ಇಂದಿನಿಂದ ಬೆಳಗಲಿದೆ ಈ ನಾಲ್ಕು ರಾಶಿಯವರ ಅದೃಷ್ಟ.. ! ಚಂದ್ರ ಕರುಣಿಸಲಿದ್ದಾನೆ ಭಾಗ್ಯ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇ 26 ರಂದು, ಅಂದರೆ, ಇಂದು ಚಂದ್ರನು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಚಂದ್ರನ ಈ ಸಂಕ್ರಮಣವು ಕೆಲವು ರಾಶಿಯವರಿಗೆ ಶುಭವಾಗಿ ಪರಿಣಮಿಸಲಿದೆ. 

Written by - Ranjitha R K | Last Updated : May 26, 2022, 09:04 AM IST
  • ಇಂದು ಚಂದ್ರನು ಮೇಷ ರಾಶಿಯಲ್ಲಿ ಸಾಗಲಿದ್ದಾನೆ.
  • ಇಂದು ತಡರಾತ್ರಿ 12.39 ಕ್ಕೆ ಚಂದ್ರ ಸಂಕ್ರಮಣ ನಡೆಯಲಿದೆ.
  • ಮಹಾಲಕ್ಷ್ಮೀ ಆಶೀರ್ವಾದ ಪಡೆಯಲಿದೆ ಈ ರಾಶಿಗಳು
ಇಂದಿನಿಂದ ಬೆಳಗಲಿದೆ ಈ ನಾಲ್ಕು ರಾಶಿಯವರ ಅದೃಷ್ಟ.. ! ಚಂದ್ರ ಕರುಣಿಸಲಿದ್ದಾನೆ ಭಾಗ್ಯ   title=
Moon Gochar In Aries (file photo)

ಬೆಂಗಳೂರು : Moon Gochar In Aries:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಯಾವುದೇ ರಾಶಿಯಲ್ಲಿ ಸಾಗುವುದು ಕೇವಲ ಎರಡೂವರೆ ದಿನಗಳು. ಮೇ 26 ಅಂದರೆ ಇಂದು ಚಂದ್ರನು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಕರ್ಕಾಟಕ ರಾಶಿಯ ಅಧಿಪತಿಯಾದ ಚಂದ್ರನ ಚಲನೆಯು ಎಲ್ಲಾ ಗ್ರಹಗಳಲ್ಲಿ ಅತ್ಯಂತ ವೇಗವಾಗಿದೆ ಎಂದು ಹೇಳಲಾಗುತ್ತದೆ.  ಇಂದು, ಅಪರ ಏಕಾದಶಿಯ ದಿನ, ಚಂದ್ರನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇಂದು ತಡರಾತ್ರಿ 12.39 ಕ್ಕೆ ಚಂದ್ರ ಸಂಕ್ರಮಣ ನಡೆಯಲಿದೆ. ಮೇ 29 ಬೆಳಿಗ್ಗೆ 11.16 ರವರೆಗೆ ಚಂದ್ರ ಮೇಷ ರಾಶಿಯಲ್ಲಿಯೇ ಇರುತ್ತಾನೆ.  

ಮಹಾಲಕ್ಷ್ಮೀ ಆಶೀರ್ವಾದ ಪಡೆಯಲಿದೆ ಈ ರಾಶಿಗಳು : 
ಕರ್ಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯವರಿಗೆ ಚಂದ್ರನ ಈ ಸಂಕ್ರಮವು ಶುಭಾವಾಗಿರಲಿದೆ. ಈ ಅವಧಿಯಲ್ಲಿ, ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗಲಿದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸ ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. 

ಇದನ್ನೂ ಓದಿ : Tulsi Care Tips: ಬೇಸಿಗೆಯಲ್ಲಿ ತುಳಸಿ ಗಿಡ ಒಣಗದಂತೆ ಕಾಪಾಡಲು ಹೀಗೆ ಮಾಡಿ!

ತುಲಾ: ಈ ಅವಧಿಯಲ್ಲಿ ತುಲಾ ರಾಶಿಯವರ ಮೇಲೆ ಲಕ್ಷ್ಮೀ ದಯೆ ತೋರಲಿದ್ದಾಳೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸಸ್ಸು ಸಿಗಲಿದೆ. ವ್ಯಾಪಾರಸ್ಥರಿಗೆ ಈ ಸಮಯವು  ಮಂಗಳಕರವಾಗಿರಲಿದೆ.  ಈ ಸಮಯದಲ್ಲಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಹೊಸ ಯೋಜನೆಗಳು ಲಾಭದಾಯಕವಾಗಿ ಪರಿಣಮಿಸಬಹುದು. 

ವೃಶ್ಚಿಕ: ಗುರುವಾರದಂದು ಮೇಷ ರಾಶಿಯಲ್ಲಿ ಚಂದ್ರನ ಸಂಚಾರವು ವೃಶ್ಚಿಕ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಹಣಕಾಸಿನ ಲಾಭವಾಗಲಿದೆ. ಹೊಸ ಉದ್ಯೋಗದ ಹುಡುಕಾಟ ಕೊನೆಗೊಳ್ಳಲಿದೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. 

ಇದನ್ನೂ  ಓದಿ Astro Tips: ಭಾಗ್ಯದ ಸಾಥ್ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ

ಧನು ರಾಶಿ : ಈ ಸಮಯವು ಧನು ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಕೆಲವು ದೊಡ್ಡ ಸಾಧನೆಗಳನ್ನು ಮಾಡಬಹುದು.  ಪ್ರಯಾಣದಿಂದ ಹಣ ಗಳಿಸುವ ಸಾಧ್ಯತೆ ಇದೆ. ಗೌರವ ಹೆಚ್ಚಾಗಲಿದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News