Palmistry: ಬೆರಳುಗಳ ನಡುವಿನ ಇಂತಹ ಅಂತರವು ದುರದೃಷ್ಟವನ್ನು ಸೂಚಿಸುತ್ತದೆ!

ಕೈನ ಬೆರಳುಗಳ ನಡುವಿನ ವ್ಯತ್ಯಾಸದಿಂದಲೂ ವ್ಯಕ್ತಿಯ ಭವಿಷ್ಯದ ಬಗ್ಗೆ ಹೇಳಬಹುದಾಗಿದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

Written by - Puttaraj K Alur | Last Updated : Jul 3, 2022, 11:21 AM IST
  • ಕಿರುಬೆರಳು & ಉಂಗುರದ ಬೆರಳಿನ ನಡುವೆ ಅತಿಯಾದ ಅಂತರವಿದ್ದರೆ ವೃದ್ಧಾಪ್ಯದಲ್ಲಿ ತೊಂದರೆ
  • ಮಧ್ಯದ & ತೋರು ಬೆರಳಿನ ನಡುವೆ ಅಸಹಜ ಅಂತರವಿದ್ದರೆ ಅಂತಹವರ ಬಾಲ್ಯ ಕಷ್ಟಕರವಾಗಿರುತ್ತದೆ
  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಬೆರಳುಗಳ ನಡುವೆ ಹೆಚ್ಚು ಅಂತರ ಹೊಂದಿರದಿರುವುದು ಉತ್ತಮ
Palmistry: ಬೆರಳುಗಳ ನಡುವಿನ ಇಂತಹ ಅಂತರವು ದುರದೃಷ್ಟವನ್ನು ಸೂಚಿಸುತ್ತದೆ!   title=
ಬೆರಳುಗಳ ನಡುವಿನ ವ್ಯತ್ಯಾಸದಿಂದ ಭವಿಷ್ಯ ತಿಳಿಯಿರಿ

ನವದೆಹಲಿ: ಅಂಗೈಗೆ ಸಂಬಂಧಿಸಿದ ಎಲ್ಲವನ್ನೂ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ವ್ಯಕ್ತಿಯ ಭವಿಷ್ಯದ ಬಗ್ಗೆ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. ಅಂಗೈ ಆಕಾರದಿಂದ ವ್ಯಕ್ತಿಯ ಜೀವನದ ಬಗ್ಗೆ ಕೆಲ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಬೆರಳುಗಳ ಆಕಾರ, ಬೆರಳುಗಳ ನಡುವಿನ ಅಂತರ ಮತ್ತು ಉಗುರಿನ ಆಕಾರದ ಬಗ್ಗೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಕೈನ ಬೆರಳುಗಳ ನಡುವಿನ ವ್ಯತ್ಯಾಸದಿಂದಲೂ ವ್ಯಕ್ತಿಯ ಭವಿಷ್ಯದ ಬಗ್ಗೆ ಹೇಳಬಹುದಾಗಿದೆ.  ಬೆರಳುಗಳ ನಡುವೆ ಸಾಮಾನ್ಯ ಅಂತರ ಅಥವಾ ಅತಿಯಾದ ಅಂತರವಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ಬೆರಳುಗಳ ನಡುವಿನ ವ್ಯತ್ಯಾಸದಿಂದ ಭವಿಷ್ಯ ತಿಳಿಯಿರಿ

  • ಕೈಯಲ್ಲಿ ಕಿರುಬೆರಳು ಮತ್ತು ಉಂಗುರದ ಬೆರಳಿನ ನಡುವೆ ಅತಿಯಾದ ಅಂತರವನ್ನು ಹೊಂದಿರುವ ಜನರು ವೃದ್ಧಾಪ್ಯದಲ್ಲಿ ತೊಂದರೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಈ ಜನರು ತಮ್ಮ ಜೀವನದ ಕೊನೆಯ ಸಮಯದಲ್ಲಿ ಬಹಳಷ್ಟು ಬಳಲುತ್ತಾರೆ.
  • ಮಧ್ಯದ ಬೆರಳು ಮತ್ತು ತೋರು ಬೆರಳಿನ ನಡುವೆ ಅಸಹಜವಾದ ಅಂತರವಿದ್ದರೆ ಅಂತಹವರ ಬಾಲ್ಯ ಕಷ್ಟಕರವಾಗಿರುತ್ತದೆ. ಈ ಜನರು ಜೀವನದ ಆರಂಭಿಕ ವರ್ಷಗಳಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ವರ್ಷಗಳು ಕಳೆದ ನಂತರ ಇವರ ಜೀವನವು ಸರಿಯಾದ ಹಾದಿಗೆ ಬರಲು ಪ್ರಾರಂಭಿಸುತ್ತದೆ.
  • ಮಧ್ಯದ ಬೆರಳು ಮತ್ತು ತೋರುಬೆರಳಿನ ನಡುವೆ ಸಾಮಾನ್ಯ ಅಂತರವಿದ್ದರೆ, ಅಂತಹ ಜನರ ಜೀವನವು ಹಣಕಾಸಿನ ನಿರ್ಬಂಧಗಳ ನಡುವೆ ಹಾದುಹೋಗುತ್ತದೆ. ಈ ಜನರು ಕಠಿಣ ಹೋರಾಟದ ನಂತರವೇ ಯಶಸ್ಸನ್ನು ಪಡೆಯುತ್ತಾರೆ.
  • ಉಂಗುರದ ಬೆರಳು ನೇರ ಮತ್ತು ಉದ್ದವಾಗಿದ್ದರೆ ಅಂತಹ ವ್ಯಕ್ತಿಯು ಹಣದ ವಿಷಯದಲ್ಲಿ ಅದೃಷ್ಟಶಾಲಿಯಾಗಿರುತ್ತಾನೆ. ಇಂತಹವರು ಬಹಳಷ್ಟು ಸಂಪತ್ತನ್ನು ಗಳಿಸುತ್ತಾರೆ.
  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಬೆರಳುಗಳ ನಡುವೆ ಹೆಚ್ಚು ಅಂತರವನ್ನು ಹೊಂದಿರದಿರುವುದು ಉತ್ತಮ. ಈ ರೀತಿ ಬೆರಳುಗಳನ್ನು ಹೊಂದಿರುವ ಜನರ ಜೀವನದಲ್ಲಿ ಎಲ್ಲಾ ಸೌಕರ್ಯಗಳು ಇರುತ್ತವೆ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News