Maha Shivaratri: ಮಹಾಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆ ಹೆಚ್ಚು ಫಲಪ್ರದ

Maha Shivratri 2022: ಪಂಚಾಂಗದ ಪ್ರಕಾರ, ಈ ಬಾರಿಯ ಪಂಚಗ್ರಾಹಿ ಯೋಗವು ಮಹಾ ಶಿವರಾತ್ರಿಯಂದು ರೂಪುಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನದಂದು ರಾಶಿಚಕ್ರದ ಪ್ರಕಾರ ಶಿವನಿಗೆ ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

Written by - Yashaswini V | Last Updated : Feb 23, 2022, 09:31 AM IST
  • ಉದ್ಯೋಗದಲ್ಲಿ ಬಡ್ತಿಯ ಆಶೀರ್ವಾದ ಸಿಗಲಿದೆ
  • ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸಲಿದೆ
  • ಕುಟುಂಬದಲ್ಲಿ ಸಂತಸ ಮೂಡಲಿದೆ
Maha Shivaratri: ಮಹಾಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆ ಹೆಚ್ಚು ಫಲಪ್ರದ title=
Mahashivratri Puja According To Zodiac Sign

Maha Shivratri 2022: ಮಾಘ ಕೃಷ್ಣ ಪಕ್ಷ ಚತುರ್ದಶಿಯಂದು ಮಹಾ ಶಿವರಾತ್ರಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯ ಮಹಾಶಿವರಾತ್ರಿಯನ್ನು ಮಂಗಳವಾರ, ಮಾರ್ಚ್ 01, 2022 ರಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಈ ಬಾರಿ ಮಹಾಶಿವರಾತ್ರಿಯಂದು (Maha Shivratri 2022) ಪಂಚಗ್ರಾಹಿ ಯೋಗ ರಚನೆಯಾಗುತ್ತಿದೆ. ವಾಸ್ತವವಾಗಿ, ಮಂಗಳ, ಶನಿ, ಬುಧ, ಚಂದ್ರ ಮತ್ತು ಶುಕ್ರ ಈ ದಿನ ಮಕರ ರಾಶಿಯಲ್ಲಿ ವಾಸಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ಮಹಾಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆಯು ಅತ್ಯಂತ ಫಲಪ್ರದವಾಗಲಿದೆ.  

ರಾಶಿಚಕ್ರ ಚಿಹ್ನೆಯ ಪ್ರಕಾರ ಮಹಾಶಿವರಾತ್ರಿಯಂದು ಶಿವನನ್ನು ಆರಾಧಿಸಿ :
ಮೇಷ ರಾಶಿ:
ಗಂಗಾಜಲದಲ್ಲಿ ಸಕ್ಕರೆ ಮತ್ತು ಬೆಲ್ಲವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಇದಲ್ಲದೆ ಶಿವ ಪಂಚಾಕ್ಷರ ಮಂತ್ರ ಓಂ ನಮಃ ಶಿವಾಯ 108 ಬಾರಿ ಜಪಿಸಿ. 

ವೃಷಭ ರಾಶಿ : ಮಹಾಶಿವರಾತ್ರಿಯ (Maha Shivratri) ದಿನ ಶಿವಲಿಂಗಕ್ಕೆ ಹಸುವಿನ ಹಾಲು ಮತ್ತು ಮೊಸರಿನಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದರೊಂದಿಗೆ ಕೆಲಸದ ಸಮಸ್ಯೆ ಕೊನೆಗೊಳ್ಳುತ್ತದೆ. 

ಮಿಥುನ ರಾಶಿ: ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಕಬ್ಬಿನ ರಸದಿಂದ ಅಭಿಷೇಕ ಮಾಡಿ. ಅಲ್ಲದೆ, ಬಲಗೈಯಿಂದ ದತುರಾವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. 

ಕರ್ಕಾಟಕ ರಾಶಿ: ಹಾಲಿನಲ್ಲಿ ಸಕ್ಕರೆ ಬೆರೆಸಿ ಶಿವಲಿಂಗದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ಕುಟುಂಬವು ಸಂತೋಷದಿಂದ ಕೂಡಿರುತ್ತದೆ. 

ಇದನ್ನೂ ಓದಿ- Shani-Mangala In Makara: ಮಕರ ರಾಶಿಯಲ್ಲಿ ಶನಿ-ಮಂಗಳ ಸಂಯೋಗ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ

ಸಿಂಹ ರಾಶಿ: ನೀರಿನಲ್ಲಿ ಕೆಂಪು ಚಂದನವನ್ನು ಬೆರೆಸಿ ಶಿವಲಿಂಗದ ಅಭಿಷೇಕ ಮಾಡಿರಿ. ಹೀಗೆ ಮಾಡುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ. ಅಲ್ಲದೆ ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. 

ಕನ್ಯಾ ರಾಶಿ : ಶಿವನಿಗೆ ಹಸಿರು ದರ್ಬೆಯನ್ನು ನೀರಿನಲ್ಲಿ ಬೆರೆಸಿ ಅಭಿಷೇಕ ಮಾಡಿ. ಮಹಾಶಿವರಾತ್ರಿಯ ದಿನ ಹೀಗೆ ಮಾಡಿದರೆ ರೋಗಗಳಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಉದ್ಯೋಗದ ಸಮಸ್ಯೆಯೂ ದೂರವಾಗುತ್ತದೆ. 

ತುಲಾ ರಾಶಿ: ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ (Lord Shiva) ಹಸುವಿನ ತುಪ್ಪ ಮತ್ತು ಗುಲಾಬಿ ಸುಗಂಧ ದ್ರವ್ಯದಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. ಜೊತೆಗೆ ಹಣಕಾಸಿನ ಸಮಸ್ಯೆಯೂ ಬಗೆಹರಿಯಲಿದೆ. 

ವೃಶ್ಚಿಕ ರಾಶಿ: ಶಿವರಾತ್ರಿಯ ದಿನ ಬೆಳಗ್ಗೆ ನೀರಿನಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಇದರೊಂದಿಗೆ ಕೌಟುಂಬಿಕ ಕಲಹಗಳು ದೂರವಾಗುತ್ತವೆ. 

ಇದನ್ನೂ ಓದಿ- ಯಾರ ಹಸ್ತದಲ್ಲಿ ಈ ಚಿಹ್ನೆಗಳಿರುತ್ತವೆಯೋ ಅವರು ಜೀವನ ಪೂರ್ತಿ ರಾಜನಂತೆ ಬದುಕುತ್ತಾರೆ

ಧನು ರಾಶಿ: ಹಾಲಿನಲ್ಲಿ ಸಕ್ಕರೆ ಬೆರೆಸಿ ಶಿವಲಿಂಗದ ಅಭಿಷೇಕ ಮಾಡಿ. ಅಲ್ಲದೆ, ಶಿವ ಪಂಚಾಕ್ಷರ ಸ್ತೋತ್ರವನ್ನು 11 ಬಾರಿ ಪಠಿಸಿ. ಹೀಗೆ ಮಾಡುವುದರಿಂದ ವೃತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. 

ಮಕರ ರಾಶಿ: ಎಳ್ಳಿನ ಎಣ್ಣೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಹಾಗೆಯೇ ಬಿಲ್ವಪತ್ರೆಯ ಮೇಲೆ ಬಿಳಿಚಂದನವನ್ನು ಹಚ್ಚಿ ಬಲಗೈಯಿಂದ ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಇದರೊಂದಿಗೆ ದೈಹಿಕ ನೋವು ಕೂಡ ದೂರವಾಗುತ್ತದೆ.  

ಕುಂಭ ರಾಶಿ: ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ. ಜೊತೆಗೆ ಬೇಲ್ಪತ್ರೆಯ ಮಾಲೆಯನ್ನು ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಹಣದ ಲಾಭವಾಗುತ್ತದೆ.  

ಮೀನ ರಾಶಿ: ಈ ರಾಶಿಯ ಜನರು ಶಿವಲಿಂಗಕ್ಕೆ ನೀರಿನಲ್ಲಿ ಅರಿಶಿನ ಅಥವಾ ಕುಂಕುಮವನ್ನು ಬೆರೆಸಿ ಅಭಿಷೇಕ ಮಾಡಬೇಕು. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಅಲ್ಲದೆ ಕುಟುಂಬವು ಸಂತೋಷದಿಂದ ಕೂಡಿರುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News