Money Making Tips In Chanakya Niti: ಉಳಿತಾಯ ಹಾಗೂ ಹೂಡಿಕೆಯ ಈ ಸಂಗತಿಗಳನ್ನುನೆನಪಿನಲ್ಲಿಡಿ, ಹಣದ ಮುಗ್ಗಟ್ಟು ಎದುರಾಗಲ್ಲ

Guru Purnima Special - ನೀವು ಹಣವನ್ನು ಸಂಪಾದಿಸುತ್ತಿರಿ ಮತ್ತು ಅದನ್ನು ಸಂಪೂರ್ಣವಾಗಿ ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಮೂರ್ಖತನ. ಏಕೆಂದರೆ ಹಣ ಉಳಿತಾಯದ ಒಂದು ಉತ್ತಮ ಮಾರ್ಗವೆಂದರೆ, ಅದರ ಗರಿಷ್ಠ ಭಾಗವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದು. 

Written by - Nitin Tabib | Last Updated : Jul 23, 2021, 07:10 PM IST
  • ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಗುರು ಪೌರ್ಣಿಮೆಯ ಉತ್ಸವ ಆಚರಿಸಲಾಗುತ್ತದೆ.
  • ಈ ದಿನ ಗುರುವಿಗೆ ನಮನ ಸಲ್ಲಿಸಲಾಗುತ್ತದೆ.
  • ಗುರು ಅಥವಾ ಶಿಕ್ಷಕನೇ ವಿದ್ಯಾರ್ಥಿಯ ಜೀವನದ ಗುರಿ ನಿರ್ಧರಿಸುತ್ತಾರೆ.
Money Making Tips In Chanakya Niti: ಉಳಿತಾಯ ಹಾಗೂ ಹೂಡಿಕೆಯ ಈ ಸಂಗತಿಗಳನ್ನುನೆನಪಿನಲ್ಲಿಡಿ, ಹಣದ ಮುಗ್ಗಟ್ಟು ಎದುರಾಗಲ್ಲ title=
Money Making Tips In Chanakya Niti (File Photo)

Money Making Tips In Chanakya Niti - ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಗುರು ಪೌರ್ಣಿಮೆಯ (Guru Purnima 2021) ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಗುರುವಿಗೆ ನಮನ ಸಲ್ಲಿಸಲಾಗುತ್ತದೆ. ಗುರು ಅಥವಾ ಶಿಕ್ಷಕನೇ (Teacher) ವಿದ್ಯಾರ್ಥಿಯ ಜೀವನದ ಗುರಿ ನಿರ್ಧರಿಸುತ್ತಾರೆ. ಇಂತಹ ಮಹಾನ್ ಗುರುಗಳಲ್ಲಿ ಆಚಾರ್ಯ ಚಾಣಕ್ಯ (Acharya Chanakya) ಕೂಡ ಒಬ್ಬರು. ಅವರು ತಮ್ಮ ನೀತಿಗಳಿಂದಲೇ ಜನಮಾನಸದಲ್ಲಿ ಇಂದಿಗೂ ಕೂಡ ಖ್ಯಾತಿ ಹೊಂದಿದ್ದಾರೆ. ಅವರ ನೀತಿಗಳ ಮೇಲೆ ಭರವಸೆ ವ್ಯಕ್ತಪಡಿಸಲಾಗುತ್ತದೆ. ಅವರು ತೋರಿಸಿ ಕೊಟ್ಟ ದಾರಿ ಅನುಸರಿಸಿದರೆ ಜನರು ಇಂದಿಗೂ ಕೂಡ ಜನರು ಮೋಸ ಹೋಗುವುದಿಲ್ಲ ಎನ್ನಲಾಗುತ್ತದೆ. ಹಣಕಾಸಿನ ಕುರಿತು ಕೂಡ ಆಚಾರ್ಯ ಚಾಣಕ್ಯ ಕೆಲ ಮಹತ್ವದ (Financial Need) ನೀತಿಗಳನ್ನು ಹೇಳಿದ್ದಾರೆ. ಗಳಿಕೆ, ಖರ್ಚು, ಭೋಗ ಹಾಗೂ ಹೂಡಿಕೆಗೆ ಸಂಬಂಧಿಸಿದ ಚಾಣಕ್ಯನ ಈ ನೀತಿಯನ್ನು ಅರಿತುಕೊಂಡು ನೀವೂ ಕೂಡ ಸಿರಿವಂತರಾಗಬಕುದು ಮತ್ತು ಯಶಸ್ಸಿನ ಶಿಖರಕ್ಕೆ ತಲುಪಬಹುದು.

ಹಣ ಗಳಿಕೆ, ಉಳಿತಾಯ ಹಾಗೂ ಹೂಡಿಕೆಗೆ ಸಂಬಂಧಿಸಿದಂತೆ ಚಾಣಕ್ಯ ನೀಡಿರುವ ಗುರುಮಂತ್ರ ಇಲ್ಲಿದೆ
>> ತನ್ನ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿರುವ ಜಾಗದಲ್ಲಿ ಯಾವುದೇ ಓರ್ವ ವ್ಯಕ್ತಿ ವಾಸಿಸಬೇಕು. ಇದು ಆತನ ಜೀವನದಲ್ಲಿ ಎಂದಿಗೂ ಕೂಡ ಹಣಕಾಸಿನ ಮುಗ್ಗಟ್ಟು ಎದುರಾಗಳು ಬಿಡುವುದಿಲ್ಲ.

>> ನೀರಿನಂತೆ ಹಣ ವೆಚ್ಚ ಮಾಡುವ ಹಾಗೂ ತನ್ನ ಆಪತ್ಕಾಲದ ವೇಳೆ ಬೇಕಾಗುವ ಹಣವನ್ನು (Personal Finance) ಉಳಿತಾಯ ಮಾಡದ ವ್ಯಕ್ತಿ ಚಾಣಕ್ಯನ ಪ್ರಕಾರ ಮೂರ್ಖ ವ್ಯಕ್ತಿಯಾಗಿದ್ದಾನೆ. ಒಂದು ಸಮಯದ ಬಳಿಕ ಆತ ಕಷ್ಟಗಳನ್ನು ಎದುರಿಸುತ್ತಾನೆ. ಕಠಿಣ ಪ್ರಸಂಗವನ್ನು ಎದುರಿಸಲು ಹಣಕಾಸಿನ ಉಳಿತಾಯ ಮಾಡುವ ವ್ಯಕ್ತಿ ಬುದ್ಧಿಶಾಲಿ ಎಂಬುದು ಚಾಣಕ್ಯನ ಅಭಿಪ್ರ್ರಾಯ. 

ಇದನ್ನೂ ಓದಿ - Mutual Funds Vs PPF: 10,000 ರೂಪಾಯಿಗಳನ್ನು 2 ಕೋಟಿ ಮಾಡುವುದು ಹೇಗೆ! PPF-ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದು ಉತ್ತಮ

>> ಚಾಣಕ್ಯನ ಪ್ರಕಾರ ಹಣ ಗಳಿಕೆಗಾಗಿ ನಿಮ್ಮ ಹಣಕಾಸಿನ ಗುರಿ ತಂಬಾ ಮಹತ್ವದ್ದಾಗಿದೆ. ಗುರಿಯಿಲ್ಲದೆ ಯಾವುದೇ ವ್ಯಕ್ತಿ ಹಣಗಳಿಕೆ ಮಾಡಲು ಸಾಧ್ಯವಿಲ್ಲ. ಗುರಿ ಹಣ ಗಳಿಕೆಯಲ್ಲಿ ವ್ಯಕ್ತಿಗೆ ತುಂಬಾ ಸಹಕರಿಸುತ್ತದೆ. 

>> ನೀವು ಗಳಿಸುವ ಸಂಪೂರ್ಣ ಹಣವನ್ನು ಉಳಿತಾಯ (Saving) ಮಾಡುವುದು ಮೂರ್ಖತನ ಎಂಬುದು ಚಾಣಕ್ಯನ ಅಭಿಮತ. ಹಣ ಉಳಿತಾಯದ ಅತ್ಯಂತ ಉತ್ತಮ ಮಾರ್ಗವೆಂದರೆ, ಅದನ್ನು ವಿವಿಧ ಭಾಗಗಳಲ್ಲಿ ವಿಂಗಡಿಸಿ ಸರಿಯಾದ ಜಾಗದಲ್ಲಿ ಹೂಡಿಕೆ (Investment) ಮಾಡಬೇಕು.

>>ಉಪರ್ಜಿತಾನಾಂ ವಿತ್ತಾನಾಂ ತ್ಯಾಗ ಏವಹಿ ರಕ್ಷಣಾಂ, ತಡಾಗೋದರಸಂಸ್ಥಾನಾಂ ಪರಿಸ್ರಾವ್ ಇವಾಂಮ್ಭ್ಯಸಾಮ್ ಅರ್ಥಾತ್, ನಾವು ಗಳಿಕೆ ಮಾಡಿರುವ ಹಣದ ಬಲೆ ಮಾಡುವುದು ಅಥವಾ ಖರ್ಚು ಮಾಡುವುದೇ ಆ ಹಣದ ರಕ್ಷಣೆಗೆ ಸಮಾನ ಎಂದರ್ಥ.

ಇದನ್ನೂ ಓದಿ-Aadhaar ಆಧಾರಿತ ಆನ್‌ಲೈನ್ ಕೆವೈಸಿ ಮೂಲಕವೂ ತೆರೆಯಬಹುದು NPS ಖಾತೆ ತೆರೆಯಬಹುದು!

ಹಣವನ್ನು ದಾನ ಮಾಡಬೇಕು
ಹಣ ಗಳಿಕೆ ಮಾಡುವ ವ್ಯಕ್ತಿ ತನ್ನ ಹಣವನ್ನು ಸದುಪಯೋಗಪಡಿಸಬೇಕು ಎಂಬುದು ಆಚಾರ್ಯ ಚಾನಕ್ಯರ ಅಭಿಮತ. ಅವಶ್ಯಕತೆಗಿಂತ ಹೆಚ್ಚಿನ ಹಣ ಗಳಿಕೆ ಕೂಡ ಅನುಚಿತ. ಹೀಗಾಗಿ ಧನವನ್ನು ದಾನವಾಗಿ ನೀಡಬೇಕು. ಸರಿಯಾದ ಕೆಲಸಗಳಲ್ಲಿ ಹಣವನ್ನು ತೊಡಗಿಸಬೇಕು. ಒಂದು ವೇಳೆ ಯಾರಾದರು ಕಷ್ಟಪಟ್ಟು ಹಣವನ್ನು ಸಂಪಾದಿಸಿದರೆ ಹಾಗೂ ಅವರು ಅದರ ಬಳಕೆ ಮಾಡದೆ ಹೋದಲ್ಲಿ, ಅಂತಹ ಹಣದ ಲಾಭವೇನು? ಹಣದ ಸದ್ಬಳಕೆ ತುಂಬಾ ಅವಶ್ಯಕ ಎಂದು ಚಾಣಕ್ಯ ಹೇಳುತ್ತಾರೆ. 

ಇದನ್ನೂ ಓದಿ-Post Office: ಪಿಪಿಎಫ್‌ನಲ್ಲಿ 500 ರೂ.ಗಳಿಂದ ಹೂಡಿಕೆ ಪ್ರಾರಂಭಿ ಈ ಲಾಭ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News