ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಿದರೆ ಸಾಕು, ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು !

How to Lose Weight : ನೀವು ಕೂಡಾ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಲವು ಪ್ರಮುಖ ಉಪಯುಕ್ತ ಸಲಹೆಗಳು ಇಲ್ಲಿವೆ. ಈ ವಿಧಾನಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಈ  ಮೂಲಕ ಆರೋಗ್ಯಕರ ಜೀವನವನ್ನು ಅನುಸರಿಸಬಹುದು.   

Written by - Ranjitha R K | Last Updated : Jul 11, 2023, 10:18 AM IST
  • ಬಹುತೇಕ ಮಂದಿ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
  • ಹೊಟ್ಟೆಯ ಭಾಗದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
  • ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ನಿರೀಕ್ಷಿತ ಫಲ ಸಿಗುವುದಿಲ್ಲ.
ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಿದರೆ ಸಾಕು, ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು !  title=

How to Lose Weight : ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿಯೂ ಕೂಡಾ ಹೊಟ್ಟೆಯ ಭಾಗದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಒಮ್ಮೆ ದೇಹದ ಕೊಬ್ಬು ಹೆಚ್ಚಾದರೆ ಅದನ್ನು ಕಡಿಮೆ ಮಾಡಲು ಹರ ಸಾಹಸ ಪಡಬೇಕಾಗುತ್ತದೆ. ತೂಕವನ್ನು ಕಡಿಮೆ ಮಾಡಲು ನಾನಾ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ನಿರೀಕ್ಷಿತ ಫಲ ಸಿಗುವುದಿಲ್ಲ. ನೀವು ಕೂಡಾ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಲವು ಪ್ರಮುಖ ಉಪಯುಕ್ತ ಸಲಹೆಗಳು ಇಲ್ಲಿವೆ. ಈ ವಿಧಾನಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಈ  ಮೂಲಕ ಆರೋಗ್ಯಕರ ಜೀವನವನ್ನು ಅನುಸರಿಸಬಹುದು. 

ತೂಕ ನಷ್ಟ ಸಲಹೆಗಳು  : 
ಆರೋಗ್ಯಕರ ಉಪಹಾರ : 
ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು ಬೆಳಗಿನ ಉಪಹಾರವು ಪೌಷ್ಟಿಕಾಂಶದಿಂದ ತುಂಬಿರುವುದು ಅವಶ್ಯಕ. ಇದರಲ್ಲಿ ನೀವು ಅವಲಕ್ಕಿ, ಉಪ್ಮಾ, ಗಂಜಿ, ಜ್ಯೂಸ್, ಹಣ್ಣು, ಸಲಾಡ್, ಓಟ್ಸ್, ಮೊಟ್ಟೆ, ರಾಗಿ ಗಂಜಿ ಸೇರಿಸಿಕೊಳ್ಳಬಹುದು. ಈ ರೀತಿಯ ಉಪಹಾರವು ದೇಹಕ್ಕೆ ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Monsoon Makeup Tips: ಮಳೆಗಾಲದಲ್ಲಿ ಮೇಕಪ್ ಹಾಳಾಗದಿರಲು ಇಲ್ಲಿವೆ ಸಿಂಪಲ್ ಸಲಹೆಗಳು

ಪ್ರತಿದಿನ ಇಷ್ಟು ಗಂಟೆಗಳ ಕಾಲ ನಿದ್ರೆ ಮಾಡಿ   : 
ಪ್ರತಿದಿನ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಎಂದರೆ ತಪ್ಪಲ್ಲ. ಇದಕ್ಕಾಗಿ ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ ಮತ್ತು ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನ ಎದ್ದೇಳಿ. ಈ ಕಾರ್ಯ ಸ್ವಲ್ಪ ಕಷ್ಟವಾದರೂ ಅಸಾಧ್ಯವಾದುದಲ್ಲ. ಆರಂಭದಲ್ಲಿ ಸ್ವಲ್ಪ ದಿನ ತೊಂದರೆ ಅನುಭವಿಸಿದರೂ ನಂತರ ದಿನಚರಿಯಲ್ಲಿ ಅಭ್ಯಾಸವಾಗಿ ಬಿಡುತ್ತದೆ. ನಿದ್ರೆ ಪೂರ್ಣಗೊಳ್ಳದಿದ್ದರೆ, ದೇಹವು  ಜಡವಾಗುತ್ತದೆ, ಕೊಬ್ಬು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. 

ಊಟದ ನಂತರ ಈ ಕೆಲಸವನ್ನು ಮಾಡಬೇಕು :  
ಅನೇಕ ಜನರು ಊಟಕ್ಕೆ ಕುಳಿತುಕೊಳ್ಳುವಾಗ ಒಂದು ಲೋಟ ನೀರಿನೊಂದಿಗೆಯೇ ಕುಳಿತುಕೊಳ್ಳುತ್ತಾರೆ. ಊಟ ಮುಗಿದ ತಕ್ಷಣ, ಗಟ ಗಟನೆ ಆ ನೀರನ್ನು ಕುಡಿದು ಮುಗಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀರ್ಣವಾಗದ ಆಹಾರವು ಬೊಜ್ಜಿಗೆ  ಕಾರಣವಾಗುತ್ತದೆ. ಊಟವಾದ ಅರ್ಧ ಗಂಟೆಯ ನಂತರವೇ ನೀರು ಕುಡಿಯಬೇಕು ಮತ್ತು ಸ್ವಲ್ಪ ಹೊತ್ತು ವಾಕಿಂಗ್‌ಗೆ ತೆರಳಬೇಕು. 

ಇದನ್ನೂ ಓದಿ : Weight Loss Tips: ಕೆಲವೇ ವಾರಗಳಲ್ಲಿ ಸ್ಲಿಮ್ ಆಗಬೇಕೆ? ನಿತ್ಯ 20ನಿಮಿಷ ಈ ಕೆಲಸ ಮಾಡಿ

ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚನೆಯ ನೀರು ಕುಡಿಯಿರಿ  : 
ಬೆಳಿಗ್ಗೆ ಎದ್ದ ತಕ್ಷಣ ಅಂದರೆ ಖಾಲಿ ಹೊಟ್ಟೆಗೆ ಕನಿಷ್ಠ ಅರ್ಧ ಲೀಟರ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಈ ರೀತಿ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ತೂಕ ಕೂಡಾ ನಿಯಂತ್ರಣದಲ್ಲಿರುತ್ತದೆ. ಹೊಟ್ಟೆಯು ಶುದ್ಧವಾದ ನಂತರ, ಬೆಳಗಿನ ಉಪಾಹಾರಕ್ಕೆ ಮೊದಲು ಜೇನುತುಪ್ಪ ಮತ್ತು ನಿಂಬೆ ನೀರು ಅಥವಾ ಸೆಲರಿ ನೀರನ್ನು ಕುಡಿಯಬಹುದು. ಇದು ಫ್ಯಾಟ್ ಬರ್ನ್ ಟಿಪ್ಸ್‌ಗೆ ಕಾರಣವಾಗುತ್ತದೆ ಮತ್ತು ದೇಹವು ಸ್ಲಿಮ್ ಆಗುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News