Money Tips: ನಿಮ್ಮ ಪರ್ಸ್‌ನಲ್ಲಿ ಈ ಸಣ್ಣ ವಸ್ತು ಇದ್ದರೆ ಎಂದಿಗೂ ಹಣದ ಕೊರತೆ ಎದುರಾಗಲ್ಲ!

Astro Tips: ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಜ್ಯೋತಿಷ್ಯದಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಇದರಲ್ಲಿ, ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಆಕೆಗೆ ಪ್ರಿಯವಾದ ವಸ್ತುಗಳನ್ನು ಜೊತೆಯಲ್ಲಿ ಇರಿಸಿಕೊಳ್ಳುವ ಬಗ್ಗೆಯೂ ಸಹ ಸಲಹೆ ನೀಡಲಾಗಿದೆ. 

Written by - Yashaswini V | Last Updated : Oct 31, 2022, 11:38 AM IST
  • ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮಿ ಮತ್ತು ಕೌರಿ ದೇವಿಯು ಸಮುದ್ರ ಮಂಥನದ ಸಮಯದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ.
  • ಕೌರಿ ಅಥವಾ ಕವಡೆಯು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
  • ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಪೂಜಾ ಸಾಮಗ್ರಿಗಳಲ್ಲಿ ಕವಡೆಯನ್ನು ಸೇರಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
Money Tips: ನಿಮ್ಮ ಪರ್ಸ್‌ನಲ್ಲಿ ಈ ಸಣ್ಣ ವಸ್ತು ಇದ್ದರೆ ಎಂದಿಗೂ ಹಣದ ಕೊರತೆ ಎದುರಾಗಲ್ಲ! title=
Cowry Remedies

Astro Tips: ಪ್ರತಿಯೊಬ್ಬ ವ್ಯಕ್ತಿಯು ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ತನ್ನ ಮೇಲಿರಬೇಕು ಎಂದು ಬಯಸುತ್ತಾನೆ.  ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಜ್ಯೋತಿಷ್ಯದಲ್ಲಿ ಹಲವು ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ಲಕ್ಷ್ಮಿ ದೇವಿ ನೆಲೆಸಿರುವ ಮನೆಯಲ್ಲಿ ಎಂದಿಗೂ ಸಹ ಹಣಕಾಸಿನ ತೊಂದರೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.  ತಾಯಿ ಲಕ್ಷ್ಮಿಯ ಅನುಗ್ರಹದಿಂದ, ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ಮತ್ತು ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಮತ್ತು ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳನ್ನು ತಮ್ಮೊಂದಿಗೆ ಇಡುವುದರಿಂದ ಆ ವ್ಯಕ್ತಿಗೆ ಜೀವನದಲ್ಲಿ ಎಂದೂ ಸಹ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಕವಡೆಯೂ ಒಂದು. 

ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಪೂಜಾ ಸಾಮಗ್ರಿಗಳಲ್ಲಿ ಕವಡೆಯನ್ನು ಸೇರಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮಿ ಮತ್ತು ಕೌರಿ ದೇವಿಯು ಸಮುದ್ರ ಮಂಥನದ ಸಮಯದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಕೌರಿ ಅಥವಾ ಕವಡೆಯು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಕವಡೆಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ  ಅಂತಹ ವ್ಯಕ್ತಿಗೆ ಎಂದಿಗೂ ಸಹ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎನ್ನಲಾಗುವುದು.

ಜ್ಯೋತಿಷಿಗಳ ಪ್ರಕಾರ, ಶುಕ್ರವಾರದಂದು ಕವಡೆ ಪರಿಹಾರವನ್ನು ಮಾಡುವುದು ಉತ್ತಮ. ಶುಕ್ರವಾರದಂದು ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಹಳದಿ ಮಿಶ್ರಿತ ಬಣ್ಣದ ಕವಡೆಗಳನ್ನು ಇರಿಸಿ. ಈ ಕವಡೆಗಳನ್ನು ಸಂಜೆ ವಿಧಿವಿಧಾನಗಳೊಂದಿಗೆ ಪೂಜಿಸಿ. ಇದರ ನಂತರ ಈ ಕವಡೆಗಳನ್ನು ಎರಡು ವಿಭಿನ್ನ ಭಾಗಗಳಾಗಿ ವಿಂಗಡಿಸಿ ಮತ್ತು ಅವುಗಳನ್ನು ವಿವಿಧ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಂತರ ಅವುಗಳಲ್ಲಿ ಒಂದನ್ನು ಸುರಕ್ಷಿತವಾಗಿ ನೀವು ಹಣ ಇಡುವ ಜಾಗದಲ್ಲಿಡಿ. ಇನ್ನೊಂದನ್ನು ಪರ್ಸ್‌ನಲ್ಲಿ ಇರಿಸಿ. ಈ ಪರಿಹಾರದಿಂದ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬೇಗನೆ ಮುಕ್ತಿಯನ್ನು ಪಡೆಯಬಹುದು. ಮಾತ್ರವಲ್ಲದೆ, ಎಂದಿಗೂ ಸಹ ನಿಮಗೆ ಹಣಕಾಸಿನ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Guru Margi 2022: ನವೆಂಬರ್‌ನಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಾರ್ಗಿ ಗುರು

ಉದ್ಯೋಗಕ್ಕೆ ಸಂಬಂಧಿಸಿದಂತೆ ಕವಡೆ ಪರಿಹಾರ: 
ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ನಿಮ್ಮ ಇಚ್ಚೆಯ ಉದ್ಯೋಗವನ್ನು ಪಡೆಯಲು ಕವಡೆ ಪರಿಹಾರವು ಉಪಯುಕ್ತವಾಗಲಿದೆ. ಇದಕ್ಕಾಗಿ 11 ಕವಡೆಗಳನ್ನು ತೆಗೆದುಕೊಂಡು ದೇವಾಲಯದಲ್ಲಿ ಅರ್ಪಿಸಿ. ಬಳಿಕ ಇದರಲ್ಲಿ 7 ಕವಡೆಗಳನ್ನು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ನೀವು ಸಂದರ್ಶನಕ್ಕೆ ಹೋದಾಗಲೆಲ್ಲಾ ಅವುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಇದು ಖಂಡಿತವಾಗಿಯೂ ವ್ಯಕ್ತಿಗೆ ವೃತ್ತಿ ರಂಗದಲ್ಲಿ ಯಶಸ್ಸನ್ನು ನೀಡುತ್ತದೆ. 

ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸಲು:
ಅದೇ ಸಮಯದಲ್ಲಿ, 11  ಕವಡೆಗಳ ಪರಿಹಾರವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ, 11 ಕವಡೆಗಳನ್ನು ತೆಗೆದುಕೊಂಡು ಅವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮುಖ್ಯ ದ್ವಾರದಲ್ಲಿ ನೇತುಹಾಕಿ. ಈ ಕಾರಣದಿಂದಾಗಿ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುವುದು.

ಕೆಟ್ಟ ದೃಷ್ಟಿಯನ್ನು ನಿವಾರಿಸಲು:
ಮನೆಯ ಸದಸ್ಯರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸಲು, ಹಳದಿ ಬಣ್ಣದ ಕವಡೆಗಳನ್ನು ತಾಯತಗಳಲ್ಲಿ ಕಟ್ಟಿ ಅವುಗಳನ್ನು ಧರಿಸಿ. ಈ ರೀತಿ ಮಾಡುವುದರಿಂದ ಕೆಟ್ಟ ಕಣ್ಣು ತಪ್ಪಿಸಬಹುದು. 

ಇದನ್ನೂ ಓದಿ- November Horoscope 2022: ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ನವೆಂಬರ್, ನಿಮ್ಮ ರಾಶಿಯೂ ಇದೆಯೇ?

ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯಲು:
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಶುಕ್ರವಾರದಂದು ಬಿಳಿ ಬಣ್ಣದ ಕವಡೆಗಳನ್ನು ತಂದು ಕುಂಕುಮ ಮತ್ತು ಅರಿಶಿನದಲ್ಲಿ ನೆನೆಸಿಡಿ. ಇದರ ನಂತರ, ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳ ಅದನ್ನು ನೀವು ಹಣ ಇಡುವ ಜಾಗದಲ್ಲಿ ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News