ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ..

Significance of Tie Rakshi  : ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿಯ ಹಬ್ಬವಾಗಿದೆ. ಈ ಮಂಗಳಕರ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ.. ಅಣ್ಣ ತನ್ನ ರಕ್ಷಣೆಗೆ ಸದಾ ನಿಲ್ಲು ಅಂತ ಕೇಳಿಕೊಳ್ಳುತ್ತಾಳೆ.. ಮೊದಲ ರಾಖಿಯನ್ನು ಲಕ್ಷ್ಮಿ ದೇವಿಯು ಅಸುರ ರಾಜ ಬಲಿಗೆ ಕಟ್ಟಿದಳು. ಅಂದಿನಿಂದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

Written by - Krishna N K | Last Updated : Aug 17, 2024, 08:10 PM IST
    • ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿಯ ಹಬ್ಬ
    • ಸಹೋದರಿಯರು ತಮ್ಮ ಸಹೋದರನ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ..
    • ರಾಖಿಯನ್ನ ಅಣ್ಣ-ತಮ್ಮನ ಯಾವ ಕೈಗೆ ಹಗ್ಗ ಕಟ್ಟಬೇಕು ?
ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ.. title=

Raksha Bandhan 2024 : ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತಿದೆ. ಈ ವಿಶೇಷ ಮತ್ತು ಮಂಗಳಕರ ಹಬ್ಬದಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು. ಆದರೆ, ಇಂದು ಯಾರೂ ಈ ನಿಯಮಗಳನ್ನು ಪಾಲಿಸುತ್ತಿಲ್ಲ. ರಾಖಿಯನ್ನ ಅಣ್ಣ-ತಮ್ಮನ ಯಾವ ಕೈಗೆ ಹಗ್ಗ ಕಟ್ಟಬೇಕು ಎಂಬ ಪರಿಜ್ಞಾನವೂ ಸಹ ಕೆಲವರಿಗೆ ಇಲ್ಲ.. 

ಸಹೋದರಿಯು ಸಹೋದರನ ಬಲ ಮಣಿಕಟ್ಟಿನ ಮೇಲೆ ಮಾತ್ರ ರಾಖಿ ಕಟ್ಟಬೇಕು. ದೇಹದ ಬಲಭಾಗವು ಪವಿತ್ರವಾಗಿದೆ ಮತ್ತು ಧನಾತ್ಮಕ ಶಕ್ತಿಯನ್ನು ನಿರ್ವಹಿಸುತ್ತದೆ. ಆದ್ದರಿಂದ, ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಬಲಗೈಯಿಂದ ನಡೆಸಲಾಗುತ್ತದೆ. ದೇಹದ ಬಲಭಾಗವು ಹೆಚ್ಚು ನಿಯಂತ್ರಣ ಶಕ್ತಿಯನ್ನು ಹೊಂದಿದೆ. ಆದ್ದರಿಂದ, ದೇವರು ಬಲಗೈಯಿಂದ ಮಾಡಿದ ಧರ್ಮ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸುತ್ತಾನೆ.

ಇದನ್ನೂ ಓದಿ:ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರಿಗೆ ತುಂಬಾ ಕೋಪ..! ಆದ್ರೆ ಮನಸ್ಸು ತುಂಬಾ ಮುದ್ದು..

ದೇವಾಲಯದ ಪೂಜೆಯ ಸಮಯದಲ್ಲಿ ಹಳದಿ ಹಗ್ಗವನ್ನು ಬಲಗೈಗೆ ಮಾತ್ರ ಕಟ್ಟಲಾಗುತ್ತದೆ. ಶಾಸ್ತ್ರಗಳ ಪ್ರಕಾರ ರಾಖಿಯನ್ನು ಬಲಗೈಗೆ ಮಾತ್ರ ಕಟ್ಟಬೇಕು. ಸಹೋದರನ ಬಲಗೈಗೆ ರಾಖಿ ಕಟ್ಟುವುದು ಶುಭ ಎಂದು ನೆನಪಿನಲ್ಲಿಟ್ಟುಕೊಳ್ಳಿ.. ಧಾರ್ಮಿಕ ನಂಬಿಕೆಗಳ ಪ್ರಕಾರ, ಧಾರ್ಮಿಕ ವಿಧಿವಿಧಾನಗಳ ಸಮಯದಲ್ಲಿ ಕಂಕಣವನ್ನು ಬಲಗೈಗೆ ಕಟ್ಟಲಾಗುತ್ತದೆ.. ಇದೇ ಕಾರಣಕ್ಕೆ ರಕ್ಷಾ ಬಂಧನದ ದಿನ ಬಲಗೈಗೆ ರಾಖಿ ಕಟ್ಟಿ.. ನೂರು ಕಾಲ ಸುಖ, ಸಂತೋಷದಿಂದ ಇರಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News