ದೀಪಾವಳಿ ದಿನ 10 ರೂಪಾಯಿ ಬೆಲೆಯ ಈ ವಸ್ತು ಖರೀದಿಸಿದರೂ ಬೆಳಗುವುದು ಅದೃಷ್ಟ

ಧನತ್ರಯೋದಶಿ  ದಿನದಂದು ಚಿನ್ನ ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ಭಾಗ್ಯ ಬೆಳಗುತ್ತಾಳೆ ಎಂದು ಹೇಳಲಾಗುತ್ತದೆ. ಕೇವಲ 10 ರೂಪಾಯಿ ಮೌಲ್ಯದ ಈ ವಸ್ತುವನ್ನು ಖರೀದಿಸಿದರೂ ಲಕ್ಷ್ಮೀ ದೇವಿ ತನ್ನ ಆಶೀರ್ವಾದ ಹರಿಸುತ್ತಾಳೆಯಂತೆ . 

Written by - Ranjitha R K | Last Updated : Oct 19, 2022, 11:57 AM IST
  • ನರಕ ಚತುರ್ದಶಿಯ ಮುನ್ನಾ ದಿನ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ.
  • ಈ ಬಾರಿ ಅಕ್ಟೋಬರ್ 23 ರಂದು ಧನತ್ರಯೋದಶಿ ಆಚರಿಸಲಾಗುವುದು.
  • ಚಿನ್ನ ಬೆಳ್ಳಿ ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ.
ದೀಪಾವಳಿ ದಿನ 10 ರೂಪಾಯಿ ಬೆಲೆಯ ಈ ವಸ್ತು ಖರೀದಿಸಿದರೂ  ಬೆಳಗುವುದು ಅದೃಷ್ಟ  title=
Diwali 2022

ಬೆಂಗಳೂರು : ನರಕ ಚತುರ್ದಶಿಯ ಮುನ್ನಾ ದಿನ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 23 ರಂದು ಧನತ್ರಯೋದಶಿ ಆಚರಿಸಲಾಗುವುದು. ಈ ದಿನದಂದು ಕೆಲವೊಂದು ವಸ್ತುಗಳನ್ನು ಖರೀದಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಚಿನ್ನ ಬೆಳ್ಳಿ ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಇಂದಿನ ಚಿನ್ನ, ಬೆಳ್ಳಿಯ ದರ ನೋಡಿದರೆ ಎಲ್ಲರಿಗೂ ಇದನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಚಿನ್ನ ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ಭಾಗ್ಯ ಬೆಳಗುತ್ತಾಳೆ ಎಂದು ಹೇಳಲಾಗುತ್ತದೆ. ಕೇವಲ 10 ರೂಪಾಯಿ ಮೌಲ್ಯದ ಈ ವಸ್ತುವನ್ನು ಖರೀದಿಸಿದರೂ ಲಕ್ಷ್ಮೀ ದೇವಿ ತನ್ನ ಆಶೀರ್ವಾದ ಹರಿಸುತ್ತಾಳೆಯಂತೆ . 

ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ   ಧನತ್ರಯೋದಶಿಯ ದಿನ ಪೊರಕೆಯನ್ನು ಖರೀದಿಸಲಾಗುತ್ತದೆ. ಪೊರಕೆಯಂತೆಯೇ ಧನತ್ರಯೋದಶಿಯ ದಿನ ಉಪ್ಪನ್ನು ಖರೀದಿಸುವುದು ಕೂಡಾ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಉಪ್ಪನ್ನು ಖರೀದಿಸಬೇಕು. ಈ ದಿನದಂದು ಉಪ್ಪನ್ನು ಖರೀದಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Diwali Cleaning: ಗಂಟೆಗಳ ಕೆಲಸವನ್ನು ನಿಮಿಷಗಳಲ್ಲಿ ಮಾಡಿ ಮುಗಿಸಲು ಈ ಟಿಪ್ಸ್ ಅನುಸರಿಸಿ

ಧನತ್ರಯೋದಶಿಯ ದಿನದಂದು ಉಪ್ಪಿನ ಪರಿಹಾರ ಮಾರ್ಗಗಳನ್ನು ಅನುಸರಿಸಿ : 
ಧನತ್ರಯೋದಶಿಯ ದಿನದಂದು ಉಪ್ಪನ್ನು ಖರೀದಿಸುವುದು ಬಹಳ ಫಲಪ್ರದವೆಂದು  ಹೇಳಲಾಗುತ್ತದೆ. ಈ ದಿನದಂದು ಖರೀದಿಸಿದ ಉಪ್ಪನ್ನು ಇಡೀ ದಿನ ಯಾವುದಾದರೂ  ವಸ್ತುವಿನಲ್ಲಿ ಬಳಸುವುದರಿಂದ ವ್ಯಕ್ತಿಯ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 

ಮನೆಯ ಪೂರ್ವ ಮತ್ತು ಉತ್ತರ ಮೂಲೆಯಲ್ಲಿ ಗಾಜಿನ ಪಾತ್ರೆಯಲ್ಲಿ ಸ್ವಲ್ಪ ಉಪ್ಪನ್ನು ಇಡುವುದರಿಂದ ಮನೆಯ ದಾರಿದ್ರ್ಯ ದೂರವಾಗುತ್ತದೆ. ಅಷ್ಟೇ ಅಲ್ಲ, ಹಣದ ಆಗಮನದ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. 

ಈ ದಿನ, ವಿಶೇಷವಾಗಿ ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಒರೆಸುವುದರಿಂದ  ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ. 

ಇದನ್ನೂ ಓದಿ :  Diwali 2022: 27 ವರ್ಷಗಳ ಬಳಿಕ ದೀಪಾವಳಿಯಂದು ಸಂಭವಿಸುತ್ತಿದೆ ಸೂರ್ಯ ಗ್ರಹಣ, ಈ ರಾಶಿಗಳ ಜನರಿಗೆ ಎಚ್ಚರಿಕೆ!

ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತಿದ್ದರೆ, ಧನತ್ರಯೋದಶಿಯ ದಿನದಂದು ಮಲಗುವ ಕೋಣೆಯಲ್ಲಿ ಕಲ್ಲು ಉಪ್ಪನ್ನು  ಇಟ್ಟು ಮಲಗಿಕೊಳ್ಳಿ. ಇದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. 

ಉಪ್ಪು ಶುಕ್ರ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.  ಈ ಹಿನ್ನೆಲೆಯಲ್ಲಿ ಉಪ್ಪನ್ನು ಕಬ್ಬಿಣ ಅಥವಾ ಉಕ್ಕಿನ ಪಾತ್ರೆಯಲ್ಲಿ ಇಡಬೇಡಿ.  ಹೀಗೆ ಮಾಡುವುದರಿಂದ, ಚಂದ್ರ ಮತ್ತು ಶನಿ ಒಟ್ಟಿಗೆ ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾರೆ. ಉಪ್ಪನ್ನು ಗಾಜಿನ  ಡಬ್ಬದಲ್ಲಿ ಇಡಬೇಕು  ಎಂದು ಹೇಳಲಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News