ್ಧಿವಂತರಾಗಿರುತ್ತಾರೆ. ಬುಧದ ಪ್ರಭಾವದಿಂದಾಗಿ, ಈ ರಾಶಿಚಕ್ರದ ಜನರು ಅವಕಾಶವಾದಿ, ಕುತಂತ್ರ ಮತ್ತು ಶ್ರೀಮಂತರಾಗಿರುತ್ತಾರೆ. ಈ ರಾಶಿಚಕ್ರ ಚಿಹ್ನೆಗಳ (Zodiac Sign) ಜನರು ಅಹಂಕಾರ ಸ್ವಾಭಾವದವರಾಗಿರುತ್ತಾರೆ. ಇದೇ ಅವರ  ದೌರ್ಬಲ್ಯವಾಗಿರುತ್ತದೆ. ಈ ರಾಶಿಯವರು ಸೂರ್ಯನ (Sun) ಆರಾಧನೆ ಮಾಡಿದರೆ ಒಳ್ಳೆಯದು.  

ಇದನ್ನೂ ಓದಿ : Surya Gochar: ಧನು ರಾಶಿಗೆ ಸೂರ್ಯನ ಪ್ರವೇಶ, ಮುಂದಿನ 30 ದಿನ ಈ ರಾಶಿಯವರಿಗೆ ಅಶುಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News