New Year Resolution: ಈ ಸಂಕಲ್ಪಗಳಿಂದ ನಿಮ್ಮ ಹೊಸವರ್ಷವನ್ನು ಆರಂಭಿಸಿ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಿ

New Year Resolutions 2023: ಹೊಸ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಯಶಸ್ಸು ಮತ್ತು ಪ್ರಗತಿ ಹಾದಿ ಸುಗಮವಾಗುತ್ತದೆ. ಅಂತಹ ಕೆಲವು ಸಂಕಲ್ಪಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jan 1, 2023, 06:06 PM IST
  • ಈ ಬಾರಿ ಹೊಸ ವರ್ಷದಲ್ಲಿ ನಿಮಗಾಗಿ ಒಂದಿಷ್ಟು ಸಂಕಲ್ಪವನ್ನು ತೆಗೆದುಕೊಳ್ಳಿ ಮತ್ತು
  • ಅದನ್ನು ವರ್ಷವಿಡೀ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
  • ಇದರಿಂದ ಹೊಸ ವರ್ಷ 2023 ರಲ್ಲಿ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.
New Year Resolution: ಈ ಸಂಕಲ್ಪಗಳಿಂದ ನಿಮ್ಮ ಹೊಸವರ್ಷವನ್ನು ಆರಂಭಿಸಿ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಿ title=
New Year 2023 Resolutions

New Year Resolutions 2023: ಹೊಸ ವರ್ಷ 2023 ಪ್ರಾರಂಭವಾಗಿದೆ ಮತ್ತು ಎಲ್ಲರೂ ಹೊಸ ವರ್ಷವನ್ನು ಸಾಕಷ್ಟು ಉತ್ಸಾಹ ಮತ್ತು ಉಲ್ಲಾಸದಿಂದ ಸ್ವಾಗತಿಸಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ, ಜನರು ರುಚಿಕರವಾದ ಭಕ್ಷ್ಯಗಳನ್ನು ಮಾಡುತ್ತಾರೆ, ಪಿಕ್ನಿಕ್ ತಾಣಗಳಿಗೆ ಹೋಗುತ್ತಾರೆ ಮತ್ತು ಸಾಕಷ್ಟು ಆನಂದಿಸುತ್ತಾರೆ. ಜನರು ಹೊಸ ವರ್ಷದಲ್ಲಿ ಪರಸ್ಪರ ಅಭಿನಂದಿಸುತ್ತಾರೆ ಮತ್ತು ಹಾರೈಸುತ್ತಾರೆ. ಆದರೆ ಈ ಬಾರಿ ಹೊಸ ವರ್ಷದಲ್ಲಿ ನಿಮಗಾಗಿ ಒಂದಿಷ್ಟು ಸಂಕಲ್ಪವನ್ನು ತೆಗೆದುಕೊಳ್ಳಿ ಮತ್ತು ಅದನ್ನು ವರ್ಷವಿಡೀ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದರಿಂದ ಹೊಸ ವರ್ಷ 2023 ರಲ್ಲಿ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಯಾವ ಸಂಕಲ್ಪವನ್ನು ಮಾಡಬೇಕು ಎಂಬ ಗೊಂದಲದಲ್ಲಿ ನೀವಿದ್ದರೆ, ಚಿಂತಿಸಬೇಡಿ. ಇಲ್ಲಿ ನಾವು ನಿಮ್ನಗಾಗಿ ಕೆಲ ಸರಳ ಮತ್ತು ಅತ್ಯಂತ ಉಪಯುಕ್ತ ಸಂಕಲ್ಪಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಉತ್ತಮ ಆರೋಗ್ಯಕ್ಕಾಗಿ ಸಂಕಲ್ಪ ಮಾಡಿ
ಜೀವನವನ್ನು ಸಂತೋಷ ಮತ್ತು ಯಶಸ್ವಿಯಾಗಿಸಲು, ಆರೋಗ್ಯವಾಗಿರುವುದು ತುಂಬಾ ಮುಖ್ಯ. ಉತ್ತಮ ಆರೋಗ್ಯದ ಆಧಾರದ ಮೇಲೆ, ನೀವು ಪ್ರಗತಿಯನ್ನು ಸಾಧಿಸಬಹುದು. ಆದರೆ ಈ ಬಾರಿ ಹೊಸ ವರ್ಷದಲ್ಲಿ ನಿಮ್ಮಷ್ಟೇ ಅಲ್ಲ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವ ಸಂಕಲ್ಪವನ್ನು ತೆಗೆದುಕೊಳ್ಳಿ.

ಯೋಗದ ಸಂಕಲ್ಪ
ದೈಹಿಕವಾಗಿ ಸದೃಢವಾಗಿರಲು ವ್ಯಾಯಾಮ ತುಂಬಾ ಮುಖ್ಯ. ಹೀಗಾಗಿ ಈ ವರ್ಷ ನಿಯಮಿತವಾಗಿ ವ್ಯಾಯಾಮ ಮಾಡುವ ಸಂಕಲ್ಪವನ್ನು ತೆಗೆದುಕೊಳ್ಳಿ. ನೀವು ವ್ಯಾಯಾಮ ಮಾಡುವಾಗ, ಇತರ ಕುಟುಂಬ ಸದಸ್ಯರು ಮತ್ತು ಮಕ್ಕಳಿಗೂ ವ್ಯಾಯಾಮ ಮಾಡಲು ಸಲಹೆ ನೀಡಿ. ಇದು ಇಡೀ ಕುಟುಂಬವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಆರೋಗ್ಯವಂತ ಕುಟುಂಬಗಳು ಮಾತ್ರ ಸಂತೋಷ ಮತ್ತು ಸಮೃದ್ಧವಾಗಿರುತ್ತದೆ.

ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಿ
ಇಂದು ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಕೌಟುಂಬಿಕ ಸಂಬಂಧಗಳೊಂದಿಗೆ ಸಮತೋಲನ ಸಾಧಿಸುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಕೆಲಸ ಮತ್ತು ಸಾಮಾಜಿಕ ಮಾಧ್ಯಮದಿಂದ ನಿಮಗಾಗಿ ಮತ್ತು ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಾಗಿಡಿ.

ಇದನ್ನೂ ಓದಿ-Tulsi Astro Tips: ಮರೆತೂ ಕೂಡ ಈ ರೀತಿ ತುಳಸಿ ದಳಗಳನ್ನು ಕೇಳಬೇಡಿ, ಭಾರಿ ಹಾನಿಗೆ ಕಾರಣ

ಸಂಬಂಧಗಳಿಗೆ ಸಮಯ ನೀಡಿ
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕುಟುಂಬಕ್ಕೆ ಸಮಯ ನೀಡುತ್ತಿಲ್ಲ. ಇದರಿಂದ ಸಂಬಂಧಗಳಲ್ಲಿ ಅಂತರ ಮತ್ತು ವಿರಸ ಉಂಟಾಗುತ್ತಿದೆ. ಸಾಧ್ಯವಾದಷ್ಟು ಬೇಗ ಅವುಗಳನ್ನು ಇತೀಶ್ರೀ ಹಾಡಲು ಯತ್ನಿಸಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮಯ ನೀಡಿ.

ಇದನ್ನೂ ಓದಿ-New Year 2023 Astro Tips: ನೀರಿಗೆ ಸಂಬಂಧಿಸಿದ ಈ ಉಪಾಯ ನಿಮ್ಮ ಮನೆಯ ಎಲ್ಲಾ ದೋಷಗಳನ್ನು ತೊಳೆದು ಹಾಕಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News