ದಿನಬಳಕೆಯ ಈ ಒಂದು ವಸ್ತುವನ್ನು ಬಳಸಿದರೆ ಬೆಳ್ಳಗಾದ ಕೂದಲು ಮತ್ತೆ ಶಾಶ್ವತವಾಗಿ ಕಪ್ಪಾಗುವುದು

ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.  ಸಾಸಿವೆ ಕಾಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Written by - Ranjitha R K | Last Updated : Dec 1, 2022, 12:34 PM IST
  • ಇತ್ತೀಚಿನ ದಿನಗಳಲ್ಲಿ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತದೆ
  • ನಾವು ಸೇವಿಸುವ ಆಹಾರವೂ ಇದಕ್ಕೆ ಕಾರಣ
  • ನಮ್ಮ ಜೀವನ ಶೈಲಿ ಕೂಡಾ ಕೂದಲು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ದಿನಬಳಕೆಯ ಈ ಒಂದು ವಸ್ತುವನ್ನು ಬಳಸಿದರೆ ಬೆಳ್ಳಗಾದ ಕೂದಲು ಮತ್ತೆ ಶಾಶ್ವತವಾಗಿ ಕಪ್ಪಾಗುವುದು  title=
Mustard Seeds For Premature White Hai

ಬೆಂಗಳೂರು : ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತದೆ ಎನ್ನುವುದು ಇಂದಿನ ಯುವ ಪೀಳಿಗೆಯ ಬಾಯಿಯಲ್ಲಿ ಕೇಳಿ ಬರುವ ಮಾತು. ಇದಕ್ಕೆ ಕಾರಣ ಹಲವಾರು. ನಾವು ಸೇವಿಸುವ ಆಹಾರವೂ ಇದಕ್ಕೆ ಕಾರಣ. ಅಲ್ಲದೆ ಹೊರಗಿನ ವಾತಾವರಣ ಕೂಡಾ ನಮ್ಮ ಕೂದಲು, ಚರ್ಮದ ಆರೋಗ್ಯದ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಇನ್ನು ಇಂದಿನ ಬ್ಯುಸಿ ಜೀವನ ಶೈಲಿಯ ಕಾರಣ ಯಾವ ಕಡೆಗೂ ಸರಿಯಾಗಿ ಗಮನ ಹರಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ಜಾಹೀರಾತುಗಳ ಮೊರೆ ಹೋಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಉತ್ಪನ್ನಗಳನ್ನು ಕೂದಲಿಗೆ ಬಳಸುತ್ತೇವೆ. ಆ ಉತ್ಪನ್ನಗಳಲ್ಲಿರುವ ರಾಸಾಯನಿಕ ವಸ್ತುಗಳು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ ಮಾತ್ರವಲ್ಲ, ಕೂದಲನ್ನು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುವಂತೆ ಮಾಡುತ್ತದೆ.  

ಸಾಸಿವೆ ಕಾಳು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು : 
ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.  ಸಾಸಿವೆ ಕಾಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತಲೆ ಹೊಟ್ಟಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!

 ಸಾಸಿವೆಯಲ್ಲಿ  ವಿಟಮಿನ್ ಎ ಹೇರಳ ಪ್ರಮಾಣದಲ್ಲಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬುಡದಿಂದಲೇ ಕೂದಲನ್ನು ಬಲಪಡಿಸುತ್ತದೆ. ಉದುರಿದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. 

ಇದಲ್ಲದೆ, ಸಾಸಿವೆ ಕಾಳುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಕೂಡಾ ಕಂಡುಬರುತ್ತವೆ. ಇದು ಕೂದಲನ್ನು ಬಲಪಡಿಸುವುದಲ್ಲದೆ, ಕೂದಲಿನ ಕಪ್ಪು ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. 

ಹಾಗಿದ್ದರೆ ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವುದು ಹೇಗೆ ? 
1. ಸಾಸಿವೆ ಎಣ್ಣೆಯನ್ನು  ಬಳಸಿ :
ಸಾಸಿವೆ ಕಾಳುಗಳಿಂದ ಮಾಡಿದ ಎಣ್ಣೆ ಕೂದಲ ಆರೋಗ್ಯಕ್ಕೆ ವರದಾನವೇ ಸರಿ. ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿ. ಇದರಿಂದ ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆಗೆ ಸಹಾಯವಾಗುತ್ತದೆ. ಇದು ಕೂದಲು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Weight Loss Tips: ರೊಟ್ಟಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ?

2. ಹೇರ್ ಮಾಸ್ಕ್ :
ಸಾಸಿವೆ ಕಾಳುಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಈ ಪುಡಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈಗ ಈ ಮಿಶ್ರಣಕ್ಕೆ  ಕ್ಯಾಸ್ಟರ್ ಆಯಿಲ್ ಅಥವಾ ತೆಂಗಿನೆಣ್ಣೆಯನ್ನು ಬೆರೆಸಿ ಹೇರ್ ಮಾಸ್ಕ್ ಅನ್ನು ತಯಾರಿಸಿಕೊಳ್ಳಿ. ಹೀಗೆ ತಯಾರಿಸಿದ ಹೇರ್ ಮಾಸ್ಕ್ ಅನ್ನು ಕೂದಲಿನ ಬೇರುಗಳಿಗೆ  ಹಚ್ಚಿ. ಸ್ವಲ್ಪ ಸಮಯದ ನಂತರ ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News