Money Totke: ದಸರಾದಲ್ಲಿ ತೆಂಗಿನಕಾಯಿಯ ಈ ಪರಿಹಾರ ಮಾಡಿದರೆ, ನೀವು ಶ್ರೀಮಂತರಾಗುವುದನ್ನು ಯಾರೂ ತಡೆಯಲಾರರು

Money Totke: ಪ್ರತಿಯೊಬ್ಬರೂ ತಮ್ಮ ಜೀವನ ಸುಖ-ಶಾಂತಿ, ನೆಮ್ಮದಿಯಿಂದ ಕಳೆಯಬೇಕು. ಶ್ರೀಮಂತರಾಗಬೇಕು ಎಂದು ಬಯಸುತ್ತಾರೆ. ದಸರಾ ದಿನದಂದು ತೆಂಗಿನ ಕಾಯಿಯ ಈ ಪರಿಹಾರ ಮಾಡುವುದರಿಂದ ನಿಮ್ಮ ಆಸೆ ಸುಲಭವಾಗಿ ಈಡೇರುತ್ತದೆ.

Written by - Yashaswini V | Last Updated : Oct 12, 2021, 07:41 AM IST
  • ದಸರಾ ದಿನದಂದು ಈ ಟ್ರಿಕ್ ಅನುಸರಿಸಿದರೆ ನಿಮ್ಮ ಮನೋಕಾಮನೆಗಳು ಶೀಘ್ರದಲ್ಲೇ ಈಡೇರುತ್ತವೆ
  • ಈ ಪರಿಹಾರಗಳು ನಿಮ್ಮನ್ನು ಶೀಘ್ರದಲ್ಲೇ ಶ್ರೀಮಂತರನ್ನಾಗಿ ಮಾಡುತ್ತವೆ ಎಂಬ ನಂಬಿಕೆ ಇದೆ
  • ಈ ತೆಂಗಿನಕಾಯಿ ಟ್ರಿಕ್ ವ್ಯವಹಾರದಲ್ಲಿ ಲಾಭವನ್ನು ಹೆಚ್ಚಿಸುತ್ತದೆ
Money Totke: ದಸರಾದಲ್ಲಿ ತೆಂಗಿನಕಾಯಿಯ ಈ ಪರಿಹಾರ ಮಾಡಿದರೆ, ನೀವು ಶ್ರೀಮಂತರಾಗುವುದನ್ನು ಯಾರೂ ತಡೆಯಲಾರರು title=
Coconut Remedies: ನೀವೂ ಶ್ರೀಮಂತರಾಗಬೇಕೆ? ದಸರಾದಲ್ಲಿ ತೆಂಗಿನಕಾಯಿಯ ಈ ಪರಿಹಾರ ಮಾಡಿ ನೋಡಿ

Money Totke: ತೆಂಗಿನಕಾಯಿಯನ್ನು ಸನಾತನ ಧರ್ಮದಲ್ಲಿ ಶ್ರೀಫಲ್ ಎಂದು ಕರೆಯಲಾಗುತ್ತದೆ. ಶ್ರೀಫಲ ಎಂದರೆ ಹಣ್ಣುಗಳಲ್ಲಿ ಅತ್ಯುತ್ತಮ ಹಣ್ಣು. ತೆಂಗಿನಕಾಯಿಯನ್ನು ಪ್ರತಿ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲ ಯಾವುದೇ ಹೊಸ ಕೆಲಸ ಆರಂಭಿಸುವ ಮೊದಲು ಅಥವಾ ಪ್ರಯಾಣ ಆರಂಭಿಸುವ ಮೊದಲು ತೆಂಗಿನ ಕಾಯಿಯ ಈಡುಗಾಯಿ ಹೊಡೆಯಲಾಗುತ್ತದೆ. ಅದೇ ರೀತಿ ಶ್ರೀಮಂತರಾಗಬೇಕು ಎಂಬ ಇಚ್ಚೆ ಹೊಂದಿರುವವರಿಗೂ ತೆಂಗಿನಕಾಯಿಯ ಈ ಸುಲಭ ಪರಿಹಾರ ಬಹಳ ಪರಿಣಾಮಕಾರಿ ಆಗಿದೆ. ತೆಂಗಿನ ಕಾಯಿಯ ಈ ಪರಿಹಾರ (Coconut Remedies) ಮಾಡಲು ದಸರಾ ದಿನವು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.

ತೆಂಗಿನ ಕಾಯಿಯ ಈ ಟ್ರಿಕ್ ನಷ್ಟವನ್ನು ಲಾಭವಾಗಿ ಪರಿವರ್ತಿಸುತ್ತದೆ:
ವ್ಯಾಪಾರದಲ್ಲಿ ನಿರಂತರವಾಗಿ ನಷ್ಟ ಉಂಟಾಗುತ್ತಿದ್ದರೆ, ದಸರಾ ದಿನದಂದು ತೆಂಗಿನಕಾಯಿಯನ್ನು (Coconut Remedies) ಕಾಲು ಮೀಟರ್ ಹಳದಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಯಾವುದಾದರೊಂದು ರಾಮ ಮಂದಿರದಲ್ಲಿ ಜೇನು ಮತ್ತು ಸಿಹಿತಿಂಡಿಗಳೊಂದಿಗೆ ಈ ತೆಂಗಿನಕಾಯಿಯನ್ನು ನೀಡಿ. ಇದನ್ನು ಮಾಡುವುದರಿಂದ, ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ ಎನ್ನಲಾಗುವುದು.

ಇದನ್ನೂ ಓದಿ- Astrology: ಪ್ರೀತಿ ಎಂದರೆ ಹೆದರುವ ಈ ರಾಶಿಯವರು ಸಹಿಸಲ್ಲ ದಾಂಪತ್ಯ ದ್ರೋಹ

ಅದೇ ಸಮಯದಲ್ಲಿ, ಬಡತನದಿಂದ ಮುಕ್ತಿ ಪಡೆಯಲು, ದಸರಾ ದಿನದಂದು ತೆಂಗಿನಕಾಯಿ, ಗುಲಾಬಿ, ಕಮಲದ ಹೂವುಗಳು, ಕಾಲು ಮೀಟರ್ ಗುಲಾಬಿ ಬಟ್ಟೆ, ಕಾಲು ಮೀಟರ್ ಬಿಳಿ ಬಟ್ಟೆ, ಒಂದೂವರೆ ಪಾವ್ ಮಲ್ಲಿಗೆ, ಮೊಸರು, ಬಿಳಿ ಸಿಹಿ ತಿಂಡಿಗಳು ಮತ್ತು ಜೇನು ತುಪ್ಪವನ್ನು ಲಕ್ಷ್ಮಿ ದೇವಿಯ (Lakshmi Devi) ದೇವಸ್ಥಾನದಲ್ಲಿ ಮಾತೆಗೆ ಅರ್ಪಿಸಿ. ಇದರ ನಂತರ, ತಾಯಿಗೆ ಕರ್ಪೂರ ಮತ್ತು ದೇಸಿ ತುಪ್ಪದ ಬತ್ತಿಯಿಂದ ಆರತಿಯನ್ನು ಬೆಳಗಿಸಿ. ಬಳಿಕ ಶ್ರೀಕನಕಧರ ಸ್ತೋತ್ರವನ್ನು ಪಠಿಸಿ. ಈ ರೀತಿ ಮಾದುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಆರಂಭವಾಗುತ್ತದೆ ಎಂಬ ನಂಬಿಕೆ ಇದೆ.

ದಸರಾ ದಿನದಂದು, ಗಣೇಶ ಮತ್ತು ಮಹಾಲಕ್ಷ್ಮಿಯನ್ನು ಸ್ಥಾಪಿಸಿ. ಇದರ ನಂತರ, ಅಕ್ಕಿಯ ರಾಶಿಯ ಮೇಲೆ ತಾಮ್ರದ ಕಲಶವನ್ನು ಇರಿಸಿ. ತೆಂಗಿನಕಾಯಿಯನ್ನು ಸ್ವಚ್ಛವಾದ ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದಲ್ಲಿಡಿ. ಇದರ ನಂತರ ಎರಡು ದೊಡ್ಡ ದೀಪಗಳನ್ನು ತೆಗೆದುಕೊಳ್ಳಿ. ಒಂದರಲ್ಲಿ ತುಪ್ಪದ ದೀಪ ಮತ್ತು ಇನ್ನೊಂದರಲ್ಲಿ ಎಣ್ಣೆಯ ದೀಪವನ್ನು ಬೆಳಗಿಸಿ. ಒಂದು ದೀಪವನ್ನು ಸ್ತಂಭದ ಬಲಭಾಗದಲ್ಲಿ ಮತ್ತು ಇನ್ನೊಂದು ದೀಪವನ್ನು ವಿಗ್ರಹಗಳ ಪಾದದ ಬಳಿ ಇರಿಸಿ. ಅದೇ ಸಮಯದಲ್ಲಿ, ಗಣೇಶನ ಬಳಿ ಒಂದು ಸಣ್ಣ ದೀಪವನ್ನು ಇರಿಸಿ ಮತ್ತು ಪೂಜಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಮನೋಕಾಮನೆಗಳು ಶೀಘ್ರದಲ್ಲೇ ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಕೈಯ ಈ ಭಾಗದಲ್ಲಿ ಮಚ್ಚೆ ಇದ್ದರೆ ಭಾರೀ ಅಶುಭವಂತೆ, ನಿಮ್ಮ ಕೈಯನ್ನೊಮ್ಮೆ ನೋಡಿಕೊಳ್ಳಿ

ಯಶಸ್ಸಿಗೆ ಟ್ರಿಕ್ :
ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಕೆಲಸವನ್ನು ಸಹ ಈ ಟ್ರಿಕ್ ಮಾಡುವ ಮೂಲಕ ಪೂರ್ಣಗೊಳಿಸಲಾಗುತ್ತದೆ. ಇದಕ್ಕಾಗಿ, ತೆಂಗಿನಕಾಯಿಯನ್ನು ಕೆಂಪು ಹತ್ತಿ ಬಟ್ಟೆಯಲ್ಲಿ ಸುತ್ತಿ ಮತ್ತು ಹರಿಯುವ ನೀರಿನಲ್ಲಿ ಎಸೆಯಿರಿ. ಈ ಸಂದರ್ಭದಲ್ಲಿ ತೆಂಗಿನಕಾಯಿಗೆ ನಿಮ್ಮ ಹಾರೈಕೆಯನ್ನು 7 ಬಾರಿ ಹೇಳಿ. ಈ ರೀತಿ ಮಾಡುವುದರಿಂದಲೂ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News